ಅಭಯ ಚಂದ್ರ ಜೈನ್ ರಿಗೆ ಶ್ರೀ ಕೃಷ್ಣ ಪ್ರಶಸ್ತಿ, ಶ್ರೀ ಕೃಷ್ಣ ವೇಷಧಾರಿ ಚಂದ್ರಶೇಖರ ಮಳಲಿ ಇವರಿಗೆ ಪುರಸ್ಕಾರ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನವರು ನಡೆಸಿದ 38ನೇ ವರ್ಷದ ಮೊಸರು ಕುಡಿಕೆ ಉತ್ಸವದಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್ ರಿಗೆ ಶ್ರೀ ಕೃಷ್ಣ ಪ್ರಶಸ್ತಿಯನ್ನು ಹಾಗೂ ಶ್ರೀ ಕೃಷ್ಣ ವೇಷಧಾರಿ ಚಂದ್ರಶೇಖರ ಮಳಲಿ ಅವರಿಗೆ ಪುರಸ್ಕಾರವನ್ನು, ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜೇಷ್ ಚೌಟ 38 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಫ್ರೆಂಡ್ಸ್ ಸರ್ಕಲ್ ರವರ ಕಾರ್ಯ ಬಹಳಷ್ಟು ಮೆಚ್ಚುವಂಥದ್ದು. ಪ್ರತಿವರ್ಷದ ನೃತ್ಯ, ಭಕ್ತಿ ಗಾನ ಕೇಳಿ ನೋಡಿ ನಾನು ಆನಂದಿಸಿದ್ದೇನೆ. ಮೂಡುಬಿದಿರೆ ಸಾಂಸ್ಕೃತಿಕವಾಗಿ ಬಹಳ ಉತ್ತಮವಾಗಿ ಸ್ಪಂದಿಸುತ್ತಿರುವುದಕ್ಕೆ ಸಂತಸವಿದೆ ಎಂದರು.

ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ನ ಸದಸ್ಯರ ಮಕ್ಕಳು ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದವರನ್ನ ಪುರಸ್ಕರಿಸಿ ಹಾಗೂ ಸಮಾಜ ಸೇವೆಗೈದ ಸಂಘ-ಸಂಸ್ಥೆಗಳಿಗೆ ಗೌರವಾರ್ಪಣೆಯನ್ನು ಸಲ್ಲಿಸಿ ಉತ್ತಮ ಸಾಧನೆಗೈದುದಕ್ಕೆ ಅಭಿನಂದಿಸಿದರು.

ವೇದಿಕೆಯಲ್ಲಿ ಡಾ.ಮೋಹನ ಆಳ್ವ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಉದ್ಯಮಿ ಕೆ ಶ್ರೀಪತಿ ಭಟ್, ದಂತ ತಜ್ಞ ಡಾ.ಎಂ. ವಿನಯಕುಮಾರ್ ಹೆಗ್ಡೆ, ಉದ್ಯಮಿಗಳಾದ ರಾಘವೇಂದ್ರ ಪ್ರಭು, ವಿಶ್ವನಾಥ ಪ್ರಭು, ಪ್ರಭಾ ಚಂದ್ರ ಜೈನ್, ಗೌರವಾಧ್ಯಕ್ಷ ಗಣೇಶ್ ರಾವ್ ಹಾಗೂ ಇತರರು ಹಾಜರಿದ್ದರು.

ಫ್ರೆಂಡ್ಸ್ ಸರ್ಕಲ್ ನ ಅಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು. ಸಂಚಾಲಕ ಸುರೇಶ್ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ, ಸುಶಾಂತ್ ಕರ್ಕೇರಾ ವಂದಿಸಿದರು.





















