ಅಜೆಕಾರು ರಾಮ ಮಂದಿರದಲ್ಲಿ ಸೀತಾರಾಮ ಕಲ್ಯಾಣ

Picture of RB NEWS

RB NEWS

Bureau Report

ವರದಿ: ಡಾ. ಮಾಲತಿ ಪೈ

ಅಜೆಕಾರು: ಅಜೆಕಾರು ಶ್ರೀರಾಮ ಮಂದಿರದ ರಜತ ಮಹೋತ್ಸವ ಹಾಗೂ ಶ್ರೀರಾಮ ಭಜನಾ ಮಂಡಳಿಯ ಸುವರ್ಣ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಭಜನಾಮಂಗಲ, ಭಜನಾ ಸಂಭ್ರಮ, ಭಜನಾ ಸಂಗಮ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ಜರುಗಿ, “ಸೀತಾರಾಮ ಕಲ್ಯಾಣೋತ್ಸವ”ದೊಂದಿಗೆ ಸಂಪನ್ನವಾಯಿತು.

ಪರಮಾತ್ಮನ ಕಲ್ಯಾಣೋತ್ಸವದ ಉದ್ದೇಶವೇ “ಲೋಕ ಕಲ್ಯಾಣ” ಎಂದು ವೇ.ಮೂ.ಚೇಂಪಿ ಶ್ರೀಕಾಂತ ಭಟ್ ರವರು ಮಹೋತ್ಸವದ ನಿರೂಪಕರಾಗಿ ನುಡಿದರು.

ಜೊತೆಗೆ ವಿವಾಹದ ಮಹತ್ವ ಹಾಗೂ ವಿಧಿವಿಧಾನಗಳನ್ನು ಮಾರ್ಮಿಕವಾಗಿ ತಮ್ಮ ನಿರೂಪಣೆಯುದ್ದಕ್ಕೂ ವಿವರಿಸಿದರು .

ಕಲ್ಯಾಣೋತ್ಸವವು ಗೋಧೂಳಿ ಲಗ್ನ ಮುಹೂರ್ತದಲ್ಲಿ ನಡೆಯಿತು.

ಸೇವಾಕರ್ತರಾದ ವಿಠಲ ಶೆಣೈ ಅವರ ಕುಟುಂಬಸ್ಥರ ನಿವಾಸದಿಂದ ವಧುವಿನ ಕಡೆಯವರ ಹಾಗೂ ರಾಮನಾಥ ಶೆಣೈ ಕುಟುಂಬಸ್ಥರ ನಿವಾಸದಿಂದ ವರನ ಕಡೆಯವರ ವೈಭವದ ದಿಬ್ಬಣವು ಪೇಟೆಯಲ್ಲಿ ಆಗಮಿಸಿ ಜನರ ಮನಸೂರೆಗೊಂಡಿತು. ಕಲ್ಯಾಣೋತ್ಸವದ ಬಳಿಕ ಶ್ರೀದೇವರ ಸಾನಿಧ್ಯದಲ್ಲಿ “ಅಷ್ಠಾವಧಾನ” ಕಾರ್ಯಕ್ರಮ ನೆರವೇರಿತು. ಮುನಿಯಾಲು ವಾಮನ ಭಟ್ ನೇತೃತ್ವದ ವೈದಿಕವ್ರಂದ ಕಲ್ಯಾಣೋತ್ಸವದ ದೈವಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಶ್ರೀರಾಮ ಮಂದಿರ ಟ್ರಸ್ಟ್ ಮತ್ತು ರಜತ-ಸುವರ್ಣ ಸಂಭ್ರಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಜೆಕಾರಿನ ಜಿ.ಎಸ್. ಬಿ. ಸಮಾಜವು ಆಸುಪಾಸಿನ ಸರ್ವ ಸಮಾಜದವರ ಉಪಸ್ಥಿತಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನನಸಾಗಿಸಿಕೊಂಡು ಧನ್ಯತೆಯನ್ನು ಪಡೆಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top