ಅಂಕಗಳ ಜೊತೆಗೆ ಜೀವನ ಪಾಠವನ್ನೂ ಕಲಿಯಬೇಕಾದ ಅಗತ್ಯವಿದೆ: ಮೋಹನ ಪಡಿವಾಳ
RB NEWS
Bureau Report
ಕಾರ್ಕಳ: ಅಂಕಗಳ ಜೊತೆಗೆ ಜೀವನ ಪಾಠವನ್ನೂ ಕಲಿಯಬೇಕಾದ ಅಗತ್ಯವಿದೆ: ಮೋಹನ ಪಡಿವಾಳ
ಕಾರ್ಕಳ : ಅಂಕಗಳ ಜೊತೆಗೆ ಜೀವನಪಾಠವನ್ನೂ ಕಲಿಯಬೇಕು. ನಾಯಕತ್ವವನ್ನು ಬೆಳೆಸಿಕೊಳ್ಳುವಾಗ ನಮ್ಮ ಹಿಂದೆ ಇತರರೂ ಬೆಳೆಯಬೇಕು ಅನ್ನುವ ಗುಣ ಇರಬೇಕು. ಗುರು- ಹೆತ್ತವರನ್ನು ಎಂದಿಗೂ ಮರೆಯಬಾರದು ಎಂದು ಭುವನೇಂದ್ರಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಮೋಹನ ಪಡಿವಾಳ ಅಭಿಮತ ವ್ಯಕ್ತಪಡಿಸಿದರು.
ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿಎ ಶಿವಾನಂದ ಪೈ ಮಾತನಾಡಿ, ಆಯ್ಕೆಯಾದ ವಿದ್ಯಾರ್ಥಿಗಳು ಅವರ ಜವಾಬ್ದಾರಿಯನ್ನು ಅರಿತು ಮುಂದುವರಿಯಬೇಕು. ಇದೊಂದು ನಿಮ್ಮ ಬದುಕಿಗೆ ಒದಗಿದ ಸುವರ್ಣಾವಕಾಶವೆಂದು ತಿಳಿಯಬೇಕು. ಇಲ್ಲಿ ಎಲ್ಲರೂ ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು. ನೀವು ಅವಕಾಶವನ್ನು ಕೊಡುವಾಗ ಎಲ್ಲರಿಗೂ ಹಂಚಿ ಕೊಡುವ ಮನೋಭಾವವನ್ನು ಹೊಂದಿದ್ದರೆ, ಬದುಕಿನಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ನಿಮ್ಮಲ್ಲಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಿ. ಒಬ್ಬ ವಿದ್ಯಾರ್ಥಿಯ ಭವಿಷ್ಯ ಕೇವಲ ಪುಸ್ತಕದಿಂದ ಮಾತ್ರ ರೂಪುಗೊಳ್ಳುವುದಿಲ್ಲ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ ಈಶ್ವರ ಭಟ್ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.
ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಎರ್ಮಾಳ್ ಮೋಹನ ಶೆಣೈ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ರಮೇಶ್ ಎಸ್.ಸಿ., ವಿದ್ಯಾರ್ಥಿ ಸಂಘದ ಸಂಯೋಜಕರಾದ ಪ್ರೊ ನಂದಕಿಶೋರ್ ಕೆ. ಹಾಗೂ ಆಯ್ಕೆಯಾದ ಎಲ್ಲ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಮಂಜುನಾಥ ಎ.ಕೋಟ್ಯಾನ್ ಸ್ವಾಗತಿಸಿದರು. ಅಂತಿಮ ಬಿಕಾಂ.ನ ಅನನ್ಯ ಭಟ್ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ರಮೇಶ್ ಎಸ್.ಸಿ.ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.