[t4b-ticker]

ಅರುಣ್ ಕುಮಾರ್ ದಂಡಾವತಿಗೆ ಡಾಕ್ಟರೇಟ್ ಪದವಿ

Picture of RB NEWS

RB NEWS

Bureau Report

ಅರುಣ್ ಕುಮಾರ್ ದಂಡಾವತಿಗೆ 
ಡಾಕ್ಟರೇಟ್ ಪದವಿ


ಮೂಡುಬಿದಿರೆ: ಆಳ್ವಾಸ್ ಕಾಲೇಜಿನ
ಸ್ನಾತಕೋತ್ತರ ರಸಾಯನಶಾಸ್ತ್ರ
ವಿಭಾಗದ ಸಹಾಯಕ 
ಪ್ರಾಧ್ಯಾಪಕ ಅರುಣ್ ಕುಮಾರ್ 
ದಂಡಾವತಿ ಅವರಿಗೆ ಬೆಳಗಾವಿಯ 
ವಿಶ್ವೇಶ್ವರಯ್ಯ ತಾಂತ್ರಿಕ 
ವಿಶ್ವವಿದ್ಯಾಲಯ ಡಾಕ್ಟರೇಟ್  
ಪದವಿ ಪ್ರದಾನ ಮಾಡಿದೆ.

ಇವರು “Synthesis,
Characterization and
Nonlinear Optical
Properties of Some
New Terphenyl Derivatives”  
ಎಂಬ ವಿಷಯದ ಕುರಿತು 
ಸಂಶೋಧನಾ ಮಹಾಪ್ರಬಂಧವನ್ನು 
ಸಲ್ಲಿಸಿದ್ದು, ಆಳ್ವಾಸ್ ಇನ್‌ಸ್ಟಿಟ್ಯೂಟ್ 
ಆಫ್ ಇಂಜಿನಿಯರಿoಗ್ ಆ್ಯಂಡ್ 
ಟೆಕ್ನಾಲಜಿ ಕಾಲೇಜಿನ ರಸಾಯನಶಾಸ್ತ್ರ 
ವಿಭಾಗದ ಪ್ರಾಧ್ಯಾಪಕ 
ಡಾ. ಸಂಶುದ್ದೀನ್ ಸೆರಂತಿಮಠರವರ 
ಮಾರ್ಗದರ್ಶನದಲ್ಲಿ ಸಂಶೋಧನಾ 
ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಅರುಣ್ ಕುಮಾರ್ ದಂಡಾವತಿ
ಯವರು ಕೊಪ್ಪಳ ಜಿಲ್ಲೆಯ 
ಗಂಗಾವತಿ ನಿವಾಸಿಗಳಾದ 
ಫ್ರಾನ್ಸಿಸ್ ಹಾಗೂ ರತ್ನಮ್ಮ 
ದಂಪತಿಯ ಹಿರಿಯ ಪುತ್ರ. 
ಇವರ ಈ ಶೈಕ್ಷಣಿಕ ಸಾಧನೆಗೆ 
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 
ಆಡಳಿತ ಮಂಡಳಿ, ಪ್ರಾಂಶುಪಾಲರು, 
ಬೋಧಕ ಹಾಗೂ ಬೋಧಕೇತರ 
ಸಿಬ್ಬಂದಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top