ಅಡವಿ ಜನರ ಸಮಸ್ಯೆ ಆಲಿಸಿದ ಶಾಸಕ ವಿ.ಸುನೀಲ್ಕುಮಾರ್
ಆಡಂಬರ, ಅಬ್ಬರದ ಪ್ರಚಾರವಿಲ್ಲದೇ ಅಡವಿಯೊಳಗೆ ಗ್ರಾಮ ವಾಸ್ತವ್ಯ
ಕಾರ್ಕಳ: ಪಶ್ಚಿಮಘಟ್ಟ ತಪ್ಪಲು ತೀರಾ ಪ್ರದೇಶವಾಗಿರುವ ಈದು ಗ್ರಾಮವು ಕಾರ್ಕಳ-ಬೆಳ್ತಂಗಡಿ-ಮೂಡಬಿದ್ರಿ ತಾಲೂಕುಗಳ ಗಡಿಭಾಗದಲ್ಲಿದೆ. 2003ರಲ್ಲಿ ಈದು ಗ್ರಾಮದ ಬೊಲ್ಲೊಟ್ಟು ರಾಮಪ್ಪ ಪೂಜಾರಿಯ ಮನೆಯಲ್ಲಿ ಪೊಲೀಸರು ನಡೆಸಿದ ಎನ್ಕೌಂಟರ್ಗೆ ಹಾಜಿಮ್ಮಾ, ಪಾರ್ವತಿ ಬಲಿಯಾಗಿರುವ ಮೂಲಕ ದೇಶದಲ್ಲಿ ಈದು ಗ್ರಾಮ ಸುದ್ದಿಗ್ರಾಸ್ತವಾಗಿತ್ತು. ಆ ಮೂಲಕ ನಕ್ಸಲ್ ಪೀಡಿತ ಪ್ರದೇಶವೆಂದು ಗುರುತಿಸಿಕೊಂಡಿತ್ತಲ್ಲದೇ ನಕ್ಸಲ್ ಪ್ಯಾಕೇಜ್ ಬಿಡುಗಡೆಗೆ ಕಾರಣವೂ ಆಗಿತ್ತು.
ದೀಪದಡಿಯಲ್ಲಿ ಕತ್ತಲು ಎಂಬoತೆ ನಕ್ಸಲ್ ಪ್ಯಾಕೇಜ್ ಬಿಡುಗಡೆಗೆ ಕಾರಣವಾಗಿದ್ದ ಈದು ಗ್ರಾಮದಲ್ಲಿ ಕೆಲ ಭಾಗಗಳಲ್ಲಿ ಇನ್ನೂ ಮೂಲ ಸೌಕರ್ಯದ ಕೊರತೆ ಎದುರಾಗಿದೆ.
ಕರ್ನಾಟಕ ರಾಜ್ಯವು ಪ್ರಸಕ್ತ ದಿನದಲ್ಲಿ ನಕ್ಸಲ್ ಮುಕ್ತ ರಾಜ್ಯವೆಂದು ಗುರುತಿಸಿಕೊಂಡಿದ್ದು, ಇದೇ ವೇಳೆಗೆ ಈದು ಗ್ರಾಮದ ಕನ್ಯಾಲುವಿನ ಆದಿವಾಸಿಯ ಮನೆಯೊಂದರಲ್ಲಿ ಶಾಸಕ ವಿ.ಸುನೀಲ್ ಕುಮಾರ್ ಫೆಬ್ರವರಿ 13ರಂದು ಗ್ರಾಮವಾಸ್ತವ್ಯ ಹೂಡಿದ್ದರು.
ಗುರುವಾರ ಸಂಜೆಯಾಗುತ್ತಿದ್ದoತೆ ಶಾಸಕ ವಿ.ಸುನೀಲ್ ಕುಮಾರ್ ಅವರು ಗ್ರಾಮಸ್ತರೊಂದಿಗೆ ಹೊಸ್ಮಾರು ಪೇಟೆಯಿಂದ ಸುಮಾರು 15 ದೂರದಲ್ಲಿ ಈದು ಗ್ರಾಮದ ದಟ್ಟ ಅರಣ್ಯದೊಳಗೆ ಪ್ರವೇಶಿಸಿದರು.
ಆದಿವಾಸಿ ಸಮುದಾಯದ ದಿನೇಶ್ ಗೌಡ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಗ್ರಾಮಸ್ಥರ ಮೂಲ ಸೌಕರ್ಯ ಹಾಗೂ ಬದುಕು ನಿರ್ವಹಣೆಯ ಕುರಿತು ಹಲವು ಸಮಸ್ಸೆ-ವಿಚಾರಗಳನ್ನು ಆಲಿಸಿ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ದಟ್ಟ ಅರಣ್ಯದೊಳಗೆ 11 ಕುಟುಂಬಗಳು


ಈದು ಗ್ರಾಮದ ಕನ್ಯಾಲು ಭಾಗದ ಕಟ್ಟಾರಣ್ಯದಲ್ಲಿ ಆದಿವಾಸಿ ಮಲೆ ಕುಡಿಯ ಸಮುದಾಯದ 11 ಕುಟುಂಬಗಳು ವಾಸವಾಗಿದೆ. ಕೃಷಿ ಅವಲಂಬಿತರು. ಜಾನುವಾರು, ಕೋಳಿ ಸಾಕಾಣಿಕೆ ಮೂಲಕ ಅವರೆಲ್ಲರೂ ಜೀವನ ಸಾಗಿಸುತ್ತಾ ಬಂದಿದ್ದಾರೆ. ಸಾವಯವ ಕೃಷಿಗೆ ಒತ್ತುಕೊಟ್ಟು ಸ್ವಾಭಿಮಾನದಿಙದ ಬದುಕು ಸಾಗಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ವಿದ್ಯಾವಂತರನ್ನಾಗಿಸುವ ಪಣ ತೊಟ್ಟವರಿವರು. ಆ ಮೂಲಕ ಸಮಾಜಕ್ಕೆ ತಾವು ಮಾದರಿಗಳಾಗಬೇಕೆoಬ ಕನಸ್ಸು ಕಂಡಿದ್ದಾರೆ.
ಪ್ರಕೃತಿದತ್ತ ನೀರನ್ನು ಬಳಸಿ ನೈಸರ್ಗಿಕವಾಗಿ ವಿದ್ಯುತ್ ಉತ್ಪಾದನೆ ಮಾಡಿ ಬದುಕಿಗಾಗಿ ಬಳಕೆ ಮಾಡುವ ಇವರ ಸತ್ಕಾರ್ಯಕ್ಕೆ ಇದೇ ಸಂದರ್ಭದಲ್ಲಿ ಶಾಸಕ ವಿ.ಸುನೀಲ್ ಕುಮಾರ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕುಂದು ಕೊರತೆ ಆಲಿಸಿ ಅಹವಾಲು ಪತ್ರ ಸ್ವೀಕರಿಸಿ ಕಾರ್ಯಗತ ಗೊಳಿಸುವ ಭರವಸೆತನ್ನು ಶಾಸಕ ಸುನೀಲ್ ಕುಮಾರ್ ನೀಡಿದ್ದಾರೆ.
ಅದಿವಾಸಿ ದಂಪತಿಗಳಿoದ ಆತಿಥ್ಯ
ಆದಿವಾಸಿ ಮನೆಯಲ್ಲಿಯೆ ಉಳಿದುಕೊಂಡು ಉಟೋಪಚಾರವನ್ನು ಸ್ವೀಕರಿಸಿದರು. ದಿನೇಶ್ ಗೌಡ ಪುಷ್ಪ ದಂಪತಿಗಳ ಜೊತೆಗೆ ವಸಂತ ಗೌಡ, ಸತೀಶ್ ಅವರೊಂದಿಗೆ ಸಮಾಲೋಚನೆ ನಡೆಸಿ ಕಾಡಿನೊಳಗಡೆ ನಿವಾಸಿಗಳು ಅನುಭವಿಸುವ ಸಮಸ್ಯೆಗಳು, ಅಲ್ಲಿನ ಮೂಲಭೂತ ಸೌಕರ್ಯ. ಸಮುದಾಯದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ಈ ಕುಟುಂಬಗಳ ಅಭಿವೃದ್ದಿಗೆ ಸರಕಾರ ಮಟ್ಟದಲ್ಲಿ ಅನುದಾನ ತರಿಸುವ ಪ್ರಯತ್ನ ನಡೆಸುವ ಭರವಸೆ ನೀಡಿದರು. ಪರಿಸರದ ದೇವಸ್ಥಾನ, ದೈವಸ್ಥಾನ, ಕುಲಕಸುಬು, ಕೃಷಿ ಸಂಬoದಿತ ಸಮಸ್ಯೆಗಳನ್ನು ಶಾಂತಚಿತ್ತದಿoದ ಆಲಿಸಿ ಸ್ಪಂದನೆ ನೀಡಿದರು.
ಫೆಬ್ರವರಿ 14ರಂದು ನೂರಾಲ್ ಬೆಟ್ಟು ಕನ್ಯಾಲು ನಲ್ಲಿ ಮುಜಿಲ್ನಾಯ ದೈವಸ್ಥಾನದ ಭೂಮಿ ಪೂಜೆಯಲ್ಲೂ ಪಾಲ್ಗೊಂಡರು.



































