ಅಕ್ರಮ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯಸಾಣೂರು ಗ್ರಾಮ ಪಂಚಾಯತ್‌ನ ಅವ್ಯವಹಾರ ಬಯಲು

Picture of RB NEWS

RB NEWS

Bureau Report


ಕಾರ್ಕಳ: ವಿನೂತನ ಕಾರ್ಯಕ್ರಮಗಳಿಂದ ಒಂದು ಕಾಲದಲ್ಲಿ ರಾಷ್ಟçಮಟ್ಟದಲ್ಲಿ ಸುದ್ದಿ ಮಾಡಿದ್ದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತ್, ಈಗ ಅಕ್ರಮ ಚಟುವಟಿಕೆಗಳಿಗೆ ಸಪೋರ್ಟ್ ಮಾಡಿರುವುದು ಬೆಳಕಿಗೆ ಬಂದಿದೆ. ಮೆಸ್ಕಾಂ ಅಧಿಕಾರಿಯೊಬ್ಬರ ಆಮಿಷಕ್ಕೆ ಬಲಿಯಾಗಿ ಕಾನೂನನ್ನು ಮೀರಿ ವರ್ತಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳು ಸಾಬೀತುಪಡಿಸಿದೆ.
ಸಾಣೂರು ಪುಲ್ಕೇರಿ ಬೈಪಾಸ್ ಬಳಿ ಈ ಬಹುಮಹಡಿ ಅಕ್ರಮ ಕಟ್ಟಡ ತಲೆ ಎತ್ತಿದೆ. ಭಾನುವಾರ ಉದ್ಘಾಟನೆಯ ಭಾಗ್ಯವನ್ನು ಸಾಣೂರು ಗ್ರಾಮ ಪಂಚಾಯತ್ ಆಡಳಿತ ಅನುಗ್ರಹಿಸಿದೆ. ಗ್ರಾಮೀಣಾಭಿವೃದ್ದಿ, ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆಯ ಕೃಪಾಕಟಾಕ್ಷ ಈ ಕಟ್ಟಡಕ್ಕಿರುವುದರಿಂದ, ಯಾರನ್ನು ಖ್ಯಾರ್ ಮಾಡದೆ ಕಾರ್ಯಾರಂಭಗೊOಡಿರುವುದು ಕಾನೂನು ಎನ್ನುವುದು ಬಡವರಿಗೆ ಮಾತ್ರ ಎನ್ನುವುದನ್ನು ಸಾಕ್ಷಿಕರಿಸಿದೆ.
ಮೆಸ್ಕಾಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಿರೀಶ್ ರಾವ್ ಅವರು ತನ್ನ ಪತ್ನಿಯ ಹೆಸರಿನಲ್ಲಿ ಈ ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಕರ್ತವ್ಯದಲ್ಲಿದ್ದುಕೊಂಡೇ ಹುಟ್ಟೂರಿನಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿ ಬಹುಮಹಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಸಾಣೂರು ಗ್ರಾಮ ಪಂಚಾಯತ್‌ನ ಜತೆಗೂಡಿಕ್ಕೊಂಡು ಈ ಮಹತ್ತರ ಕೆಲಸಕ್ಕೆ ಕೈ ಹಾಕಿ ತಾತ್ಕಾಲಿಕವಾಗಿ ಜಯ ಗಳಿಸಿಕೊಂಡಿದ್ದಾರೆ.


ಕಟ್ಟಡ ಪರವಾನಿಗೆ :
ಜಾಗವನ್ನು ಖರೀದಿಸಿ ನೋಂದಾವಣೆ ಮಾಡಿಕೊಂಡ ಸಂದರ್ಭ ಈ ಜಾಗವು ರಾಜ್ಯ ಹೆದ್ದಾರಿಗೆ ತಾಗಿಕೊಂಡಿಲ್ಲ ಮತ್ತು ಯಾವುದೇ ಕಟ್ಟಡವನ್ನು ಹೊಂದಿಲ್ಲ ಎನ್ನುವುದನ್ನು ದಾಖಲೀಕರಣ ಮಾಡಲಾಗಿತ್ತು. ಆದರೆ ಸಾಣೂರು ಗ್ರಾಮ ಪಂಚಾಯತ್ ಖರೀದಿಸಿದ ಜಾಗದಲ್ಲಿ ಹಳೆ ಕಟ್ಟಡವಿದ್ದು, ಅದರ ದುರಸ್ತಿಗೆ ಅನುಮತಿ ನೀಡಿತ್ತು. ಆದರೆ ಅಲ್ಲಿ ಹೊಸ ಕಟ್ಟಡವೇ ನಿರ್ಮಾಣ ಮಾಡಲಾಗಿತ್ತು. ಹಳೆ ಕಟ್ಟಡವಿರುವುದಕ್ಕೆ ಅಲ್ಲಿ ಯಾವುದೇ ದಾಖಲೆಗಳು ಗ್ರಾಮ ಪಂಚಾಯತ್‌ನಲ್ಲೂ ಇಲ್ಲ. ಈ ಹಿಂದೆ ಕಾರ್ಯನಿರ್ವಹಿಸಿದ ಪಿಡಿಒ ಅವರು ಈ ಬಗ್ಗೆ ದಾಖಲೆಗಳನ್ನು ನೀಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.


ಲೋಕಾಯುಕ್ತಕ್ಕೆ ದೂರು :
ಮಾಹಿತಿ ಹಕ್ಕು ಅಡಿ ಪ್ರಶ್ನಿಸಿದ ಸಂದರ್ಭ ಸಮರ್ಪಕ ಮಾಹಿತಿ ಲಭಿಸದೆ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ನಿಡಿದ್ದಾರೆ. ಅಕ್ರಮ ಕಟ್ಟಡಕ್ಕೆ ತಡೆಯಾಜ್ಞೆ ಹಾಗೂ ಕಾನೂನು ಬಾಹಿರವಾಗಿ ನಡೆದುಕೊಂಡ ಗ್ರಾಮೀಣಾಭಿವೃದ್ದಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಲೋಕೋಪಯೋಗಿ ಇಲಾಖೆಯು ಈ ಅಕ್ರಮದಲ್ಲಿ ಪಾಲು ಪಡೆದಿರುವ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top