ಅಧ್ಯಕ್ಷರಾಗಿ ವೀಣಾ ರಾಜೇಶ್ ಭಂಡಾರಿ ಆಯ್ಕೆ
ಕಾರ್ಕಳ : ಪೆರ್ವಾಜೆ ಪತ್ತೊಂಜಿಕಟ್ಟೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ(ರಿ.) ಇದರ ನೂತನ ಅಧ್ಯಕ್ಷರಾಗಿ ವೀಣಾ ರಾಜೇಶ್ ಭಂಡಾರಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ನಡೆದಿದೆ.
೨೦೨೪-೨೫ನೇ ಸಾಲಿನ ನೂತನ ಅಧ್ಯಕ್ಷರಾಗಿ ವೀಣಾ ರಾಜೇಶ್ ಭಂಡಾರಿ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಅಧ್ಯಕ್ಷತೆಯನ್ನು ಸಂಘದ ಸದಸ್ಯ ಸುಭಾಸ್ ಸುವರ್ಣ ಇವರು ವಹಿಸಿದ್ದರು.
ಮಹಿಳಾ ಮಂಡಲದ ಉಪಾಧ್ಯಕ್ಷರಾಗಿ ಸುಜಯಾ ಮೋಹನ್,

ಕಾರ್ಯದರ್ಶಿಯಾಗಿ ಮಮತಾ ಸುವರ್ಣ, ಜತೆಕಾರ್ಯದರ್ಶಿಯಾಗಿ ರೂಪಾ ಶೆಟ್ಟಿ,
ಕೋಶಾಧಿಕಾರಿಯಾಗಿ ಶುಭಲಕ್ಷ್ಮೀ ಬಂಗೇರ, ಸಾಂಸ್ಕೃತಿಕ ಕಾರ್ಯದರ್ಶಿ ಅಮಿತಾ ಸಾಲಿಯಾನ್, ಕ್ರೀಡಾ ಕಾರ್ಯದರ್ಶಿ ಶುಭಾ ಕಿಶೋರ್ ಆಯ್ಕೆಯಾದರು.
೨೦ ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.






































