ಶ್ರೀ ಜಿನವಾಣಿ ಮಹಿಳಾ ಸಮಾಜ : ಅಧ್ಯಕ್ಷರಾಗಿ ಬಿ ವಿನಯ ಯುವರಾಜ ಆರಿಗ
ಕಾರ್ಕಳ : ಶ್ರೀ ಜಿನವಾಣಿ ಮಹಿಳಾ ಸಮಾಜ, ಕಾರ್ಕಳ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಆಗಸ್ಟ್ 10 ರಂದು ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ ಜರುಗಿತು.
ಅಧ್ಯಕ್ಷರಾಗಿ ಬಿ ವಿನಯ ಯುವರಾಜ ಆರಿಗ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮೋಹಿನಿ ವರ್ಧಮಾನ, ಕಾರ್ಯದರ್ಶಿಯಾಗಿ ರಾಜಶ್ರೀ ವಸಂತ್ ಬಂಗ, ಸಹಕಾರ್ಯದರ್ಶಿಯಾಗಿ ಸುಕುಮಾರಿ ರಘುಚಂದ್ರ, ಕೋಶಾಧಿಕಾರಿಯಾಗಿ ಪ್ರೇಮ ಭವ್ಯ ಕುಮಾರ್ ಆಯ್ಕೆಯಾಗಿರುತ್ತಾರೆ.






























