ಅಯ್ಯಪ್ಪ ಮಂದಿರಕ್ಕೆ ರೂ. 1 ಲಕ್ಷ ದೇಣಿಗೆ
ಮಂಗಳೂರು: ಕೋಟೆಕಾರು ಅಯ್ಯಪ್ಪ ಮಂದಿರದ ಸುವರ್ಣ ಮಹೋತ್ಸವದ ಪೂರ್ವ ಭಾವಿಸಭೆಯು ಸಪ್ಪೆಂಬರ್ 1 ರಂದು ಅಯ್ಯಪ್ಪ ಮಂದಿರದಲ್ಲಿ ಜರುಗಿತು.
ಮಂದಿರದ ಗುರುಸ್ವಾಮಿ ಅಂಗಪ್ಪ ಗಟ್ಟಿ ಅಧ್ಯಕ್ಷತೆ ವಹಿಸಿದರು.
ಇದೇ ಸಂದರ್ಭದಲ್ಲಿ ವಿಷು ಸಂಕ್ರಾಂತಿ ಅಯ್ಯಪ್ಪ ಮಾಲಾಧಾರಿಗಳ ತಂಡವು ರೂ. 1ಲಕ್ಷ ಮೊತ್ತವನ್ನು ದೇಣಿಗೆ ನೀಡಿ, ಸುವರ್ಣ ಮಹೋತ್ಸವಕ್ಕೆ ಪೂರ್ಣ ರೀತಿಯಲ್ಲಿ ಸಹಕಾರ ನೀಡುವುದಾಗಿ ಭಕ್ತವೃಂದದವರು ತಿಳಿಸಿದ್ದಾರೆ.






































