ಸರ್ವ ಕಾಯಿಲೆಗೆ ಏಕೈಕ ಆಸನ -ಡಾ.ಮಾಲತಿ ಪೈ

Picture of RB NEWS

RB NEWS

Bureau Report

ಸ್ತ್ರೀ ಯರಾಗಲೀ, ಪುರುಷರಾಗಲೀ ಸುಂದರವಾದ ದಷ್ಟ-ಪುಷ್ಟವಾದ ದೇಹವನ್ನು ಹೊಂದಿರಬೇಕು ಎಂದು ಬಯಸುವುದು ಸರ್ವೇ ಸಾಮಾನ್ಯ. ಇತ್ತೀಚೆಗಂತೂ ಒತ್ತಡದ ಬದುಕಿನಿಂದ ದೇಹದ ದಂಡನೆ ಮಾಡುವುದನ್ನೇ ಜನರು ಮರೆತುಬಿಟ್ಟಿದ್ದಾರೆ. ಇದರಿಂದಾಗಿ ಶುಗರ್, ಬಿ.ಪಿ, ಬೊಜ್ಜುಗಳಂತಹ ಅನೇಕ ಖಾಯಿಲೆಗಳು ಬೇಡವೆಂದರೂ ಬಂದು ಬಿಡುತ್ತದೆ.

ಬಲಿಷ್ಟವಾದ ಮಾಂಸಖಂಡಗಳು, ಸುಂದರವಾದ ಮೈಕಟ್ಟು ಮುಖ್ಯವಾಗಿ ಬೊಜ್ಜು ರಹಿತ ದೇಹ ಎಲ್ಲರಿಗೂ ಅಚ್ಚು-ಮೆಚ್ಚು. ಆದರೆ ಅಂತಹ ದೇಹ ಸೌಂದರ್ಯ ಹೊಂದಲು ಸಾಧ್ಯವೇ ಎಂದು ಯೋಚಿಸುತ್ತಿದ್ದೀರಾ?

ಹೌದು ಖಂಡಿತವಾಗಿಯು ಹೊಂದಬಹುದು. ತಮ್ಮ ಬೊಜ್ಜನ್ನು ಕರಗಿಸಿಕೊಳ್ಳಲು ಭುಜಂಗಾಸನವನ್ನು ಮಾಡುತ್ತಾರೆ. ಭುಜಂಗಾಸನವು ಹೇಗೆಲ್ಲಾ ಪರಿಣಾಮಕಾರಿ ಎಂಬುದನ್ನು ಲೇಖನದಲ್ಲಿ ತಿಳಿಸಲಾಗಿದೆ.

ಕೊನೆಯವರೆವಿಗೂ ಓದಿ, ನೀವು ಕೂಡ ನಾಜೂಕಾದ ದೇಹವನ್ನು ಪಡೆಯಬಹುದು. ಭುಜಂಗ ಎಂದರೆ ಸರ್ಪ ಎಂದರ್ಥ. ಈ ಆಸನದಲ್ಲಿ ಹೆಡೆ ಎತ್ತಿದ ಸರ್ಪದ ಆಕಾರವನ್ನು ಶರೀರವು ಹೋಲುವುದರಿಂದ, ಇದಕ್ಕೆ ‘ಭುಜಂಗಾಸನ’ ಎಂಬ ಹೆಸರು ಅನ್ವರ್ಥವಾಗಿದೆ.

1) ಎರಡೂ ಪಾದಗಳನ್ನು ಒಟ್ಟಿಗೇ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ನಿಲ್ಲಬೇಕು.

2) ಕಾಲುಗಳನ್ನು ಸ್ವಲ್ಪವೂ ಬದಲಿಸದೆ ಉಸಿರನ್ನು ಒಳಕ್ಕೆ ತೆಗೆದುಕೊಳ‍್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನೇರವಾಗಿಡಬೇಕು.

3) ಉಸಿರನ್ನು ಹೊರಕ್ಕೆ ಬಿಡುತ್ತಾ ಕಾಲುಗಳನ್ನು ಬಗ್ಗಿಸದೇ ಮುಂದಕ್ಕೆ ಬಗ್ಗಿ ಕೈಗಳನ್ನು ನೆಲದ ಮೇಲೆ ಇಡಬೇಕು.

4) ಅನಂತರ ಯಾವುದಾದರೂ ಒಂದು ಕಾಲನ್ನು ಉದಾ: ಬಲಗಾಲನ್ನು ಹಿಂದೆ ಚಾಚಿ, ಇನ್ನೊಂದು ಕಾಲನ್ನು ಎರಡು ಕೈಗಳ ಮಧ್ಯೆ ಇಟ್ಟು, ಆದಷ್ಟೂ ಸೊಂಟವನ್ನು ಕೆಳಕ್ಕೆ ಒತ್ತಿ, ಬೆನ್ನನ್ನು ಹಿಂದಕ್ಕೆ ಬಗ್ಗಿಸಿ, ತಲೆ ಎತ್ತಿ ಆಕಾಶವನ್ನು ನೋಡಬೇಕು.

5) ಅನಂತರ ಎಡಗಾಲನ್ನು ಬಲಗಾಲಿಗೆ ಸೇರಿಸಿ ಇದೇ ದೇಹವನ್ನು ನೇರವಾಗಿ ಇಡಬೇಕು.

6) ಕೈ ಮತ್ತು ಕಾಲುಗಳ ಸ್ಥಿತಿಯನ್ನು ಸ್ವಲ್ಪವೂ ಬದಲಿಸದೆ ಸೂರ್ಯನಮಸ್ಕಾರ ಸ್ಥಿತಿ 6ರಲ್ಲಿ ವಿವರಿಸಿದಂತೆ ಅಷ್ಟಾಂಗಗಳನ್ನು ಮಾತ್ರ ನೆಲಕ್ಕೆ ತಗಲಿಸಿ ‘ಸಾಷ್ಟಾಂಗ ಪ್ರಣಿಪಾತಾಸನ ಮಾಡಿಬೇಕು. ಆ ಮೇಲೆ ಸಾಷಾಂಗ ಪ್ರಜಪಾತಾಸನದಿಂದ ಶರೀರವನ್ನು ಸ್ವಲ್ಪ ಮುಂದಕ್ಕೆ ತಂದು ಚಿತ್ರದಲ್ಲಿ ತೋರಿಸಿರುವಂತೆ ಇಡೀ ಶರೀರದ ಭಾರವನ್ನು ಅಂಗೈಗಳು ಮತ್ತು ಕಾಲ ಬೆರಳುಗಳ ಮೇಲೆ ಹೊರಿಸಿ ಬೆನ್ನನ್ನು ಸಾಧ್ಯವಾದಷ್ಟೂ ಹಿಂದಕ್ಕೆ ಬಗ್ಗಿಸಬೇಕು. ಇದೇ ಸ್ಥಿತಿಯಲ್ಲಿ ಒಂದೆರಡು ನಿಮಿಷಗಳಾದರೂ ಇರುವಂತೆ ಅಭ್ಯಾಸ ಮಾಡಬೇಕು.

ಭುಜಂಗಾಸನದಿಂದ ಕೈಗಳು ಮತ್ತು ಸೊಂಟ ಬಲಶಾಲಿಯಾಗುವವು. ಮೇರುದಂಡವೂ ಹೆಚ್ಚು ಸುದೃಢವಾಗುವುದು. ಸೊಂಟ ಮತ್ತು ತೊಡೆಗಳಲ್ಲಿನ ದುರ್ಬಲತೆ ಹಾಗೂ ನೋವು ದೂರವಾಗುವುದು. ಶ್ವಾಸಕೋಶದಲ್ಲಿನ ತೊಂದರೆ ನಿವಾರಣೆಯಾಗುವುದು. ಉದರದ ಅನೇಕ ದೋಷಗಳೂ ಇಲ್ಲವಾಗುವುದು.

ದೈಹಿಕ ಹಾಗೂ ಮಾನಸಿಕವಾಗಿ ಭುಜಂಗಾನಸವು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಈ ಆಸನವನ್ನು ಈ ಕೆಳಕಂಡವರಿಗೆ ಶಿಫಾರಸ್ಸು ಮಾಡುವುದಿಲ್ಲ.

ಗರ್ಭಿಣಿಯರಿಗೆ ಈ ಭುಜಂಗಾಸನ ಅಥವಾ ಕೋಬ್ರಾ ಪೋಸ್ ಮಾಡುವಂತಿಲ್ಲ. ಮಣಿಕಟ್ಟು ಹಾಗು ಪಕ್ಕೆಲುಬು ಮುರಿದಿದ್ದರೆ ಅಂತಹವರು ಈ ಆಸನವನ್ನು ಮಾಡುವಂತಿಲ್ಲ. ಅಂಡಾಶಯ ಅಥವಾ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಈ ಆಸನವನ್ನು ಮಾಡಬಾರದು.
ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಯಾಗಿದ್ದರೂ ಕೂಡ ಈ ಆಸನವನ್ನು ಮಾಡಬೇಡಿ. ದೈಹಿಕ ಹಾಗೂ ಮಾನಸಿಕವಾಗಿ ಭುಜಂಗಾನಸವು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಭುಜಂಗಾಸನ ಮಾಡುವಾಗ ನಮ್ಮ ಎದೆಯು ಎತ್ತುತ್ತದೆ. ಇದು ನಮ್ಮ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯದ ಖಾಯಿಲೆಗಳಿಗೆ ತುತ್ತಾಗುವುದನ್ನು ತಪ್ಪಿಸುತ್ತದೆ. ಈ ಆಸನವು ಹೃದಯ ಹಾಗೂ ಶ್ವಾಸಕೋಶಗಳನ್ನು ತೆರೆಯಲು ಸಹಾಯ ಮಾಡಿ, ಒತ್ತಡ ಹಾಗೂ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top