ಅತೀ ವೇಗ,ನಿರ್ಲಕ್ಷ್ಯ ರೀತಿಯಲ್ಲಿ ಕಾರು ಚಾಲನೆಗೆ ರೂ. 5000 ದಂಡ ಮತ್ತು ಹತ್ತು ದಿನಗಳ ಕಾಲ ಸಮುದಾಯ ಸೇವೆ ಶಿಕ್ಷೆ !
ಸುಳ್ಯ : ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ಕಾರು ವಾಹನ ಚಾಲನೆ ಮಾಡಿದ ವಾಲಕನೊಬ್ಬನಿಗೆ ಆರೋಪಿಗೆ ರೂ.5000 ದಂಡ ಮತ್ತು ಹತ್ತು ದಿನಗಳ ಕಾಲ ಸಮುದಾಯ ಸೇವೆ ಶಿಕ್ಷೆಯನ್ನು ವಿಧಿಸಿ ಮಹತ್ವದ ತೀರ್ಪನ್ನು ಸುಳ್ಯದ ನ್ಯಾಯಾಲಯ ನೀಡಿದೆ.
ಸುಳ್ಯ ಪೊಲೀಸ್ ಠಾಣಾ ಅಕ್ರ: 50/2025 ಕಲಂ 281 BNS ಮತ್ತು 184 IMV ಆ್ಯಕ್ಟ್ ಪ್ರಕರಣದಲ್ಲಿ ಆರೋಪಿ ಸಾಜಿಬ್ ಎಂಬಾತನ ವಿರುದ್ದ ಪೊಲೀಸ್ ಉಪನಿರೀಕ್ಷಕ ಸಂತೋಷ್ ಬಿ ಪಿ ರವರು ನ್ಯಾಯಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ಬಳಿಕ ನ್ಯಾಯಾಲಯಕ್ಕೆ ಹಾಜರಾದ ಆರೋಪಿ (5) ಸಾಜಿಬ್ ಎಂಬಾತನಿಗೆ ಸುಳ್ಯ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು, 2025 ಡಿಸೆಂಬರ್ 08 ರಂದು ಸದ್ರಿ ಮಹತ್ವ ತೀರ್ಪು ಹೊರಡಿಸಿದ್ದಾರೆ.
ಅದರಂತೆ ಆರೋಪಿಗೆ 5000 ದಂಡ ಮತ್ತು ಹತ್ತು ದಿನಗಳ ಕಾಲ ಸಮುದಾಯ ಸೇವೆ ಶಿಕ್ಷೆಯನ್ನು ವಿಧಿಸಲಾಗಿರುತ್ತದೆ.
ಸದ್ರಿ ಸಮುದಾಯ ಸೇವೆ ಶಿಕ್ಷೆ ಅಡಿಯಲ್ಲಿ ಆರೋಪಿ ಸಾಜಿಬ್ ಎಂಬಾತನಿಗೆ ದಿನಾಂಕ: 09-12-2025 ರಿಂದ 18-12-2025 ರವರೆಗೆ ಸುಳ್ಯ ಠಾಣೆಯ ಸಿಬ್ಬಂದಿಯೊಂದಿಗೆ ಸುಳ್ಯ ಪೇಟೆಯ ಮುಖ್ಯ ಜಂಕ್ಷನ್ ನಲ್ಲಿ ನಿಂತು ಸಂಚಾರ ನಿಯಮಗಳನ್ನು ಹೊಂದಿರುವ ಫಲಕಗಳನ್ನು ಹಿಡಿದು ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಹಾಗೂ ಸಂಚಾರ ನಿಯಂತ್ರಣ ಮಾಡುವಲ್ಲಿ ಠಾಣಾ ಸಿಬ್ಬಂದಿಯವರಿಗೆ ಸಹಾಯ ಮಾಡತಕ್ಕದ್ದು ಎಂಬುದಾಗಿ ಹಾಗೂ ಶಿಕ್ಷೆ ಅವಧಿ ಮುಗಿದ ನಂತರ ಆರೋಪಿ ಸೇವೆ ಸಲ್ಲಿಸಿದ್ದ ಬಗ್ಗೆ ಸೂಕ್ತ ವರದಿಯನ್ನು ಸುಳ್ಯ ಪೊಲೀಸ್ ಉಪನಿರೀಕ್ಷಕರು ನ್ಯಾಯಲಯಕ್ಕೆ ಸಲ್ಲಿಸಬೇಕೆಂದು ಸುಳ್ಯ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೋಹನ್ ಬಾಬು ರವರು ಆದೇಶ ಹೊರಡಿಸಿರುತ್ತಾರೆ.

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಿಗೆ ದಿನಾಂಕ:05.04.2025 ರಂದು ಸಂಜೆ ಸಮಯ 4.00 ಗಂಟೆಗೆ ಸ್ಥಳೀಯ ನಿವಾಸಿಯೊಬ್ಬರು ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಮಾಣಿ ಮೈಸೂರು ಹೆದ್ದಾರಿ ರಸ್ತೆಯಲ್ಲಿ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಪರಿಸರದಲ್ಲಿ ಸಂಪಾಜೆ ಕಡೆಯಿಂದ ಸಮಯ 3.45 ಗಂಟೆಗೆ ಸುಳ್ಯ ಕಡೆಗೆ ಕೆಎ 09 ಎಂಜಿ 5880 ನಂಬ್ರದ ಕಾರಿನ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಓವರ್ಟೇಕ್ ಮಾಡುತ್ತ ತನ್ನ ಕಾರನ್ನು ಚಾಲನೆ ಮಾಡಿದಲ್ಲದೇ ಕಾರಿನಲ್ಲಿ ಪ್ರಯಾಣಿಸುತಿದ್ದ ಇತರ 5 ಜನ ಸಹ ಪ್ರಯಾಣಿಕರು ಕಾರಿನ ಒಳಗಿನಿಂದ ಕಾರಿನ ಕಿಟಕಿಗಳ ಮುಖಾಂತರ ಹೊರ ಭಾಗಕ್ಕೆ ನಿಂತು ಪ್ರಯಾಣಿಸುತ್ತ ಬೊಬ್ಬೆ ಹಾಕುತ್ತ ದಾಂದಲೆ ಮಾಡಿಕೊಂಡು ಪ್ರಯಾಣಿಸುತ್ತಿರುವ ಬಗ್ಗೆ ವಿಡಿಯೋ ಮಾಡಿ ಕಳುಹಿಸಿರುವ ಬಗ್ಗೆ ತಿಳಿಸಿದ್ದು, ಸ್ಥಳೀಯ ನಿವಾಸಿರವರು ಕಳುಹಿಸಿದ ವಿಡಿಯೋವನ್ನು ಪರಿಶೀಲನೆ ಮಾಡಿದಾಗ ಕೆಎ 09 ಎಂಜಿ 5880 ನಂಬ್ರದ ಕಾರಿನ ಚಾಲಕನು ಮಾನವ ಜೀವಕ್ಕೆ ಅಪಾಯ ಉಂಟಾಗುವ ರೀತಿಯಲಿ ತನ್ನ ಕಾರಿನಲ್ಲಿ ಸಹ ಪ್ರಯಾಣಿಕರನ್ನು ಕಾರಿನ ಕಿಟಕಿಗಳ ಮುಖಾಂತರ ಹೊರ ಬಾಗಕ್ಕೆ ನಿಲ್ಲಿಸಿಕೊಂಡು ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಚಾಲನೆ ಮಾಡಿಕೊಂಡು ಬಂದಿರುದರಿಂದ ಕಾರಿನ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ಪಿರ್ಯಾದಿಯಾಗಿರುತ್ತದೆ.





































