ಕಾರ್ಕಳ: ತಾಲೂಕಿನ ಮಿಯ್ಯಾರು ಕಾರ್ಯಕ್ಷೇತ್ರದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಕ್ಷೇತ್ರಕ್ಕೆ ಸಮಿತಿಯವರು ಮನವಿ ನೀಡಿದ್ದು, ಮನವಿಗೆ ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸ್ಪಂದಿಸಿ ಧರ್ಮಸ್ಥಳದಿಂದ 3 ಲಕ್ಷ ರೂ. ಮಂಜೂರಾತಿ ಮಾಡಿದ್ದಾರೆ.
ಈ ಡಿಡಿಯನ್ನು ಕರ್ನಾಟಕ ಜೈನ್ ಸ್ವಯಂಸೇವಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ನೇಮಿರಾಜ ಆರಿಗ ಹಾಗೂ ಯೋಜನಾಧಿಕಾರಿ ಹೇಮಲತಾ ಇವರು ಮಿಯ್ಯಾರು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಸತ್ಯಂದ್ರ ನಾಯಕ್ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಗಣಪತಿ ಹೆಗ್ಡೆ, ಹಾಗೂ ಸಮಿತಿಯವರಿಗೆ ಹಸ್ತಾಂತರ ಮಾಡಿದರು.
ಇದೆರ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ವಿಠ್ಠಲ್ ಪೂಜಾರಿ, ಶೇಖರ್ ಶೆಟ್ಟಿ, ಶಾಂತ, ಜನಜಾಗೃತಿ ಸಮಿತಿ ಸದಸ್ಯರಾದ ಕೆ . ಕೆ. ದೇವಾಡಿಗ ವಲಯದ ಮೇಲ್ವಿಚಾರಕರಾದ ಯಶೋಧ ಸೇವಾಪ್ರತಿನಿಧಿ ಸುರೇಖಾ, ಯಶೋಧರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.






































