ಅಮೃತಯೋಜನೆ ಕಾರ್ಕಳದ ನಾಗರಿಕರ ಪಾಲಿಗೆ ವಿಷವಾಗದಿರಲಿ!

Picture of RB NEWS

RB NEWS

Bureau Report

  • ಆರ್.ಬಿ.ಜಗದೀಶ್


ಇದಕ್ಕೆ ಇಂಬುನೀಡಿರುವoತೆ ಕಾರ್ಕಳ ನಗರದಲ್ಲಿ ಅಮೃತಯೋಜನೆಯ ಹೆಸರಿನಲ್ಲಿ ಅಳವಡಿಸುತ್ತಿರುವ ಪೈಪ್ ಲೈನ್ ಕಾಮಗಾರಿಯ ವೈಫಲ್ಯದಿಂದ ಹಲವೆಡೆಗಳಲ್ಲಿ ಒಳಚರಂಡಿ ಚೆಂಬರ್ ಹಾಗೂ ಅದರಪೈಪ್ ಒಡೆದು ಹೋಗಿದ್ದು, ದುರಸ್ಥಿ ಕಾರ್ಯ ನಡೆಸದೇ ಹೋದುದರಿಂದ ಹಲವು ಬಾವಿಗಳಿಗೆ ಒಳಚರಂಡಿಯ ತ್ಯಾಜ್ಯ ನೀರು ವಿಲೀನಗೊಂಡಿದೆ. ದೈನಂದಿನ ಬಳಕೆಗೆ ಹಾಗೂ ಆಹಾರ ಸಿದ್ಧಪಡಿಸಲು ಇದ್ದಂತಹ ಬಾವಿಯ ನೀರು ಮಾಳಿನ್ಯಗೊಂಡಿರುವುದು ನಾಗರಿಕರು ಆಕ್ರೋಶಗೊಂಡಿದ್ದಾರೆ.


ನಗರದ ರಾಮಸಮುದ್ರದಿಂದ ನ್ಯಾಯಾಲಯ ರಸ್ತೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಅಮೃತಯೋಜನೆಯಡಿಯಲ್ಲಿ ಬೃಹತ್ ಪೈಪ್ ಲೈನ್ ಅಳವಡಿಸಲಾಗಿದೆ. ಕೆಲವೆಡೆಗಳಲ್ಲಿ ಇನ್ನು ಹೊಂಡ ಮುಚ್ಚದೇ ಹಾಗೆಯೇ ಬಿಡಲಾಗಿದೆ. ಹೊಂಡ ಮುಚ್ಚಿರುವ ಭಾಗಗಳಿಗೆ ಜಲ್ಲಿ ತುಂಬಿಸಿ ನೀರು ಹಾಯಿಸದೇ ಹಾಗೆಯೇ ಬಿಟ್ಟಿರುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಸಂಪೂರ್ಣ ಧೂಳುಮಯವಾಗಿರುವುದರಿಂದ ಕೆಲ ನಾಗರಿಕರಲ್ಲಿ ಆರೋಗ್ಯ ಸಮಸ್ಸೆ ಎದುರಾಗಿರುವ ಅಂಶ ಬೆಳಕಿಗೆ ಬಂದಿದೆ.
ಇದೇ ರಸ್ತೆಯಲ್ಲಿ ಅಮೃತಯೋಜನೆಯಡಿಯಲ್ಲಿ ಪೈಪ್ ಅಳವಡಿಸಿದ ಸಂದರ್ಭದಲ್ಲಿ ಎಣ್ಣೆಹೊಳೆ ಏತನೀರಾವರಿ ಯೋಜನೆಯ ಬೃಹತ್ ಪೈಪ್ ಒಡೆದು ಹಾಕಿ ವಾರ ಕಳೆದರೂ ದುರಸ್ಥಿ ಪಡಿಸದ ಪರಿಣಾಮವಾಗಿ ಭಾರೀ ಪ್ರಮಾಣದಲ್ಲಿ ಕುಡಿಯುವ ನೀರು ಪೋಲಾಗುತ್ತಿದೆ.
ಅಮೃತಯೋಜನೆಯ ಕಾಮಗಾರಿ ತೆಳ್ಳಾರು ರಸ್ತೆಗೆ ವಿಸ್ತರಣೆ ಮಾಡಿದ ಸಂದರ್ಭದಲ್ಲಿ ಅಲ್ಲಿ ಒಂದಿಷ್ಟು ಸಮಸ್ಸೆ ಮತ್ತಷ್ಟು ಬಿಗಡಾಯಿಸಿದೆ. ಒಳಚರಂಡಿ ಚೇಂಬರ್ ಹಾನಿಗೊಳಿಸಿ ಪೈಪ್ ಲೈನ್ ಅಳವಡಿಸಿದ್ದು, ತಳಭಾಗದಲ್ಲಿ ಒಳವರಂಡಿ ಪೈಪ್ ಹಾನಿಗೊಳಗಾಗಿ ಹರಿದು ಹೋಗುವ ತ್ಯಾಜ್ಯ ನೀರು ಪರಿಸರದ ಹಲವು ಬಾವಿಗಳಿಗೆ ಲೀನವಾಗಿದೆ.


ಕಾರ್ಕಳ ಪುರಸಭೆ, ಕರ್ನಾಟಕ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಮಂಡಳಿ ಹಾಗೂ ಎಣ್ಣೆಹೊಳೆ ನೀರಾವರಿ ಯೋಜನೆಯ ಅಧಿಕಾರಿಗಳ ಸಮನ್ವಯ ಕೊರತೆ ಪ್ರಮುಖ ಕಾರಣವಾಗಿದೆ ಎಂಬವುದು ಮೇಲ್ನೋಟಕ್ಕೆ ಕಂಡುಬರುವುದು ನೈಜವಿಚಾರವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top