ಉಡುಪಿ: ಅಖಿಲ ಭಾರತ ಮೀನುಗಾರರ ಮತ್ತು ಮೀನು ಕಾರ್ಮಿಕರ ಫೆಡರೇಶನ್(AIFFWF) ನ ಅಖಿಲ ಭಾರತ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸಭೆಯು ಅಗಸ್ಟ್ 31ಮತ್ತು ಸಪ್ಟೆಂಬರ್ 01-2024ರಂದು ಕರ್ನಾಟಕದ ಉಡುಪಿಯ ಅಜ್ಜರಕಾಡಿನಲ್ಲಿ ಇರುವ ವಿಮಾ ನೌರರ ಸಂಘದ ಸಭಾಂಗಣದಲ್ಲಿ ಜರುಗಲಿರುವುದು.
ದೇಶದಲ್ಲಿ ಇಂದು ಮೀನುಗಾರರ ಮತ್ತು ಮೀನು ಕಾರ್ಮಿಕರ ನೈಜ ಸಮಸ್ಯೆಗಳ ಬಗ್ಗೆ, ಬೇರೆ, ಬೇರೆ ರಾಜ್ಯ ಗಳಲ್ಲಿ ಇರುವ ಮೀನುಗಾರರಿಗೆ ಸರಕಾರದ ಸವಲತ್ತುಗಳ ಬಗ್ಗೆ, ಒಳನಾಡು ಮೀನುಗಾರಿಕೆಗೆ ಸರಕಾರದಿಂದ ಸಿಗುವ ಸವಲತ್ತುಗಳು ಮತ್ತು ಮೀನು ,ಸಿಗಡಿ ಸಾಕಾಣಿಕೆಗೆ ಸರಕಾರದಿಂದ ಸಿಗುವ ಸಹಾಯ ಧನ ಕುರಿತು ಹಾಗೂ ಮೀನು ಕಾರ್ಮಿಕರ ಸಮಸ್ಯೆ ಗಳ ಬಗ್ಗೆ ಎರಡು ದಿನಗಳ ಕಾಲ ಬೇರೆ ಬೇರೆ ರಾಜ್ಯದಿಂದ ಬಂದ ಮೀನುಗಾರ ಮುಖಂಡರು ಚರ್ಚೆ ನಡೆಸಲಿದ್ದಾರೆ.
ಅಖಿಲಭಾರತ ಮೀನುಗಾರರ ಫೆಡರೇಶನ್ ನ ರಾಷ್ಟ್ರೀಯ ಅಧ್ಯಕ್ಷ ರಾದ ದೇಬಾಶಿಷ್ ಬರ್ಮನ್,ಪ್ರಧಾನ ಕಾರ್ಯದರ್ಶಿ ಪೌಲುವಿಲ್ಲಾ ಸ್ಟ್ಯಾನ್ಲಿ,ಕೋಶಾಧಿಕಾರಿ ಜಿ.ಮಮತಾ
ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಷ್ಟ್ರಾಧ್ಯಕ್ಷರ ಕೆ.ಹೇಮಲತಾ ಹಾಗೂ ಪಶ್ಚಿಮ ಬಂಗಾಳ, ತ್ರಿಪುರ, ಕೇರಳ, ತಮಿಳುನಾಡು,ತೆಲಂಗಾಣ, ಒರಿಸ್ಸಾ,ಬಿಹಾರ,ಕರ್ನಾಟಕ, ಮಹಾರಾಷ್ಟ್ರ, ಹಾಗೂ ಇನ್ನಿತರ ರಾಜ್ಯದಿಂದ ಪ್ರಮುಖ ಮೀನುಗಾರರ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.


























