


ಸಹಕಾರ ಕಲ್ಪವೃಕ್ಷ ಪ್ರಶಸ್ತಿ ವಿಜೇತ ಎಂ ಗಣೇಶ್ ನಾಯಕ್
* ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ದೊಡ್ಮನೆ ರಸ್ತೆಯ ಗೌರಿ ದೇವಾಲಯದ ಸಮೀಪ ಇರುವ ಎಂ ಗಣೇಶ್ ನಾಯಕ್ ಬಹಳ ಉತ್ತಮ ಸಾರ್ವಜನಿಕ ಸೇವಕರು. ತಂದೆ ಎಂ ನರಸಿಂಹ ನಾಯಕ್ ಹಾಗೂ ತಾಯಿ ಲಕ್ಷ್ಮಿಬಾಯಿ ಇವರ ಪುತ್ರರಾದ ಇವರು ತಂದೆಯಿಂದ ಬಳುವಳಿಯಾಗಿ ಬಂದ ಎಲ್ಐಸಿ ಏಜೆನ್ಸಿ ಹಾಗೂ ಮೂಡುಬಿದರೆ ಕಾರ್ಪೊರೇಟಿವ್ ಸರ್ವಿಸ್ ಸೊಸೈಟಿಯ ನಿರ್ದೇಶಕತ್ವವನ್ನು ಕಳೆದ 53 ವರ್ಷಗಳಿಂದ ಸಮರ್ಥವಾಗಿ ನಿರ್ವಹಿಸಿಕೊಂಡು ಬಂದವರು.
ಈ 53 ವರ್ಷದ ನಿರ್ದೇಶಕತ್ವದಲ್ಲಿ ಹಲವಾರು ಬಾರಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಸೊಸೈಟಿಯನ್ನು ನಡೆಸಿಕೊಂಡು ಬಂದಿರುತ್ತಾರೆ. ಅಗತ್ಯವನ್ನು ಅರಸಿ ಬಂದ ಹಲವಾರು ಮಂದಿಗೆ ತನ್ನಿಂದಾದ ಸಹಾಯವನ್ನು ಬ್ಯಾಂಕಿನ ಸೌಲಭ್ಯವನ್ನು ಒದಗಿಸಿಕೊಟ್ಟು ಸಹಕರಿಸಿದವರು ಇವರು. ಗುರುತು ಪರಿಚಯದವರು ಯಾರೇ ಬ್ಯಾಂಕಿನಲ್ಲಿದ್ದಾಗ ಆಗಮಿಸಿದರೆ ಅವರ ಕೆಲಸ ಕಾರ್ಯಗಳು ಸುಗಮವಾಗುವಂತೆ ಗಣೇಶ್ ನಾಯಕ ಸಹಕರಿಸುತ್ತಿದ್ದರು.
ದೊಡ್ಮನೆ ರಸ್ತೆಯ ಬದಿಯಲ್ಲಿರುವ ಹಿರಿಯರ ಆಸ್ತಿಯನ್ನು ಉಳಿಸಿಕೊಂಡು ಅದರಲ್ಲಿ ಸಾಕಷ್ಟು ಮಂದಿಗೆ ಆಶ್ರಯವನ್ನು ಬಾಡಿಗೆ ರೂಪದಲ್ಲಿ ಒದಗಿಸಿಕೊಟ್ಟು ಸಂಭ್ರಮ ಪಟ್ಟವರು ಇವರು. ಮನೆಯಲ್ಲಿ ಪತ್ನಿ ಉಷಾ ಜಿ ನಾಯಕ್ ರೊಂದಿಗೆ ಸುಖ- ಸಂಸಾರವನ್ನು ನಡೆಸುತ್ತಿರುವ ಇವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ.
ತನ್ನ ಇಬ್ಬರು ಮಕ್ಕಳಲ್ಲಿ ಹಿರಿಯಾತ ಅರ್ಜುನ್ ನಾಯಕ್ ಬೆಂಗಳೂರಿನ ಐಬಿಎಂ ಕಂಪನಿಯ ಮೆರಾಟಿವ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ದ್ವಿತೀಯ ಪುತ್ರ ಅಶ್ವಿನ್ ನಾಯಕ್ ಕೂಡ ಇಂಜಿನಿಯರ್ ಆಗಿದ್ದು ಪ್ರಸ್ತುತ ಕೆನಡಾದ ಇನ್ಫೋಸಿಸ್ ನಲ್ಲಿ ಉದ್ಯೋಗಿಯಾಗಿದ್ದಾರೆ.





















