ಅಂತಾರಾಜ್ಯ ಕ್ರೀಡಾಕೂಟದಲ್ಲಿ ಕಾರ್ಕಳ ರಾಮಕ್ಷತ್ರಿಯ ಸಮಾಜಕ್ಕೆ ದ್ವಿತೀಯ ಸ್ಥಾನ

Picture of RB NEWS

RB NEWS

Bureau Report

ಕಾಸರಗೋಡು : ಕಾಸರಗೋಡು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ(ರಿ),ಯುವ ಸಂಘದ ಆಶ್ರಯದಲ್ಲಿ ಜೂನ್ 09ರಂದು ರಾಮರಾಜ ಕ್ಷತ್ರಿಯ ಸಮಾಜ ಭಾಂದವರಿಗಾಗಿ ಅಂತಾರಾಜ್ಯ ಮಟ್ಟದ ಪುರುಷರ ಹಾಗೂ ಮಹಿಳೆಯರ (ಡಬಲ್ಸ್) ಶಟಲ್ ಬ್ಯಾಟ್ಮಿಂಟನ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಕಾರ್ಕಳ ರಾಮಕ್ಷತ್ರಿಯ ಸಂಘದ ಸದಸ್ಯರಾದ ಪ್ರತೀಕ್ ಮತ್ತು
ವಿಶ್ವಾಸ್ ಜೋಡುರಸ್ತೆ, ಕಾರ್ಕಳ ಅವರು ಪುರುಷರ ಶಟಲ್ ಬ್ಯಾಟ್ಮಿಂಟನ್ (ಡಬಲ್ಸ್)ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಕಾಸರಗೋಡು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಇದರ ಜಿಲ್ಲಾಧ್ಯಕ್ಷರಾಗಿರುವ ಕಲ್ಲುಗದ್ದೆ ಮನೆತನದ ಕಮಲಾಕ್ಷ ಅಣಂಗೂರು ಹಾಗೂ ಉದಯವಾಣಿ ಪತ್ರಿಕೆಯ ಕಾಸರಗೋಡು ಜಿಲ್ಲಾ ವರದಿಗಾರ ಪ್ರದೀಪ್ ಬೇಕಲ್ ಇವರು ವಿತೇಜರಿಗೆ ಬಹುಮಾನ ವಿತರಿಸಿದರು.

ಸ್ವರ್ಧಾಳುಗಳಿಗೆ ಕಾರ್ಕಳ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಗುರುಪ್ರಸಾದ್ ರಾವ್ ಅಜೆಕಾರ್ ಮತ್ತು ಕಾರ್ಯದರ್ಶಿ ಪ್ರವೀಣ್.ಕೆ ಅವರು ಸಂಘದ ಪರವಾಗಿ ಅಭಿನಂದಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top