ಅಮಿತ್ ಶಾ ಪ್ರಜಾಪ್ರಭುತ್ವದ ಅವಮಾನಿ : ಜಯನ್ ಮಲ್ಪೆ

Picture of RB NEWS

RB NEWS

Bureau Report


ಉಡುಪಿ: ಅಮಿತ್ ಶಾ ಎನ್ನುವ ಈ ದೇಶದ ಗೃಹಮಂತ್ರಿ ತನ್ನ ಮೂರ್ಖತನದ ಪರಮಾವಧಿಯನ್ನು ಪ್ರದರ್ಶಿಸಿದ್ದಾರೆ. ಪ್ರಜಾಪ್ರಭುತ್ವದ ಕಾವಲುಗಾರ ಆಗಬೇಕಾಗಿದ್ದ ಅವರು ಪ್ರಜಾಪ್ರಭುತ್ವವನ್ನು ಅವಮಾನಿಸಿದ್ದಾರೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ.


ಅವರು ಮಂಗಳವಾರ ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾ ಘಟಕ ಆಯೋಜಿಸಿದ ಅಂಬೇಡ್ಕರ್‌ಗೆ ಅಪಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾಹರನ್ನು ಸಂಪುಟದಿAದ ಕೈಬಿಡುವಂತೆ ಆಗ್ರಹಿಸಿ ಅಜ್ಜರಕಾಡು ಹುತ್ತಾತ್ಮ ಸ್ಮಾರಕ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ,ಮನುಷ್ಯ ವಿರೋಧಿ ಹಾಗೂ ಸಮಾನತೆಯ ವಿರೋಧಿಯಾಗಿರುವ ಅಮಿತ್ ಶಾಹ ಮತ್ತು ಆತನ ಪರಿವಾರ ಬ್ರಾಹ್ಮಣ್ಯದ ಅಜೆಂಡಾವನ್ನು ಪ್ರತಿಪಾಧಿಸುತ್ತಿದ್ದಾರೆ. ಈ ಕಾರಣಕ್ಕೆ ಅಂಬೇಡ್ಕರ್‌ರವರನ್ನು, ಸಂವಿಧಾನವನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ ಟೀಕಿಸಿದ್ದರು.


ಹಿರಿಯ ದಲಿತ ಚಿಂತಕ ನಾರಾಯಣ ಮಣೂರು ಮಾತನಾಡಿ, ವೈಧಿಕವಾದ ಪ್ರತಿಪಾದಿಸುವ ಗೃಹ ಮಂತ್ರಿ ಅಮಿತ್ ಶಾ ಅವರ ವಿಷದ ಮನಸ್ಥಿತಿಯಿಂದ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರನ್ನು ಅತ್ಯಂತ ಲೇವಡಿ ಮಾಡುವ ಇವರನ್ನು ಸಂಪುಟದಿoದ ವಜಾಮಾಡಬೇಕು. ಈ ದೇಶದ ಬಹುಜನರನ್ನು ಎರಡನೇ ದರ್ಜೆಯ ದೃಷ್ಟಿಯಿಂದ ನೋಡುವ ಈ ಸಂಘ ಪರಿವಾರ ಜಾತಿ ಜಾತಿಯ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ ಎಂದರು.


ಸಹಬಾಳ್ವೆಯ ನಾಯಕ ಅಮೃತ್ ಶೆಣೈ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಆಡಳಿತ ನಡೆಸುವವರು ಈ ಸಂವಿಧಾನವನ್ನು ಹೇಗೆ ನಾಶಮಾಡಬಹುದು ಚಿಂತಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಹೆಸರಿಲ್ಲದಂತೆ ಮಾಡುವ ಕೆಲಸದಲ್ಲಿ ಅಮಿತ್ ಶಾಹ ತೊಡಗಿದ್ದಾರೆ. ಒಂದು ರೀತಿಯಲ್ಲಿ ಇದು ಆರ್‌ಎಸ್‌ಎಸ್‌ನ ಮಾನಸಿಕತೆಯ ಪ್ರದರ್ಶನ ಎಂದರು.
ಮನುಸ್ಮೃತಿ ಪುಸ್ತಕಕ್ಕೆ ಬೆಂಕಿ ಹಚ್ಚಿ ಮಾತನಾಡಿದ ದಸಂಸ ಭೀಮವಾದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹಾವಂಜೆ ಮಾತನಾಡಿ, ಮೀಸಲಾತಿಯ ಲಾಭ ಪಡೆದ ಜನಪ್ರತಿನಿಧಿಗಳು ಅಂಬೇಡ್ಕರ್‌ಗೆ ದ್ರೋಹ ಎಸೆದ ಪರಿಣಾಮ ಅಮಿತ್ ಶಾಹನಂತವರು ಸಂವಿಧಾನದ ವಿರುದ್ಧ ಮತ್ತು ಅಂಬೇಡ್ಕರ್ ವಿರುದ್ದ ಮಾತನಾಡುವಂತಾಗಿದೆ ಎಂದರು.
ಬಹುಜನ ಪಕ್ಷದ ಜಿಲ್ಲಾಧ್ಯಕ್ಷ ವಕೀಲ ಮಂಜುನಾಥ ಮತ್ತು ದಲಿತ ಹಕ್ಕುಗಳ ಹೋರಾಟ ಸಮಿತಿಯ ಸಂಜೀವ ಬಳ್ಕೂರು ಮಾತನಾಡಿದರು.


ಪ್ರತಿಭಟನೆಯಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೋನಾಲ್ಡ್ ಪ್ರವೀಣ್ ಕುಮಾರ್, ಮಹಾಬಲ ಕುಂದರ್, ತೆಂಕನಿಡಿಯೂರು ಪಂಚಾಯತ್ ಅಧ್ಯಕ್ಷೆ ಶೋಭಾ ನಾಯ್ಕ್, ಸತೀಶ್ ಮಂಚಿ, ಲಕ್ಷö್ಮಣ ಪೂಜಾರಿ ಅಂಬಲಪಾಡಿ ಪ್ರಭಾಕರ್ ಆಚಾರ್ಯ, ಧನುಂಜಯ, ಪ್ರಥ್ವಿರಾಜ್ ಶೆಟ್ಟಿ, ವೆಂಕಟೇಶ್ ಕುಲಾಲ್, ಮಂಜುನಾಥ ಹೇರೂರು, ಗಿರೀಶ್ ಉದ್ಯಾವರ, ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ದಲಿತ ಮುಖಂಡರಾದ ಆನಂದ ಬ್ರಹ್ಮಾವರ, ಕೃಷ್ಣ ಪಡುಬಿದ್ರಿ, ಗುಣವಂತ, ರಾಮ ಮೈಯಾಡಿ, ಪ್ರಶಾಂತ್ ತೊಟಂ, ಶೋಭಾ ಜಯಸಾಲ್ಯಾನ್, ರವಿ ಲಕ್ಷಿö್ಮನಗರ, ಸತೀಶ್ ಕಪ್ಪೆಟ್ಟು, ಸಾಧು ಚಿಟ್ಪಾಡಿ, ದೀಪಕ್, ಸುಶೀಲ್ ಕೊಡವೂರು, ಸುಕೇಶ್, ಹರೀಶ್ ಸಾಲ್ಯಾನ್, ಪ್ರಸಾದ್ ಮಲ್ಪೆ ಮುಂತಾದವರು ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top