ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್ ‘ಹಸ್ತ’ಕ್ಷೇಪ : ಶಾಸಕ ಉಮಾನಾಥ ಕೋಟ್ಯಾನ್ ಗರಂ!

Picture of RB NEWS

RB NEWS

Bureau Report

ಮೂಡುಬಿದಿರೆ: ಕ್ಷೇತ್ರದ ಶಾಸಕನಾಗಿ ಸುಮಾರು 310 ಮಂದಿಗೆ ಹಕ್ಕುಪತ್ರ ನೀಡಬೇಕೆಂದು ಮಂಗಳವಾರಕ್ಕೆ ದಿನ ನಿಗದಿಪಡಿಸಿದ್ದೆ, ಅದಕ್ಕಾಗಿ ಐದಾರು ತಿಂಗಳು ಅಧಿಕಾರಿಗಳಲ್ಲಿ ಚರ್ಚಿಸಿ ಕೆಲಸ ಮಾಡಿದ್ದೆ , ಆದರೆ ಇದನ್ನರಿತ ಕಾಂಗ್ರೆಸ್ ನವರು ರಾಜಕೀಯ ಮಾಡಲೆಂದೇ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಹಕ್ಕುಪತ್ರ ನೀಡಲು ನಿರ್ಧರಿಸಿದ್ದಾರೆ. ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುತ್ತಿದ್ದು ಅವರ ಕೈಯಿಂದಲೇ ಕೊಡಿಸುವ ಸಿದ್ಧತೆ ಮಾಡಿದ್ದಾರೆ. ಆ ದಿನ ನಾನು ಮೂಡುಬಿದಿರೆಯಲ್ಲಿ ಇರುವುದಿಲ್ಲ. ನನ್ನ ಕ್ಷೇತ್ರದ ಬಡಜನರಿಗೆ ಹಕ್ಕುಪತ್ರಗಳನ್ನು ನನ್ನ ಕೈಯಿಂದಲೇ ನೀಡಬೇಕೆನ್ನುವ ನನ್ನ ಇಚ್ಚೆ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ‘ಹಸ್ತ’ಕ್ಷೇಪ ಮಾಡುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅವರು ಆರೋಪಿಸಿದ್ದಾರೆ.

ಇಂದು ಅವರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಕ್ಕುಪತ್ರ ವಂಚಿತರಿಗೆ ಹಕ್ಕುಪತ್ರ ನೀಡಬೇಕು,ಬಡಜನರಿಗೆ ಅದೊಂದು ದೊಡ್ಡ ಆಸ್ತಿ ಇದ್ದಂತೆ,ಎಲ್ಲರೂ ಸಂತೋಷದಿಂದ ಇರಬೇಕೆಂದು ಕಳೆದ ಆರು ತಿಂಗಳಿಂದ ಪ್ರಯತ್ನ ಪಟ್ಟಿದ್ದೆ,ಕಾಂಗ್ರೆಸ್ ನವರು ಉಸ್ತುವಾರಿ ಸಚಿವರಿಂದ ಕೊಡಿಸುತ್ತಾರೆ ಎನ್ನುವ ವಿಚಾರ ತಹಶೀಲ್ದಾರ್ ಅವರಿಂದ ತಿಳಿದು ಬಂತು ‘ ಎಂದು ಹೇಳಿದರು.

ಕಳೆದ ಅವಧಿಯಲ್ಲಿ ಸಾಕಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಈ ಬಾರಿ ಸರಕಾರ ಅನುದಾನ ಸಮರ್ಪಕವಾಗಿ ಬಿಡುಗಡೆಗೊಳಿಸುತ್ತಿಲ್ಲ. ರಸ್ತೆ ರಿಪೇರಿಗೆಂದು ಒಂದೈದು ಲಕ್ಷ ಬೇಕಾದರೂ ಸರಕಾರದಿಂದ ಸಿಗುತ್ತಿಲ್ಲವೆಂದು ಹೇಳಿದ ಅವರು, ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ರಾಜಕೀಯ ಮಾಡಿದವನಲ್ಲ.ಕಾಂಗ್ರೆಸ್ ನವರು ಅಭಿವೃದ್ಧಿ ವಿಚಾರದಲ್ಲಿ ಅಡ್ಡ ಬರಬಾರದೆಂದು ಹೇಳಿದರು.

ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖಂಡರಾದ ಶಾಂತಿಪ್ರಸಾದ್ ಹೆಗ್ಡೆ, ರಂಜಿತ್ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top