ಕಾರ್ಕಳ : ಅಭಯಹಸ್ತ ಚಾರಿಟೇಬಲ್ ಟ್ರಸ್ಟ್, ಕಾರ್ಕಳ ವತಿಯಿಂದ ಗೋಗ್ರಾಸ ಗೋನಿಧಿ ಯೋಜನೆಯ ತೃತೀಯ ಹಂತದ ಕಾರ್ಯವಾಗಿ ಮೇ 5 ರಂದು ದಾನಿಗಳ ಸಹಾಯದಿಂದ ಖರೀದಿಸಿದ ಸುಮಾರು ₹ 65,000 ಮೌಲ್ಯದ ಔಷಧಿಗಳನ್ನು ಒಟ್ಟುಮಾಡಿ ನೀಲಾವರ ಗೋಶಾಲೆ, ಹೆಬ್ರಿ ಗಿಲ್ಲಾಳಿಯ ವಿಶ್ವೇಶಕೃಷ್ಣ ಗೋಶಾಲೆ, ಅನಂತಕೃಷ್ಣ ಗೋಶಾಲೆ, ಅಭಿನಂದನ ಗೋಶಾಲೆ ಚಿಕ್ಕಲಬೆಟ್ಟು, ಕೊಕ್ಕರ್ಣೆ ನಾಂಚಾರಿನ ಕಾಮಧೇನು ಗೋಶಾಲೆಗಳಿಗೆ ಅವಶ್ಯಕತೆಗೆ ತಕ್ಕಂತೆ ಔಷಧಿಗಳನ್ನು ವಿತರಿಸಲಾಯಿತು .


ಟ್ರಸ್ಟ್ ನ ವತಿಯಿಂದ ಡಾ. ಗುರುಚರಣ್, ಡಾ. ಶ್ರೀರಾಮ್ ಮುಗೇರಯ, ಶ್ರೀನಿವಾಸ ಸುಧಾಳ ಮತ್ತು ವಿಘ್ನೇಶ್ ಜೆಪಿ ಪೆರ್ವಾಜೆ ಉಪಸ್ಥಿತರಿದ್ದರು.





































