


ಅತ್ತೂರು ಜಾತ್ರೆ: ನಿಟ್ಟೆ ಗ್ರಾಮ ಪಂಚಾಯತ್ತಿಗೆ ಲಕ್ಷಾಂತರ ಅದಾಯ
ಅತ್ತೂರು ಜಾತ್ರೆ: ನಿಟ್ಟೆ ಗ್ರಾಮ ಪಂಚಾಯತ್ತಿಗೆ ಲಕ್ಷಾಂತರ ಅದಾಯ
ಕಾರ್ಕಳ: ತಾಲೂಕು ವ್ಯಾಪ್ತಿಯಗ್ರಾಮ ಪಂಚಾಯತ್ ಗಳ ಪೈಕಿ ಎಲಂ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಅದಾಯ ಕ್ರೋಡಿಕರಿಸುವ ಗ್ರಾಮ ಪಂಚಾಯತ್ ನಿಟ್ಟೆಯಾಗಿದೆ.
ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಐತಿಹಾಸಿಕ ಹಿನ್ನಲೆಯುಳ್ಳ ಅಂತರ್ರಾಷ್ಟ್ರೀಯ ಧಾರ್ಮಿಕ ಕ್ಷೇತ್ರವಾದ ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಪುಣ್ಯ ಕ್ಷೇತ್ರವು ಇಲ್ಲಿದೆ.
ಅತ್ತೂರು ಸಂತ ಲಾರೆನ್ಸ್ ಬಸಿಲಿಕದಲ್ಲಿ ಜ.26ರಿಂದ 30 ತನಕ ನಡೆಯುವ ವಾರ್ಷಿಕ ಮಹೋತ್ಸವ ಸುಸಂದರ್ಭದಲ್ಲಿ ದೇಶ,ವಿದೇಶಗಳಿಂದ ಆಸ್ತಿಕ ಭಾಂದವರು ಅಗಮಿಸುತ್ತಾರೆ.
ಲಕ್ಷಾಂತರ ಸಂಖ್ಯೆಗೂ ಮೀರಿ ಭಕ್ತಾದಿಗಳು ಅಗಮಿಸುತ್ತಿರುವುದು ಗಮನಾರ್ಹವಾಗಿದೆ.
ಇದೇ ಸಂದರ್ಭ ನಿಟ್ಟೆ ದೂಪದಕಟ್ಟೆಯಿಂದ ಕಾಬೆಟ್ಟು ಕ್ರಾಸ್ ತನಕ ರಸ್ತೆ ಇಕ್ಕೆಲೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ನಿಟ್ಟೆ ಗ್ರಾಮ ಪಂಚಾಯತ್ ಮಾಡಿಕೊಡು ಬರುತ್ತಿದೆ.
ನಾಳೆ ಏಲಂ ಪ್ರಕ್ರಿಯೆ


ಕಳೆದ ಬಾರಿ 417 ವ್ಯಾಪಾರ ಮಳಿಗೆಗಳು ತೆರೆದುಕೊಂಡಿದ್ದು, ಒಟ್ಟು ರೂ.85 ಲಕ್ಷ ಅದಾಯವನ್ನು ನಿಟ್ಟೆ ಗ್ರಾಮ ಪಂಚಾಯತ್ ಗಳಿಸಿರುವುದು ಹೆಗ್ಗಳಿಕೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ 475 ವ್ಯಾಪಾರ ಮಳಿಗೆಗಳನ್ನು ಗುರುತಿಸಿದ್ದು, ಹೆಚ್ಚುವರಿ ಅದಾಯಗಳಿಸುವ ನಿರೀಕ್ಷೆ ಇದೆ.
ಎಲಂ ನಿಯಾಮಾವಳಿ
ನಿಟ್ಟೆ ಗ್ರಾಮದ ಅತ್ತೂರು ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ಜ.26ರಿಂದ ದಿನಾಂಕ 30ರ ತನಕ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಅತ್ತೂರು ಚರ್ಚ್ ಎದುರುಗಡೆ ದ್ವಿಪಥ ರಸ್ತೆಯ ಅಂಚಿನಲ್ಲಿ ಪಂಚಾಯತ್ ನಿಗದಿ ಪಡಿಸಿದ 10 ಪೀಟ್ ಅಗಲದ ಸೈಟ್ಗಳಲ್ಲಿ ತಾತ್ಕಾಲಿಕವಾಗಿ ಐದು ದಿನಗಳ ಕಾಲ ಪಂಚಾಯತ್ ನಿಗದಿಪಡಿಸಿದ ದರದಲ್ಲಿ ವ್ಯಾಪಾರ ಮಾಡುವ ಹಕ್ಕನ್ನು ಸೀಲ್ಸ್ ಟೆಂಡರು ಮುಖಾಂತರ ನೀಡಲಾಗುತ್ತದೆ.
ಪಂಚಾಯತಿಯಿಂದ ಒದಗಿಸಿದ ಫಾರ್ಮನ್ನು ಕ್ರಮ ಪ್ರಕಾರ ತುಂಬಿಸಿ ರೂ.100.00ರ ಠೇವಣಿ ರಶೀದಿಯೊಂದಿಗೆ, ಆಧಾರ್ ಕಾರ್ಡ್ ಜೆರಾಕ್ಸ್ ಕವರಿನಲ್ಲಿ ಹಾಕಿ ಬಂದ್ ಮಾಡಿ ಕವರಿನ ಮೇಲೆ ಸೈಟ್ ನಂಬ್ರ ಮತ್ತು ವಿಳಾಸ ನಮೂದಿಸಬೇಕು. ಕವರನ್ನು ಜ.19 ರಂದು ಅತ್ತೂರು ಸೈಂಟ್ ಲಾರೆನ್ಸ್ ಶಾಲಾ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ: 8-00ರಿಂದ 11-00 ರ ತನಕ ಟೆಂಡರು ಕವರುಗಳನ್ನು ಸ್ವೀಕರಿಸಲಾಗುತ್ತದೆ.
ಜ. 19 ರಂದು 12-00 ಗಂಟೆ ನಂತರ ಹಾಜರಿದ್ದ ಬಿಡ್ಡುದಾರರ ಸಮಕ್ಷಮ ಕವರನ್ನು ತೆರೆಯಲಾಗುವುದು. ಟೆಂಡರು ಪಾಸಾದವರು ಟೆಂಡರಿನಲ್ಲಿ ಕಾಣಿಸಿದ ಮೊತ್ತ ಮತ್ತು ರೂ.100-00 ಲೈಸನ್ಸ್ ಫೀಸು ಆ ಕೂಡಲೇ ಪಾವತಿಸುವುದು. ಸದ್ರಿಯವರ ಕಟ್ಟಿದ ಠೇವಣಿ ರೂ.100.00ನ್ನು ಹಿಂತಿರುಗಿಸುವುದಿಲ್ಲ. ಏಲಂ ಖಾಯಂ ಆದವರು ಏಕ ಗಂಟಿನಲ್ಲಿ ಟೆಂಡರ್ ಮೊತ್ತವನ್ನು ಸ್ಥಳದಲ್ಲಿ ಉಪಸ್ಥಿತಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ನಲ್ಲಿರುವ QR SCAN ಮೂಲಕ ಪಂಚಾಯತ್ ಖಾತೆಗೆ ಜಮೆ ಮಾಡುವುದು.
ಗ್ರಾಮ ಪಂಚಾಯತಿಯಿoದ ನಿಗದಿ ಪಡಿಸಿದ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಟೆಂಡರು ಬಂದಲ್ಲಿ ಟೆಂಡರನ್ನು ಖಾಯಂ ಮಾಡಲಾಗುವುದಿಲ್ಲ. ಟೆಂಡರನ್ನು ಖಾಯಂ ಮಾಡುವ ಯಾವೊಂದೂ ಕಾರಣ ಕೊಡದೇ ತಿರಸ್ಕರಿಸುವ ಹಕ್ಕು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕಾಯ್ದಿರಿಸಿಕೊಂಡಿರುತ್ತಾರೆ.
ಸ್ವಚ್ಚತೆ ಮತ್ತು ಕಾನೂನು
ವಹಿಸಿಕೊಂಡ ಸೈಟುಗಳಲ್ಲಿ ಮಿಠಾಯಿ, ಬಚ್ಚಂಗಾಯಿ ಹಾಗೂ ಇತರ ವಸ್ತುಗಳನ್ನು ತೆರೆದಿಟ್ಟು ವ್ಯಾಪಾರ ಮಾಡುವರೇ ಅವಕಾಶ ಇರುವುದಿಲ್ಲ. ಅದೇ ರೀತಿ ಶರಾಬು ವ್ಯಾಪಾರ ಹಾಗೂ ಜೂಜಾಟದ ವ್ಯಾಪಾರ ಮಾಡುವ ಅವಕಾಶ ಇರುವುದಿಲ್ಲ. ಅಂಗಡಿಯಲ್ಲಿ ಮೈಕ್ ಸ್ಪೀಕರ್ ಇಟ್ಟು ಪ್ರಚಾರ ಮಾಡುವರೇ ಅವಕಾಶ ಇಲ್ಲ. ಸೈಟುಗಳಲ್ಲಿ ಗುರುತು ನಂಬ್ರಗಳನ್ನು ಹಾಕಿದ್ದು ಅದಕ್ಕಿಂತ ಹೊರಗೆ ಚಪ್ಪರ ಹಾಕುವುದಾಗಲೀ ಅಥವಾ ಡಬ್ಬಿ ಪೆಟ್ಟಿಗೆ ಇತ್ಯಾದಿಗಳನ್ನು ಇಡುವರೇ ಅವಕಾಶ ಇಲ್ಲ. ಇದಕ್ಕೆ ವಿರೋಧವಾಗಿ ಇಟ್ಟಲ್ಲಿ ಪೋಲೀಸರು ಯಾವುದೇ ಕರ್ಯಾಚರಣೆ ಮಾಡಿದ್ದಲ್ಲಿ ಗ್ರಾಮ ಪಂಚಾಯತ್ ಜವಾಬ್ದಾರವಾಗುವುದಿಲ್ಲ. ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯವರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕುದಾಗಿದೆ.
ಹೆಚ್ಚಿನ ಮೊತ್ತ ನಮೂದಿಸಿದವರು ಆ ಕೂಡಲೇ ಹಣ ಪಾವತಿ ಮಾಡದಿದ್ದಲ್ಲಿ 2ನೇಯವರಿಗೆ ಸೈಟನ್ನು ನೀಡಲಾಗುವುದು. ಏಲಂನಲ್ಲಿ ಸೈಟ್ ಖಾಯಂ ಆದವರು ಸ್ಥಳದಲ್ಲಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವುದು 100.00ರೂ, ಹಾಗೂ ಮೇಲ್ಪಟ್ಟ ನೋಟುಗಳನ್ನು ಸಂದಾಯ ಮಾಡುವುದು. 10,20,50 ರ ನೋಟುಗಳನ್ನು ಎಣಿಕೆ ಮಾಡಲು ತುಂಬಾ ಸಮಯ ವ್ಯರ್ಥವಾಗುವುದರಿಂದ ಹಾಗೂ ಮುಂದಿನ ಏಲಂ ಮಾಡಲು ತೊಂದರೆಯಾಗುವುದರಿoದ 100.00ರೂ ಮೇಲ್ಪಟ್ಟ ನೋಟುಗಳನ್ನು ಮಾತ್ರ ಸ್ವೀಕರಿಸಲಾಗುವುದು.
ಕಾನೂನು ಬಾಹಿರಕ್ಕೆ ಅವಕಾಶ ಇಲ್ಲ
ಟೆಂಡರ್ ಮುಖಾಂತರ ಸೈಟ್ನ್ನು ಪಡೆಯದೇ ಅಂಗಡಿ ಮಳಿಗೆಗಳನ್ನು ಹಾಕಿದಲ್ಲಿ ಅವರಿಗೆ ರೂ.10000.00 ದಂಡನೆಯನ್ನು ವಿಧಿಸಲಾಗುವುದು ಹಾಗೂ ಖಾಸಗಿ ಜಮೀನಿನಲ್ಲಿ ಅಂಗಡಿ ಮಳಿಗೆಗಳನ್ನು ಹಾಕಿದಲ್ಲಿ ಜಮೀನಿನ ಮಾಲಕರು ಕಡ್ಡಾಯವಾಗಿ ಗ್ರಾಮ ಪಂಚಾಯತ್ನಿAದ ಪರವಾನಿಗೆಯನ್ನು ಪಡೆದು ವ್ಯಾಪಾರ ಮಾಡತಕ್ಕದ್ದು. ಹಸಿ ಕಸ ಮತ್ತು ಒಣಕಸವನ್ನು ಪ್ರತೇಕ ಮಾಡಿ ಇಡುವುದು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಉಪಯೋಗಿಸಬಾರದು ಬಟ್ಟೆ ಚೀಲಗಳನ್ನು ಉಪಯೋಗಿಸಬೇಕು ಎಂಬ ಸೂಚನೆಯನ್ನು ನಿಟ್ಟೆ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ತಿಳಿಸಿದೆ.








































