



ಅಯ್ಯಪ್ಪ ಮಂದಿರದಲ್ಲಿ ರಜತ ವಿಗ್ರಹ ಕದ್ದೊಯ್ದು ಆರೋಪಿಯ ಬಂಧನ
ಕಾಸರಗೋಡು : ಮಾಯಿಪ್ಪಾಡಿ ಸಮೀಪದ ಮಾನ್ಯದ ಅಯ್ಯಪ್ಪ ಮಂದಿರದಲ್ಲಿ ರಜತ ವಿಗ್ರಹ ಕದ್ದೊಯ್ದು ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಇಬ್ರಾಹಿಂ ಕಲಂದರ್ ಎಂದು ತಿಳಿದುಬಂದಿದೆ.
ಆತ ಅಂತರಾಜ್ಯ ಕಳ್ಳನಾಗಿದ್ದು 20ಕ್ಕೂ ಮಿಕ್ಕಿ ಪ್ರಕರಣಗಳಿದ್ದು, ಕರ್ನಾಟಕ ಮೂಲದವನಾಗಿದ್ದು, ಧಾರ್ಮಿಕ ಕೇಂದ್ರಗಳನ್ನೇ ಗುರಿಯಾಗಿರಿಸಿ ಕಳವು ಕೃತ್ಯ ಎಸಗುತ್ತಿದ್ದನೆಂಬ ಅಂಶ ಬೆಳಕಿಗೆ ಬಂದಿದೆ.
ಆರೋಪಿ ಇಬ್ರಾಹಿಂ ಕಲಂದರ್ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ವಾಸಿಸುತ್ತಿದ್ದಾನೆ. ದ.ಕ ಜಿಲ್ಲೆಯ ಕಬಕ ಕೊಯ್ದ ಕಳಾಯಿ ನಿವಾಸಿಯಾಗಿದ್ದಾನೆ. ಈತನನ್ನು ಬದಿಯಡ್ಕ ಎಸ್.ಐ ನೇತೃತ್ವದಲ್ಲಿ ಉಪ್ಪಳದ ಅಡಗುದಾಣದಿಂದ ಬಂಧಿಸಲಾಗಿತ್ತು.
ಘಟನೆಯ ವಿವರ...

ಬದಿಯಡ್ಕ ಠಾಣಾ ವ್ಯಾಪ್ತಿಯ ಮಾನ್ಯ ಅಯ್ಯಪ್ಪ ಮಂದಿರದಿಂದ ನ.3ರಂದು ಮುಂಜಾನೆ ಬಾಗಿಲು ಮುರಿದು ರೂ. 6ಲಕ್ಷ ಮೌಲ್ಯದ ರಜತ ಲೇಪಿತ ಉಬ್ಬುಶಿಲ್ಪದ ವಿಗ್ರಹ ಕದ್ದೊಯ್ಯಲಾಗಿತ್ತು. ಕದ್ದೊಯ್ದ ವಿಗ್ರಹ ಕಳ್ಳತನದಲ್ಲಿ ಜೊತೆಯಾಗಿದ್ದ ಇನ್ನೊಬ್ಬನ ವಶ ಇದೆಯೆಂದು ಆರೋಪಿ ತಿಳಿಸಿದ್ದು, ಕಳ್ಳತನಕ್ಕೆ ಬಳಸಿದ ಆಲ್ಟೋ ಕಾರು ವಶಪಡಿಸಲಾಗಿದೆ.






































