ಅಭಿವೃದ್ಧಿಯ ಹೆಜ್ಜೆಯನ್ನು ಇರಿಸುತ್ತಿರುವುದು ಯೋಜನೆಯ ಇನ್ನೊಂದು ವೈಶಿಷ್ಟ್ಯತೆ

Picture of RB NEWS

RB NEWS

Bureau Report

ಹೆಬ್ರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಮೂಲ ಸ್ವರೂಪವನ್ನು ಬಿಟ್ಟುಕೊಡದೆ ಕಾಲಕ್ಕೆ ತಕ್ಕಂತೆ ತನ್ನ ಕರ್ತವ್ಯವನ್ನು ಸುಧಾರಿಸಿಕೊಳ್ಳುತ್ತಾ ಹೋಗಿದೆ, ಇದರಿಂದಾಗಿ ಇದೀಗ ಯೋಜನೆಯಿಂದ ಕೃಷಿಕರಿಗೆ ಮಹಿಳೆಯರಿಗೆ ಯುವಕ ಯುವತಿಯರಿಗೆ ದುಶ್ಚಟಗಳಿಂದ ಬಳಲುತ್ತಿರುವ ಜನರಿಗೆ ಅನಾರೋಗ್ಯ ಪೀಡಿತರಿಗೆ ದುಡಿಯುವ ಸಾಮರ್ಥ್ಯವಿಲ್ಲದವರಿಗೆ ಮತ್ತು ವಿದ್ಯಾರ್ಥಿ ವರ್ಗಕ್ಕೆ ಸೌಲಭ್ಯಗಳನ್ನು ಸಿಗುವಂತೆ ಆಗಿದೆ.
ಸಮಾಜದ ಒಳಿತನ್ನು ಬಯಸುವ ಎಲ್ಲರ ಜೊತೆಯಲ್ಲಿ ಸೇರಿಕೊಂಡು ಅಭಿವೃದ್ಧಿಯ ಹೆಜ್ಜೆಯನ್ನು ಇರಿಸುತ್ತಿರುವುದು ಯೋಜನೆಯ ಇನ್ನೊಂದು ವೈಶಿಷ್ಟ್ಯತೆ ಯಾಗಿದೆ ಎಂದು ಯೋಜನಾಧಿಕಾರಿ ಲೀಲಾವತಿ ಹೇಳಿದರು.‌

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೆಬ್ರಿ ತಾಲೂಕು ಹೆಬ್ರಿ ವಲಯದ ಕಾಸನ್ ಮಕ್ಕಿ ಒಕ್ಕೂಟದ ವ್ಯಾಪ್ತಿಯ, ಮುರ್ಸೆ ಸಂಘದ 24ನೇ ವರ್ಷದ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ
24ನೇ ವರ್ಷದ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸತ್ಕಾರ್ಯದೊಂದಿಗೆ ಧರ್ಮ ಜಾಗೃತಿಯಲ್ಲಿ ತೊಡಗಿಸಬೇಕೆಂದು ನಾಡ್ಪಾಲು ಗ್ರಾಮ ಪಂಚಾಯತ್ತಿನ ಮಾಜಿ ಅಧ್ಯಕ್ಷ
ರಾಮಣ್ಣ ಪೂಜಾರಿ ಅಭಿಪ್ರಾಯಪಟ್ಟರು.

ನಾಡ್ಪಾಲು ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು..

ಇದೇ ಸಂದರ್ಭದಲ್ಲಿ, ಕೇಂದ್ರ ಸಮಿತಿ ಒಕ್ಕೂಟ ಹೆಬ್ರಿಯ ಅಧ್ಯಕ್ಷ ಪ್ರವೀಣ್ ಹೆಗ್ಡೆ , ಹಾಸನಕ್ಕಿ ಒಕ್ಕೂಟದ ಅಧ್ಯಕ್ಷರ ರೇವತಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ,
ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ,
ಮೇಲ್ವಿಚಾರಕ ಹೆಚ್ ಉದಯ್, ಸೇವಾ ಪ್ರತಿನಿಧಿ ರಾಘವೇಂದ್ರ, ಪ್ರಗತಿ ಬಂದು ಸ್ವಸಹಾಯ ಸಂಘಗಳ ಸದಸ್ಯರು ಊರ ಗ್ರಾಮಸ್ಥರು ಉಪಸ್ಥಿತರಿದ್ದರು…

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top