ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ : ಅಧ್ಯಕ್ಷರಾಗಿ ಸಾಣೂರು ನರಸಿಂಹ ಕಾಮತ್ ಪುನರಾಯ್ಕೆಉಪಾಧ್ಯಕ್ಷರಾಗಿ ರಾಯಲ್ ನರೋನ್ನ ಆಯ್ಕೆ

Picture of RB NEWS

RB NEWS

Bureau Report

ಕಾರ್ಕಳ : ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಾಣೂರು ನರಸಿಂಹ ಕಾಮತ್ ಮೂರನೇ ಅವಧಿಗೆ ಅವಿರೋಧವಾಗಿ ಸರ್ವಾನುಮತದಿಂದ ಪುನರಾಯ್ಕೆ ಯಾಗಿರುತ್ತಾರೆ.

ಕಳೆದ ಮೂರು ದಶಕಗಳಿಂದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯ ರಾಗಿರುವ ಇವರು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಭಾರತಿ ಟೂರಿಸಂ ಡೆವಲಪ್ಮೆಂಟ್ ಕೋ ಆಪರೇಟರೇಟೀವ್ ಹಾಗೂ ಪರಂಪರ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿರುತ್ತಾರೆ.

ಕಳೆದ ಎರಡು ದಶಕಗಳಿಂದ ಸಹಕಾರಿ ಕ್ಷೇತ್ರದ ರಾಷ್ಟ್ರಮಟ್ಟದ ಸಂಘಟನೆ ಸಹಕಾರ ಭಾರತಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಇತ್ತೀಚೆಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿರುತ್ತಾರೆ.

ಇತ್ತೀಚೆಗೆ ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿಯೂ ಕೂಡ ಆಯ್ಕೆಯಾಗಿರುತ್ತಾರೆ.

ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಶ್ರೀ ರಾಯಲ್ ನೋರನ್ನ ರವರು ಪ್ರಗತಿಪರ ಯುವ ಕೃಷಿಕರಾಗಿದ್ದುಕೊಂಡು, ಉತ್ತಮ ಹೈನುಗಾರರಾಗಿರುತ್ತಾರೆ.

ಸಂಘದ ನೂತನ ನಿರ್ದೇಶಕರುಗಳಾಗಿ ಕೊರಗಶೆಟ್ಟಿ, ಸೋಮಶೇಖರ್, ಜಯ ಶೆಟ್ಟಿಗಾರ್, ಜಯಾನಂದ,
ಪ್ರವೀಣ ಶೆಟ್ಟಿ, ಪೂರ್ಣಿಮಾ ಕಿಣಿ, ಯಶೋಧ. ಆರ್. ಸುವರ್ಣ, ಸಂಜೀವಿ, ದಿಲೀಪ್ ಶೆಟ್ಟಿ, ಸೈಮನ್ ಡಿ’ಸೋಜ, ಶ್ರೀಧರ ಸಮಗಾರ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಚುನಾವಣಾ ಅಧಿಕಾರಿಗಳಾದ ಶಹನಾಜ್ ರವರು ಫೆಬ್ರವರಿ 17 ಸೋಮವಾರದಂದು ಬೆಳಿಗ್ಗೆ ಸಂಘದ ಆವರಣದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top