ಅಖಂಡ ಭಾರತದ ಸಂಕಲ್ಪದೊಂದಿಗೆ ಪಂಜಿನ ಮೆರವಣಿಗೆ
ಮೂಡುಬಿದಿರೆ : ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ದೇಶ ಸ್ವಾತಂತ್ರ್ಯ ಪಡೆದ ಅಗಸ್ಟ್ 15ರ ಹಿಂದಿನ ದಿನದ ರಾತ್ರಿಯ ವಿಶೇಷ ಸಂದರ್ಭವನ್ನು ನೆನಪು ಮಾಡುವಂತಹ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಘಟಕವು ಪಂಜಿನ ಮೆರವಣಿಯ ಮೂಲಕ ಆಚರಿಸಲಾಯಿತು.



ಈ ಪ್ರಯುಕ್ತ ಸಾವಿರ ಕಂಬದ ಬಸದಿಯಿಂದ ಪ್ರಾರಂಭಗೊಂಡು ಹೊರಟ ಪಂಜಿನ ಮೆರವಣಿಯು ಸಮಾಜ ಮಂದಿರದಲ್ಲಿ ಒಟ್ಟು ಸೇರುವ ಮೂಲಕ ಸಂಪನ್ನಗೊಂಡಿತು.
ಪ್ರಮುಖರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ದಾರಿಯದಕ್ಕೂ ಅಖಂಡ ಭಾರತದ ಜಯ ಘೋಷಗಳು ಮೊಳಗಿದವು. ವಿಶ್ವ ಹಿಂದೂ ಪರಿಷತ್ ನ ಎಲ್ಲ ಪ್ರಮುಖರೂ ಮೆರವಣಿಗೆಯ ನೇತೃತ್ವವನ್ನು ವಹಿಸಿದರು.




































