ಅಡಿಗಳ್ ಶ್ರಿನಿವಾಸ ಭಟ್ ಇನ್ನೂ ನೆನಪು ಮಾತ್ರ
ಕಾರ್ಕಳ : ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ಹಾಗೂ ಸಹಪರಿವಾರಿ ದೇವರುಗಳ ಪ್ರಧಾನ ಅರ್ಚಕರಾಗಿದ್ದ ಅಡಿಗಳ್ ಶ್ರಿನಿವಾಸ ಭಟ್(99)
ವೈಕುಂಠ ಶ್ರೀಹರಿಯ ಪಾದ ಕಮಲದಲ್ಲಿ ಐಕ್ಯರಾಗಿದ್ದಾರೆ.
ಸುಮಾರು 65 ವರ್ಷ ಸೇವೆಯನ್ನು ನಡೆಸಿಕೊಂಡು ಕಾಯೇನ ವಾಚ ಮನಸ್ಸ ತ್ರಿಕರಣ ಪೂರಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ನಿರಂತರ ದೇವಳದ ಭಕ್ತರಿಗೆ ಅಕ್ಕರೆಯ ಗಂಧ ಪ್ರಸಾದವನ್ನು ನೀಡಿ, ಭಕ್ತರ ಪಾಲಿಗೆ ನಡೆದಾಡುವ ಸೋಮನಾಥನೆಂದು ಹೆಸರುವಾಸಿಯಾಗಿದ್ದರು.





















