ವಿಶ್ವ ಹಿಂದೂ ಪರಿಷತ್ ನ ಷಷ್ಠಿ ಪೂರ್ತಿ ಸಮಾರಂಭ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ರಾಷ್ಟ್ರದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ ಅರುವತ್ತು ವರ್ಷ ಪೂರ್ಣಗೊಂಡ ನೆನಪಿನಲ್ಲಿ ಕನ್ನಡ ಭವನದಲ್ಲಿ ಆಗಸ್ಟ್ 31 ರಂದು ಷಷ್ಠಿ ಪೂರ್ತಿ ಸಂಭ್ರಮಾಚರಣೆ ಜರಗಿತು.
ಮೂಡುಬಿದಿರೆ ಜೈನಮಠದ ಡಾ. ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಚನ ನೀಡಿ ದೇಶಿಯರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ರಾಷ್ಟ್ರೀಯ ಭಾವನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಅಖಂಡ ಭಾರತವು ಮತ್ತೊಮ್ಮೆ ಒಂದಾಗಿ ಬೆಳಗಬೇಕಾದದು ಇಂದಿನ ಅಗತ್ಯವಾಗಿದೆ. ಎಲ್ಲರಲ್ಲೂ ಏಕತೆ, ಒಗ್ಗಟ್ಟು, ಸಹೋದರ ಭಾವನೆ, ಎಲ್ಲದೊಂದಿಗೆ ಸಹಕರಿಸಿ ಬಾಳುವ ದಯಾಪರತೆ ಬೆಳೆಯಲಿ ಎಂದು ಹಾರೈಸಿದರು.
ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು ರಾಷ್ಟ್ರೀಯ ಭಾವನೆ ಉದ್ದೀಪಿಸುವ ಮಾತುಗಳನ್ನಾಡಿ ಪರಿಷತ್ ನೊಂದಿಗೆ ಎಲ್ಲರೂ ಸೇರಿ ಬೆಳೆಸಬೇಕಾಗಿದೆ ಎಂದು ಕೇಳಿಕೊಂಡರು. ವೇದಿಕೆಯಲ್ಲಿ ವಿ ಎಚ್ ಪಿ ಕಾರ್ಯಧ್ಯಕ್ಷ ಶಾಮ ಹೆಗಡೆ, ಪುತ್ತಿಗೆ ಅನಂತ ಕೃಷ್ಣ ಭಟ್, ದೇವಿಪ್ರಸಾದ್ ಶೆಟ್ಟಿ ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿ ಸುಚೇತನ ಜೈನ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶ್ಯಾಮ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಶಾಂತರಾಮ ಕುಡ್ವ ಕಾರ್ಯಕ್ರಮ ನಿರ್ವಹಿಸಿದರು.





















