ಅಪಘಾತಕ್ಕೀಡಾದ ಯುವಕನಿಗೆ ಚಿಕಿತ್ಸೆ ನಿರಾಕರಿಸಿದ ವೆನ್ಲಾಕ್ ಆಸ್ಪತ್ರೆ

Picture of RB NEWS

RB NEWS

Bureau Report

ಉಡುಪಿ: ಕೋಟ ಠಾಣಾ ವ್ಯಾಪ್ತಿಯಲ್ಲಿ ಒಡಿಶಾ ಮೂಲದ ಯುವಕನೊಬ್ಬ ಭಾನುವಾರ ಅಪಘಾತಕ್ಕೀಡಾಗಿದ್ದು, ಸೂಕ್ತ ಚಿಕಿತ್ಸೆ ನೀಡಿ ಯುವಕನ ಪ್ರಾಣ ಉಳಿಸಬೇಕಾದ ವೆನ್ಲಾಕ್ ಆಸ್ಪತ್ರೆ ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿಸಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರ ಸಕಾಲಿಕ ಹಾಗೂ ಮಾನವೀಯ ನೆರವಿನಿಂದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಪಘಾತದಂತಹ ಗಂಭೀರ ಪ್ರಕರಣಗಳಲ್ಲಿ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸ ಬೇಕಾದ ಸರಕಾರಿ ವ್ಯವಸ್ಥೆ, ದುರಸ್ತಿಯಲ್ಲಿದೆ ಎಂಬ ಕಾರಣ ನೀಡಿ ರೋಗಿಗಳನ್ನು ಹಿಂದಕ್ಕೆ ಕಳುಹಿಸಿ ಅವರ ಪ್ರಾಣದೊಡನೆ ಚೆಲ್ಲಾಟ ಮಾಡುತ್ತಿರುವುದು ಖಂಡನೀಯ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ಹಿನ್ನೆಲೆ:

ಒಡಿಶಾ ಮೂಲದ ಕೂಲಿ ಕಾರ್ಮಿಕ ಕೃಷ್ಣ (27 ) ಎಂಬ ಯುವಕನಿಗೆ ಬೈಕೊಂದು ಡಿಕ್ಕಿ ಹೊಡೆದು ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದು ಆಂತರಿಕ ಘಾಸಿಯಾಗಿತ್ತು.

ಯುವಕನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.

ಅಪಘಾತದ ಗಂಭೀರತೆ ಹಾಗೂ ಯುವಕನ ಆರ್ಥಿಕ ಪರಿಸ್ಥಿತಿಯನ್ನು ಅರಿತ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿ ಆಂಬುಲೆನ್ಸ್ ಮೂಲಕ ರೋಗಿಯನ್ನು ಕಳುಹಿಸಿಕೊಟ್ಟಿದ್ದಾರೆ.

ಆದರೆ ಅಲ್ಲಿ ಹೊಟ್ಟೆಗಾದ ಗಂಭೀರ ಏಟಿನಿಂದ ರೋಗಿ ನರಳುತ್ತಾ ಇದ್ದರೂ ಗಮನಿಸದೆ ಶಸ್ತ್ರ ಚಿಕಿತ್ಸಾ ವಿಭಾಗ ದುರಸ್ತಿಯಲ್ಲಿದೆ ಎಂದು ಹೇಳಿ ರೋಗಿಯನ್ನು ದಾಖಲಿಸಿ ಕೊಳ್ಳದೇ ಹಿಂದಕ್ಕೆ ಕಳುಹಿಸುವ ಮೂಲಕ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ.

ಬ್ರಹ್ಮಾವರ ದಿಂದ ವೆನ್ಲಾಕ್ ಗೆ ಪ್ರಯಾಣಿಸಲು ಒಂದೂವರೆ ಘಂಟೆ ಹಾಗೂ ಅಲ್ಲಿಂದ ಉಡುಪಿಗೆ ವಾಪಾಸ್ ಬರಲು ಒಂದೂವರೆ ಗಂಟೆ ಹೀಗೆ ಯುವಕನ ಪ್ರಾಣ ಉಳಿಸುವ ಅಮೂಲ್ಯ ಸಮಯ ಪೋಲಾಗಿದೆ.

ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರ ಚಿಕಿತ್ಸೆ ದೊರೆಯುವಂತೆ ತಾನೇ ಮುತುವರ್ಜಿ ವಹಿಸಿಕೊಂಡು ಮಾನವೀಯತೆ ಮೆರೆದಿದ್ದಾರೆ.

ಇದೀಗ ಯುವಕನನ್ನು ಶಸ್ತ್ರ ಚಿಕಿತ್ಸೆ ನಡೆಸಿ ಐಸಿಯುನಲ್ಲಿ ಇರಿಸಲಾಗಿದ್ದು , ರೋಗಿಯ ಸ್ಥಿತಿ ಗಂಭೀರವಾಗಿದೆ.
ರೋಗಿಗೆ ಹೆಚ್ಚಿನ ನೆರವಿನ ಅವಶ್ಯಕತೆ ಇದ್ದು ವಿಶು ಶೆಟ್ಟಿ ಅವರು ತಮ್ಮಿಂದ ಆದ ಸಹಾಯ ಮಾಡುವ ಮೂಲಕ ಯುವಕನ ಪ್ರಾಣ ಉಳಿಸುವ ಹೋರಾಟ ನಡೆಸುತ್ತಿದ್ದಾರೆ.

ವೆನ್ಲಾಕ್ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆಯ ವಿಭಾಗ ದುರಸ್ತಿಯಲ್ಲಿದ್ದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡುವ ಜವಾಬ್ದಾರಿ ಆಯಾ ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ
ಆರೋಗ್ಯ ಇಲಾಖೆಯದ್ದಾಗಿದೆ. ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದಾದರೆ ಈ ಬಗ್ಗೆ ತುರ್ತು ಪತ್ರಿಕಾ ಪ್ರಕಟಣೆ ನೀಡಿ ರೋಗಿಗಳ ಪ್ರಾಣ ಉಳಿಸುವ ಮಾನವೀಯತೆಯನ್ನು ಅಸ್ಪತ್ರೆ ತೋರಿಸ ಬೇಕಾಗಿತ್ತು.

ಯುವಕನನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸದೆ ಇರುತ್ತಿದ್ದರೆ, ಆತನ ಪ್ರಾಣಕ್ಕೆ ಅಪಾಯ ವಾಗುತಿತ್ತು.

ಈ ಪ್ರಕರಣದಂತೆ ಇನ್ನೆಷ್ಟು ಪ್ರಕರಣಗಳು ನಡೆದು ದಾರಿಯಲ್ಲಿಯೇ ರೋಗಿಗಳು ಪ್ರಾಣ ಬಿಟ್ಟಿರಬಹುದು ಎಂಬುದನ್ನು ಊಹಿಸಿ ಕೊಳ್ಳಲು ಭಯವಾಗುತ್ತದೆ.ನಮ್ಮ ಸರಕಾರಿ ಯಂತ್ರಗಳು ಮಾನವೀಯತೆಯನ್ನು ಬೆಳೆಸಿಕೊಳ್ಳುವುದು ಯಾವಾಗ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.

ಆಯುಷ್ಮಾನ್ ಸಮಸ್ಯೆಗೆ ಪರಿಹಾರ ಎಂದು ? :

ದುಡಿಯಲು ಇವರು ಬೇಕು.ಆದರೆ ಅಪಘಾತ ದಂತಹ ತುರ್ತು ಸಂದರ್ಭದಲ್ಲಿ ಜೀವ್ ಉಳಿಸುವ ಆಯುಷ್ಮಾನ್ ಸೌಲಭ್ಯ ಲಭ್ಯವಾಗದಿರುವುದು ದೊಡ್ಡ ಸಮಸ್ಯೆಯಾಗಿದೆ.

ರೇಷನ್ ಕಾರ್ಡ್ ಇಲ್ಲದ ಆಯುಷ್ಮಾನ್ ಸೌಲಭ್ಯ ಸಿಗದ ರೋಗಿಗಳ ಗತಿ ಏನು? ಎಂದು ವಿಶು ಶೆಟ್ಟಿ ಪ್ರಶ್ನಿಸಿದ್ದಾರೆ.

ಹೊರ ರಾಜ್ಯದ ಕೂಲಿ ಕಾರ್ಮಿಕರಿಗೆ ನಮ್ಮ ರಾಜ್ಯದಲ್ಲಿ ಆಯುಷ್ಮಾನ್ ನೋಂದಣಿ ಮಾಡಲು ತೊಡಕಾಗಿದೆ.

ಆದರೆ ಕೇರಳದಲ್ಲಿ ಯಾವುದೇ ಸಮಸ್ಯೆ ಇಲ್ಲ. ಇದೊಂದು ತಾಂತ್ರಿಕ ದೋಷವಾಗಿದ್ದಾರೆ , ಇದನ್ನು ಬಗೆ ಹರಿಸಲು ಇಲಾಖೆ, ಸರಕಾರ ಪ್ರಯತ್ನ ಮಾಡಬೇಕು. ಇದೊಂದು ಜೀವ ಉಳಿಸುವ ಪ್ರಶ್ನೆ, ಇದರಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top