ಸಿಬಿಐ ತನಿಖಾ ದಳದ ಮುಖ್ಯಸ್ಥೆಯಾಗಿ ಕಾಸರಗೋಡು ಎಸ್.ಪಿ ಕನ್ನಡತಿ ಶಿಲ್ಪಾ

Picture of RB NEWS

RB NEWS

Bureau Report

ಕಾಸರಗೋಡು : ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ,ಕನ್ನಡತಿ ಶಿಲ್ಪಾ ದ್ಯಾವಯ್ಯ ಅವರನ್ನು ಸಿಬಿಐ ತನಿಖಾ ದಳದ ಮುಖ್ಯಸ್ಥ ಹುದ್ದೆಗೆ ಪರಿಗಣಿಸಲಾಗಿದೆ.

ಜಿಲ್ಲೆಯ ಪೋಲೀಸ್ ಇಲಾಖೆಯ ಮುಖ್ಯಸ್ಥರಾಗಿ ಜನಪ್ರಿಯತೆ ಪಡೆದಿದ್ದ ಇವರು ಡೆಪ್ಯುಟೇಷನ್ ಮೂಲಕ ಸಿ.ಬಿ ಐ ಹುದ್ದೆಗೇರುತ್ತಿದ್ದಾರೆ.

ಈ ಕುರಿತಾದ ಕೇಂದ್ರ ಗೃಹಖಾತೆಯ ಅನುಮತಿ ಈಗಾಗಲೇ ದೊರೆತಿತ್ತು. ಬೆಂಗಳೂರು ಕೇಂದ್ರೀಕರಿಸಿ ಡಿ.ಶಿಲ್ಪಾ ಅವರಿಗೆ ನೇಮಕಾತಿ ದೊರೆಯಲಿದೆ.

ಡೆಪ್ಯೂಟೇಷನ್ ನಲ್ಲಿ ಐದು ವರ್ಷಕ್ಕೆ ಅವರು ಸಿಬಿಐ ಯಲ್ಲಿ ಸೇವೆ ಸಲ್ಲಿಸುವರು. ಕಾಸರಗೋಡಿಗೆ ಎ.ಎಸ್ಪಿಯಾಗಿ ಮೊದಲ ಬಾರಿಗೆ ಸೇವೆಗೆ ಆಗಮಿಸಿದ್ದ ಅವರು ಬಳಿಕ ಜಿಲ್ಲಾ ಪೋಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಕೋಟಯಂ, ತಿರುವನಂತಪುರ ರೂರಲ್ ನಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದ ಅವರು ಮೂಲತಃ ಬೆಂಗಳೂರಿನವರಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top