

ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ. ಸದಾಶಿವ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಮಂಗಳೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ, ಕಾರ್ಕಳ ನಗರದ ಮಠದಬೆಟ್ಟು ನಿವಾಸಿ ಕೆ.ಸದಾಶಿವ ಅವರ ನಿಧನಕ್ಕೆ ಗಣ್ಯರು, ಊರ ನಾಗರಿಕರು ಕಂಬನಿ ಮಿಡಿದಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಶಾಸಕ ವಿ.ಸುನೀಲ್ ಕುಮಾರ್ ಅವರು ಮೃತರ ಮನೆ ಮಂದಿಗೆ ಸಾಂತ್ವನದ ಸಂದೇಶ ರವಾನಿಸಿದ್ದಾರೆ.
ಮಂಗಳೂರು ದತ್ತ ಪ್ಯಾರೇಡೆಸ್ ನಲ್ಲಿ ಮೃತರ ಅಂತಿಮ ನಮನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಪಾರ ಸಂಖ್ಯೆ ಅಭಿಮಾನಿಗಳು ಪಾಲ್ಗೊಂಡರು.
ಅಂತಿಮ ವಿದಾಯ
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್.ರಾಜು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಡಾ. ವಿಜಯಕೃಷ್ಣ ಪಡುಕೋಣೆ, ಮುಂಬಯಿ ಕನ್ನಡ-ತುಳು ಅಸೋಸಿಯೇಷನ್ ಅಧ್ಯಕ್ಷ ಎ.ಕೆ.ಹರೀಶ್, ಸ್ಪ್ರಿಂಗ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಆ್ಯಂಡೋ ಪೌಲ್ ಪುತ್ತೂರು, ಫ್ಯಾಕ್ಟಂವ್ಫೋಸ್ ಕಂಪೆನಿಯ ನಿವೃತ್ತ ಅಧಿಕಾರಿ ಸಂಜೀವ ಬಳ್ಕೂರ್, ಕಿಂಗ್ಸ್ ಕೋಟ್೯ ಮೈಸೂರು, ಬಂಡೀಪುರ ಹೆರಿಟೇಜ್ ವಿಲೇಜ್ ನ ಮುಖ್ಯಸ್ಥ ಪ್ರವೀಣ್ ಅತ್ತಾವರ, ಕೆನಡಾ ಜಗದೀಶ್ ಅತ್ತಾವರ, ಜಿಎಸ್ಟಿ ವರಿಷ್ಠಾಧಿಕಾರಿ ನಾಗೇಶ್ ಕಾಮತ್ , ಮಾಜಿ ಯೋಧ ಪ್ರಭಾಕರ ಗುಂಡೇರಾ, ಉದ್ಯಮಿಗಳಾದ ಸತ್ಯಶಂಕರ, ವೆಂಕಪ್ಪ,ದಿನೇಶ್ ಬಾಬು, ಪ್ರಸಾದ್ ಕಾರ್ಕಳ, ರಾಮ್ ಮೋಹನ್, ತೆಳ್ಳಾರ್ ಮಾಂಜ ಗಣೇಶ್, ಸಚಿನ್, ಎನ್.ಆರ್.ಪ್ರದೀಪ್, ಪ್ರಭಾಕರ ಬಂಗೇರಾ, ದತ್ತ ಪ್ಯಾರೇಡೆಸ್ ಅಸೋಸಿಯೇಷನ್ ಅಧ್ಯಕ್ಷ ಪದ್ಮನಾಭ ಸುವರ್ಣ, ಸೀತಾರಾಮ ಶೆಟ್ಟಿ, ಶಿವರಾಜ ಶೆಟ್ಟಿ, ಹೋಂ ಗಾಡ್೯ ಘಟಕದ ಅಧಿಕಾರಿ ಪ್ರಭಾಕರ ಸುವರ್ಣ, ತೆಳ್ಳಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿ ಮನೋಹರ್, ತೆಳ್ಳಾರು ಸಂಜೀವ ದೇವಾಡಿಗ, ವಿಜಯಕರ್ನಾಟಕ ಪತ್ರಿಕೆಯ ಸ್ಥಾನೀಯ ವಿಭಾಗದ ನಿವೃತ್ತ ಸಂಪಾದಕ ಕುಮಾರನಾಥ, ದಕ್ಷಿಣ ಕನ್ನಡ ಗೃಹ ರಕ್ಷಕ ದಳದ ಕಮಾಂಡರ್ ಮುರಳಿ ಮೋಹನ್,
ಡಾ. ಧರ್ಣಪ್ಪ ಪೂಜಾರಿ, ಡಾ. ಶರಣ್, ಡಾ.ರಕ್ಷಿತ್ ಹೆಗ್ಡೆ, ಡಾ. ನೀತಾ ಶೆಟ್ಟಿ ಮೊದಲಾದವರು ಅಂತಿಮ ನಮನ ಸಲ್ಲಿಸಿದವರಲ್ಲಿ ಪ್ರಮುಖರು.

ಬೋಳೂರು ರುದ್ರಭೂಮಿಯಲ್ಲಿ ಮೃತರ ಪುತ್ರ ಡಾ. ಅಶ್ವಥ್ ಅವರು ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು.
ಇನ್ನು ನೆನಪು ಮಾತ್ರ…….




















