ಕಾರ್ಕಳ : ರಾಜ್ಯದ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಪ್ರಥಮ ಅಧ್ಯಕ್ಷರಾಗಿರುವ ಮುದ್ರಾಡಿ ಮಂಜುನಾಥ ಪೂಜಾರಿ ಅವರಿಗೆ ಸಚಿವ ಹುದ್ದೆಯ ಸರಕಾರಿ ಸ್ಥಾನಮಾನವನ್ನು ನೀಡಿ ಸರಕಾರ ಆದೇಶ ಹೊರಡಿಸಿದೆ. ತಾನು ಕಲಿತ ಮತ್ತು ಕಲಿಯುತ್ತ ಇರುವ ರಾಜಕೀಯದಲ್ಲಿ ತನ್ನ ವೈಯಕ್ತಿಕ ಹೊಳಪನ್ನು ಹೆಚ್ತಿಸಿಕೊಳ್ಳಬೇಕೆನ್ನುವ ಅತ್ಯಾಸೆಯಿಲ್ಲದೆ ಸಾರ್ವಜನಿಕ ಸೇವೆ ಮಾಡುತ್ತ ತೃಪ್ತಿಪಡಿಸುವುದರೊಂದಿಗೆ ಸಾರ್ಥಕ್ಯವನ್ನು ಕಾಣುತ್ತಲೇ ಕಾಂಗ್ರೆಸ್ ಪಕ್ಷದ ಕಟ್ಚಾ ಕಾರ್ಯಕರ್ತನಾಗಿರುವ ಮುದ್ರಾಡಿ ಮಂಜುನಾಥ ಪೂಜಾರಿಯವರು ಮುದ್ರಾಡಿ ಗ್ರಾಮ ಪಂಚಾಯತು ಸದಸ್ಯ,ಜಿಲ್ಲಾಪಂಚಾಯತು ಸದಸ್ಯನಾಗಿ,ಹೆಬ್ರಿ ತಾಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷನಾಗಿಯೂ ಕೆಲಸ ಮಾಡಿದ ಅನುಭವಿ ರಾಜಕಾರಣಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೈೂಲಿ, ಹಾಲಿ ಶಾಸಕ, ಮಾಜಿ ಇಂಧನ ಮತ್ತು ಸಾಂಸ್ಕೃತಿಕ ಸಚಿವ ವಿ. ಸುನಿಲ್ ಕುಮಾರ್ ಅವರಿಬ್ಬರ ನಂತರ ಸಚಿವ ಸ್ಥಾನಮಾನದ ಸರಕಾರಿ ವಾಹನ ಮುದ್ರಾಡಿ ಮಂದುನಾಥ ಪೂಜಾರಿಯವರಿಗೆ ಕಾರ್ಕಳಕ್ಕೆ ಬಂದಿರುವುದು ಜನಸಾಮಾನ್ಯರಿಗೆಲ್ಲರಿಗೂ ಹರ್ಷ ತಂದಿದೆ. ನಿಗಮದ ಅಭಿವೃದ್ಧಿಗೆ ಸಾಕಾಗುವಷ್ಟು ಅನುದಾನ ಮೊತ್ತವನ್ನೂ ಸರಕಾರ ನಾಡಬೇಕಾಗಿದೆ. ಅದನ್ನು ರಾಜ್ಯದ ಮುಖ್ಯಮಂತ್ರಿಯವರು ನೆನಪಿನಲ್ಲಿಡಬೇಕಾಗಿದೆ. ಮುದ್ರಾಡಿ ಮಂಜುನಾಥ ಪೂಜಾರಿಯವರಿಗೆ #ಅಭಿನಂದನೆಗಳು.