ಅತ್ತೂರು ಸಂತ ಲಾರೆನ್ಸ್ ಬಸಿಲಿಕ ವಾರ್ಷಿಕೋತ್ಸವಕ್ಕೆ ಚಾಲನೆ

Picture of RB NEWS

RB NEWS

Bureau Report


ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವವಕ್ಕೆ ಚಾಲನೆ ದೊರೆಯಿತು.


ಸಂತ ಲಾರೆನ್ಸ್ ಅವರ ಅದ್ಭುತ ಪ್ರತಿಮೆಯನ್ನು ಚರ್ಚ್ ಪರಿಸರದಲ್ಲಿ ಮೆರವಣಿಗೆ ಸಾಗಿ ಭಕ್ತಾದಿಗಳ ವೀಕ್ಷಣೆಗಾಗಿ ವೇದಿಕೆಯಲ್ಲಿ ಪ್ರತಿಷ್ಠಾಪಿಸುವ ಮೂಲಕ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ದೊರೆಯಿತು.


ಧರ್ಮಗುರು ಫಾದರ್ ಅನಿಲ್ ಕ್ರಾಸ್ತಾ. ಕ್ಯಾರಿತಾಸ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ, ಫಾದರ್ ಪ್ರಕಾಶ್ ಲೋಬೊ, ಸೈಂಟ್ ಆನ್ಸ್ ಫ್ರೈರಿ, ಮಂಗಳೂರು, ಫಾದರ್ (ಡಾ) ಪ್ರವೀಣ್ ಜಾಯ್ ಸಲ್ಡಾನ್ಹಾ, ಸೈಂಟ್ ಜೋಸೆಫ್ಸ್ ಸೆಮಿನರಿ, ಮಂಗಳೂರು, ಫಾದರ್ ಐವನ್ ಡಿಸೋಜಾ, ಸೈಂಟ್ ಜೋಸೆಫ್ಸ್ ಸೆಮಿನರಿ, ಮಂಗಳೂರು, ಫಾದರ್ ವಾಲ್ಟರ್ ಡಿಸೋಜಾ, ಬೆಂದೂರು ಚರ್ಚಿನ ಧರ್ಮಗುರುಗಳು, ಅ. ವಂ. ರೋಶನ್ ಡಿಸೋಜಾ, ಉಡುಪಿ ಧರ್ಮಕ್ಷೇತ್ರದ ಕುಲಪತಿ ಇವರು ಇತರ ಪೂಜಾವಿಧಿಗಳನ್ನು ನೆರವೇರಿಸಿದರು.


ದೇವರ ವಾಕ್ಯದ ಭಾನುವಾರ ಆದುದ್ದರಿಂದ. ಬೈಬಲ್ಲನ್ನು ಧೂಪ ಮತ್ತು ಹಾರ ಹಾಕಿ ಗೌರವಿಸಲಾಯಿತು. ಜುಬಿಲಿ 2025 ರ ವಿಷಯ ‘ಭರವಸೆ ನಮ್ಮನ್ನು ನಿರಾಶೆಗೊಳಿಸುವುದಿಲ್ಲ’ ಎಂಬುದರ ಬಗ್ಗೆ ಬಲಿಪೂಜೆಯಲ್ಲಿ ಎಲ್ಲಾ ಗುರುಗಳು ಬಹಳ ಚಿಂತನಶೀಲ ಪ್ರವಚನಗಳನ್ನು ಬೋಧಿಸಿದರು.
ಭಾನುವಾರ ಮತ್ತು ಭಾರತದ ಗಣರಾಜ್ಯೋತ್ಸವ ದಿನವಾದ್ದರಿಂದ ಬೆಳಗಿನ ಜಾವದಿಂದ ತಡರಾತ್ರಿಯವರೆಗೆ ಭಕ್ತಸಮೂಹವೇ ಪುಣ್ಯಕ್ಷೇತ್ರಕ್ಕೆ ಆಗಮಿಸಿದರು. ಇಪ್ಪತ್ತಕ್ಕೂ ಹೆಚ್ಚು ಗುರುಗಳು ಪಾಪಕ್ಷಮಾಪಣೆಗೈದರು. ಇದು ಜುಬಿಲಿ ವರ್ಷವಾಗಿದ್ದರಿಂದ ಮತ್ತು ಈ ದೇವಾಲಯವನ್ನು ವಿಶೇಷ ಆರ್ಶೀವಾದಗಳನ್ನು ಪಡೆಯುವ ಪವಿತ್ರ ಸ್ಥಳವೆಂದು ಘೋಷಿಸಲಾಗಿರುವುದರಿಂದ, ಧರ್ಮ ಮತ್ತು ಜಾತಿಗಳನ್ನು ಲೆಕ್ಕಿಸದೆ ಭಕ್ತಾಧಿಗಳು ಬಸಿಲಿಕಾಕ್ಕೆ ಭೇಟಿ ನೀಡಿ ಸಂತ ಲಾರೆನ್ಸಾರಿಗೆ ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top