ಅಭಿನವ ಭಾರತ ಕಾರ್ಕಳ ವತಿಯಿಂದ
ಕಾರ್ಗಿಲ್ ವಿಜಯೋತ್ಸವ -25
ಕಾರ್ಕಳ : ಜಮ್ಮು ಕಾಶ್ಮೀರದ ಕಾರ್ಗಿಲ್ ನಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯಶಸ್ವಿ ಅಪರೇಷನ್ ವಿಜಯ್ ಕಾರ್ಯಾಚರಣೆಗೆ ಇಂದು ಬೆಳ್ಳಿ ಹಬ್ಬದ ಸುಸಂದರ್ಭವನ್ನು ಕಾರ್ಕಳದಲ್ಲಿ ಆಚರಿದಲಾಯಿತು.

ಈ ಒಂದು ಅವಿಸ್ಮರಣೀಯ ವಿಷಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಭಾರತೀಯ ವೀರ ಯೋಧರನ್ನು ಸ್ಮರಿಸುವ ಮತ್ತು ಅವರಿಗೆ ಗೌರವಾರ್ಪಣಾ ಕಾರ್ಯಕ್ರಮವು ಇಂದು ಕಾರ್ಕಳ ಆನೆಕೆರೆ ಉದ್ಯಾನವನದಲ್ಲಿ ಇರುವ ಅಮರ್ ಜವಾನ್ ಸ್ಮಾರಕದಲ್ಲಿ ಅಭಿನವ ಭಾರತ ಕಾರ್ಕಳ ಇದರ ಆಶ್ರಯದಲ್ಲಿ ನಡೆಯಿತು.

ಬೋಳ ಪ್ರಶಾಂತ್ ( ಪ್ರಸಾದ್) ಕಾಮತ್, ಗುರುಪ್ರಸಾದ್ ನಾರಾವಿ, ಸಂತೋಷ್ ಕುಕ್ಕುದಕಟ್ಟೆ
ಸುಭಾಷ್ ಚಂದ್ರ ಹೆಗ್ಡೆ, ರಮೇಶ್ ಶೆಟ್ಟಿ ಅಯೋಧ್ಯಾನಗರ, ಅವಿನಾಶ್ ಶೆಟ್ಟಿ, ತಿಲಕ್ ಸಾಣೂರು. ಸಂತೋಷ್ ರಾವ್ ಕಾಳಿಕಾಂಬಾ, ಪ್ರದೀಪ್ ಶೃಂಗಾರ್ ಮೊದಲಾದವರು ಉಪಸ್ಥಿತರಿದ್ದರು.































