ಸಮುದ್ರ ಪಾಲಾಗಿದ್ದ ಮಹಿಳೆಯರ ರಕ್ಷಣೆ

Picture of RB NEWS

RB NEWS

Bureau Report

ಮಂಗಳೂರು : ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಉಳ್ಳಾಲದ ಸಮುದ್ರ ತೀರಕ್ಕೆ ವಾಯು ವಿಹಾರಕ್ಕೆಂದು ತೆರಳಿದ್ದ ಐವರು ಮಹಿಳೆಯರ ಪೈಕಿ ನಾಲ್ವರು ಮಹಿಳೆಯರು ಸಮುದ್ರ ಪಾಲಾಗಿದ್ದು, ಸ್ಥಳೀಯ ಈಜುಗಾರರು ರಕ್ಷಿಸಿದ ಘಟನೆ ಇಂದು ನಡೆದಿದೆ.

ಬೆಂಗಳೂರಿನ ಹಳ್ಳಿಯ ಸವಿತಾ(38), ಸೌಮ್ಯ(39), ಬಿಂದು(20), ಪದ್ಮಿನಿ(38) ಮತ್ತು ಮಂಜುಳ(35) ಎಂಬ ಐವರು ಮಹಿಳೆಯರು ಇಮದು ಬೆಳಿಗ್ಗೆ ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ಮಧ್ಯಾಹ್ನ ವೇಳೆ ಉಳ್ಳಾಲ ಬೀಚ್‌ಗೆ ತೆರಳಿದ್ದರು.


ಈ ಐವರು ಯುವತಿಯರು ಸಮುದ್ರ ತೀರದಲ್ಲಿ ಕುಳಿತ್ತಿದ್ದ ವೇಳೆ ಬೃಹತ್ ಗಾತ್ರದ ಅಲೆಯೊಂದು ತೀರಕ್ಕೆ ಅಪ್ಪಳಿಸಿದೆ. ಪರಿಣಾಮ ಸವಿತಾ, ಸೌಮ್ಯ, ಬಿಂದು, ಪದ್ಮಿನಿ ನೀರು ಪಾಲಾಗಿದ್ದರು. ಕೂಡಲೇ ಸ್ಥಳೀಯ ಈಜುಗಾರರು ನಾಲ್ವರು ಯುವತಿಯರನ್ನ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಿಸಲಾದ ಮಹಿಳೆಯರ ಪೈಕಿ ಪದ್ಮಿನಿ ಸ್ಥಿತಿ ಸ್ವಲ್ಪ ಗಂಭೀರವಾಗಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಉಳಿದವರು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top