ಅಮ್ನಾಯ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಆಟ-ಕೂಟ-ನಾಟ್ಯ
ಮೂಡುಬಿದರೆ: ಇಲ್ಲಿಗೆ ಸಮೀಪದ ಸಂಪಿಗೆ ಶ್ರೀ ದುರ್ಗಾ ಜ್ಯೋತಿಷ್ಯಾಲಯದಲ್ಲಿ ಜರಗಿದ ಅಮ್ನಾಯ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆಯ ಪ್ರಥಮ ವಾರ್ಷಿಕೋತ್ಸವದಲ್ಲಿ ಆಟ-ಕೂಟ-ನಾಟ್ಯ ಕಾರ್ಯಕ್ರಮವನ್ನು ಮೂಡುಬಿದಿರೆ ಭಾರತ ಭೂಷಣ ಡಾ. ಚಾರು ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಸ್ವಾಮೀಜಿ ದೀಪ ಬೆಳಗಿ ಉದ್ಘಾಟಿಸಿದರು.


ಸಂಪಿಗೆ ಅಂತಹ ಗ್ರಾಮೀಣ ಪ್ರದೇಶದಲ್ಲಿ ಡಾ. ಯೋಗಿ ಪಿ. ಸುಧಾಕರ ತಂತ್ರಿ ಅವರು ನಡೆಸುತ್ತಿರುವ ಈ ಕಾರ್ಯಕ್ರಮ ಬಹಳ ಸ್ತುತ್ಯಾರ್ಹ ಎಂದರು. ವೇದಿಕೆಯಲ್ಲಿ ಹಿರಿಯ ವೈದಿಕ ಪುರೋಹಿತ ಜಯಕರ ಆಚಾರ್ಯ, ಪ್ರೆಸ್ ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ ಉಪಸ್ಥಿತರಿದ್ದರು.
ತರುವಾಯ ಡಾ. ಯೋಗಿ ಸುಧಾಕರ ತಂತ್ರಿ ಅವರ ಕಥಾನ ನಿರೂಪಣೆಯ ಬಳ್ಳಾರಿ, ಮಂಜುನಾಥ್ ಭಟ್ ಅವರ ಕಾವ್ಯದ ವಿರಚಿತ ಪಂಚಮುಖಿ ರುದ್ರಾಕ್ಷಿ ಮಹಾತ್ಮ್ಯಮ್ ಯಕ್ಷಗಾನ ಬಯಲಾಟ ಶಿವಕುಮಾರ್ ರವರ ಮೂಡುಬಿದಿರೆ-ಸಂಪಿಗೆ ಬಳಗದ ಮಕ್ಕಳ ಮೇಳದಿಂದ ಪ್ರಪ್ರಥಮ ಪ್ರದರ್ಶನವಾಗಿ ಯಶಸ್ವಿಯಾಗಿ ಮೂಡಿಬಂದಿತು.

ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕ ಬೆಳಗಾಂ ನ ಪ್ರಕಾಶ್ ಮರೆಹಾಳ್ ರನ್ನು ಸಂಮಾನಿಸಲಾಯಿತು.
ತರುವಾಯ ಮೈಸೂರು ಚಂದ್ರಿಕಾ ಆಕಾಶ್ ಅವರ ಭರತನಾಟ್ಯ ಕಾರ್ಯಕ್ರಮ ನಡೆಯಿತು.



ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಯಕ್ಷಮಿತ್ರರಿಗೆ ಪ್ರೋತ್ಸಾಹ ನೀಡುತ್ತಿರುವ ಡಾ. ಯೋಗಿ ಸುಧಾಕರ ತಂತ್ರಿ ಪ್ರಾತಃ ಸ್ಮರಣೀಯರು. ಸದೃಢ ಸಾಹಿತ್ಯದ ಯಕ್ಷಗಾನ ಸಂಸ್ಕೃತಿ ಗ್ರಾಮೀಣ ಭಾಗದಲ್ಲಿ ಇನ್ನೂ ಹೆಚ್ಚು ಬೆಳೆದು ಬರಬೇಕೆಂದು ಆಶಿಸಿದರು. ಯೋಗಿ ಪಿ ಸುಧಾಕರ ತಂತ್ರಿ ಶುಭಾಶಂಸನೆ ಗೈದರು.

ಇದೇ ಸಂದರ್ಭದಲ್ಲಿ 60 ವರ್ಷ ಯಕ್ಷ ತಿರುಗಾಟಗೈದ 199 ನೇ ಸಂಮಾನ ಪಡೆಯುತ್ತಿರುವ ಯಕ್ಷಗಾನದ ಹಿರಿಯ ಕಲಾಚೇತನ ಕೊಳ್ತಿಗೆ ನಾರಾಯಣ ಗೌಡ ಅವರನ್ನು ಸಂಮಾನ ಮಾಡಲಾಯಿತು. ವೇದಿಕೆಯಲ್ಲಿ ಉದ್ಯಮಿಗಳು ಧನಲಕ್ಷ್ಮಿ ಶ್ರೀಪತಿ ಭಟ್, ಧರ್ಮಸ್ಥಳ ಭುಜಬಲಿ, ನಿವೃತ್ತ ಕರ್ನಾಟಕ ಬ್ಯಾಂಕ್ ಜಿ.ಎಂ. ಚಂದ್ರಶೇಖರ್ ರಾವ್, ಯಕ್ಷ ಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ, ಜವನೆರ್ ಬೆದ್ರ ಫೌಂಡೇಶನ್ ಅಧ್ಯಕ್ಷ ಅಮರಕೋಟೆ ಹಾಜರಿದ್ದರು.
ಅಮ್ನಾಯ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆಯ ಅಧ್ಯಕ್ಷ ಡಾ.ವಿನಾಯಕ ಭಟ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಭಂಡಾರ್ಕರ್ ಒಂದು ವರ್ಷದ ಪಕ್ಷಿ ನೋಟವನ್ನು ಪ್ರಸ್ತುತ ಪಡಿಸಿದರು. ಕೃಷ್ಣಮೂರ್ತಿ ಮಯಣ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ನೆಲ್ಲಿಮಾರು ವಂದಿಸಿದರು.
ಕವಿ ಪಾರ್ತಿಸುಬ್ಬ ರ ಮಾಯಾ ಮಂಥರೆ ಹಾಗೂ ಶ್ರೀ ಪಾದುಕೆ ತಾಳಮದ್ದಳೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಫೋಟೋ ವರದಿ: ರಾಯಿ ರಾಜ ಕುಮಾರ ಮೂಡುಬಿದಿರೆ.































