ಅಂತ್ಯ ಕಂಡ ಉಗ್ರ ಜೈಎ-ಮೊಹಮ್ಮದ್‌ ಸಂಘಟನೆಯ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ ಇಸಾರ್

Picture of RB NEWS

RB NEWS

Bureau Report

 ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರತದ ಮತ್ತೊಬ್ಬ ಶತ್ರುವಿನ ಆಟಕ್ಕೆ ತೆರೆ ಬಿದ್ದಿದೆ. ಭಯೋತ್ಪಾದನಾ ಗುಂಪು ಜೈಶ್-ಎ-ಮೊಹಮ್ಮದ್‌ ಸಂಘಟನೆಯ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ ಇಸಾರ್ ನಿಧನ ಹೊಂದಿದ್ದಾನೆ.

ಜೈಶ್-ಎ-ಮೊಹಮ್ಮದ್‌ ಸಂಘಟನೆಯ ಕಮಾಂಡರ್, ಉಗ್ರ ಮೌಲಾನಾ ಅಬ್ದುಲ್ ಅಜೀಜ್ ಇಸಾರ್ ನಿಗೂಢವಾಗಿ ಸಾವನ್ನಪ್ಪಿದ್ದು, ಈತನ ಸಾವು ಗುಪ್ತಚರ ವಲಯಗಳಿಂದ ಭಯೋತ್ಪಾದಕ ಜಾಲದವರೆಗೆ ಸಂಚಲನ ಮೂಡಿಸಿದೆ. ಈ ಕುಖ್ಯಾತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಭಾರತದ ವಿರುದ್ಧ ವಿಷ ಕಾರಿದ್ದ. ಆದರೆ ಅವನು ಹೇಗೆ ಸತ್ತನು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ವರದಿಗಳ ಪ್ರಕಾರ, ಜೈಶ್‌ನ ಪ್ರಧಾನ ಕಚೇರಿಯೂ ಇರುವ ಪಾಕಿಸ್ತಾನದ ಬಹವಾಲ್‌ಪುರದಲ್ಲಿ ಅವನು ಶವವಾಗಿ ಪತ್ತೆಯಾಗಿದ್ದಾನೆ.

ವರದಿಗಳ ಪ್ರಕಾರ, ಕಳೆದ ತಿಂಗಳು ಇದೇ ಉಗ್ರ ಉಗ್ರ ಮೌಲಾನಾ ಅಬ್ದುಲ್ ಅಜೀಜ್ ಇಸಾರ್, ಜೈಶ್ ಉಗ್ರ ಸಂಘಟನೆಯ ರ್ಯಾಲಿಯಲ್ಲಿ ಭಾರತದ ವಿರುದ್ಧ ವಿಷ ಕಾರಿದ್ದ. ಭಾರತವೂ ಯುಎಸ್ಎಸ್ಆರ್ ನಂತೆಯೇ ಗತಿಯನ್ನು ಅನುಭವಿಸುತ್ತದೆ ಎಂದು ವೇದಿಕೆಯಿಂದಲೇ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ಆದರೆ ಅವನೇ ಈಗ ಬೀದಿ ಹೆಣವಾಗಿ ಬಿದ್ದಿದ್ದಾನೆ. ಜೈಶ್ ಮತ್ತು ಪಾಕಿಸ್ತಾನ ಸರ್ಕಾರ ಈ ಸಾವಿನ ಬಗ್ಗೆ ಮೌನ ವಹಿಸಿವೆ. ಜೈಶ್ ಜೊತೆ ಸಂಬಂಧ ಹೊಂದಿರುವ ಸಾಮಾಜಿಕ ಮಾಧ್ಯಮ ಖಾತೆಗಳು ಅವನ ಸಾವು ಮತ್ತು ಅಂತ್ಯಕ್ರಿಯೆಯನ್ನು ದೃಢಪಡಿಸಿವೆ, ಆದರೆ ಸಾವಿಗೆ ಕಾರಣದ ಬಗ್ಗೆ ಒಂದು ಮಾತನ್ನೂ ಏನೂ ಹೇಳಿಲ್ಲ.

‘ಬ್ರೈನ್ ವಾಶ್ ಮಾಸ್ಟರ್’ ಡಮಾರ್

ಅಂತ್ಯ ಕಂಡ ಜೈಎ-ಮೊಹಮ್ಮದ್‌ ಸಂಘಟನೆಯ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ ಇಸಾರ್


ವರದಿಗಳ ಪ್ರಕಾರ, ಅಬ್ದುಲ್ ಅಜೀಜ್ ಜೈಶ್-ಎ-ಮೊಹಮ್ಮದ್‌ನ ಪಂಜಾಬ್ ಪ್ರಾಂತ್ಯದಲ್ಲಿ ಮತ್ತು ವಿಶೇಷವಾಗಿ ಬಹಾವಲ್ಪುರ್, ರಾವಲ್ಪಿಂಡಿಯಂತಹ ಪ್ರದೇಶಗಳಲ್ಲಿ ಭಾರತದ ವಿರುದ್ಧ ಯುವಕರನ್ನು ಮೂಲಭೂತವಾದಕ್ಕೆ ಪ್ರಚೋದಿಸುತ್ತಿದ್ದನು. ಅವನ ಸಾವು ಜೈಶ್‌ಗೆ, ವಿಶೇಷವಾಗಿ ಸ್ಥಳೀಯ ನೇಮಕಾತಿ ಮತ್ತು ಬ್ರೈನ್‌ವಾಶ್ ಜಾಲಕ್ಕೆ ದೊಡ್ಡ ಹೊಡೆತವಾಗಿದೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top