ವೈದ್ಯಕೀಯ ವಿದ್ಯಾರ್ಥಿನಿಯ ಮತಾಂತರಕ್ಕೆ ಯತ್ನ: ಮತಾಂತರಿ ಜೈಲುಪಾಲು!
ಉಡುಪಿ: ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ವೈದ್ಯಕೀಯ ವಿದ್ಯಾರ್ಥಿನಿಗೆ ವೈದ್ಯನೊಬ್ಬ ಕಿರುಕುಳ ನೀಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಮಣಿಪಾಲದಲ್ಲಿ ಈ ಘಟನೆ ನಡೆದಿದೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ವೈದ್ಯನಿಂದ ಕಿರುಕುಳ ಆರೋಪದ ಮೇಲೆ ಸಹಪಾಠಿ ವೈದ್ಯಕೀಯ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಮಣಿಪಾಲದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ನಡುವೆ ಈ ಘಟನೆ ನಡೆದಿದ್ದು, ಸದ್ಯ ಕಿರುಕುಳ ನೀಡಿದ ಆರೋಪದಲ್ಲಿ ಮಹಮ್ಮದ್ ಡ್ಯಾನಿಷ್ ಖಾನ್ನನ್ನು ಪೊಲೀಸರು ಬಂಧಿಸಿದ್ದಾರೆ.
ವೈದ್ಯಕೀಯ ಶಿಕ್ಷಣಕ್ಕಾಗಿ ಹೊರ ರಾಜ್ಯಗಳಿಂದ ಆ ವಿದ್ಯಾರ್ಥಿಗಳು ಉಡುಪಿಯ ಮಣಿಪಾಲಕ್ಕೆ ಬಂದಿದ್ದರು.
ದೆಹಲಿ ಮತ್ತು ರಾಜಸ್ಥಾನದಿಂದ ಬಂದಿರುವ ಈ ವಿದ್ಯಾರ್ಥಿಗಳು ಪರಸ್ಪರ ಪ್ರೀತಿಸಲಾರಂಭಿಸಿದ್ದರು. ವಿವಾಹಕ್ಕೂ ಮುಂದಾಗಿದರೆನ್ನಲಾಗಿದೆ.
ಈ ನಡುವೆ ಮಹಮ್ಮದ್ ಡ್ಯಾನಿಷ್ ಖಾನ್, ಪ್ರೇಯಸಿಯ ಮುಂದೆ ಮದುವೆಯ ಪ್ರಸ್ತಾಪದೊಂದಿಗೆ ಬೇಡಿಕೆಯನ್ನು
ಮುಂದಿಟ್ಟಿದ್ದಾನೆ.
” ನಿನ್ನನ್ನು ಮದುವೆಯಾಗಬೇಕೆಂದರೆ ಇಸ್ಲಾಂಗೆ ಮತಾಂತರವಾಗಬೇಕು’. ಎಂಬ ಬೇಡಿಕೆ ಮುಂದಿಟ್ಟು, ಆಕೆಯನ್ನು ಇಕ್ಕಟಿಗೆ ಸಿಲುಕಿಸಿ ಮಾನದೊಂದಿಗೆ ಚೆಲ್ಲಾಟವಾಡಿದ್ದಾನೆ. ಈ ಕುರಿತು ಯುವತಿ ನೀಡಿದ ದೂರಿನನ್ವಯ ಉಡುಪಿ ಮಹಿಳಾ ಠಾಣೆಯಲ್ಲಿ ಆಗಸ್ಟ್ 31 ರಂದು ದೂರು ದಾಖಲಾಗಿದೆ.
ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ ಮತ್ತು ಸಂತ್ರಸ್ತೆ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕ್ಯಾಂಪಸ್ನಲ್ಲಿ ಪರಿಚಯವಾಗಿದೆ. ನಂತರ ಆತ ಸಂತ್ರಸ್ತೆಯ ಫೋನ್ ನಂಬರ್ ಪಡೆದುಕೊಂಡು ಗೆಳೆತನ ಬೆಳೆಸಿದ್ದಾನೆ. ಆಮೇಲೆ 2024 ರ ಜನವರಿ 22ರಂದು ಮಾತುಕತೆ ವೇಳೆ ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಮಹಮ್ಮದ್ ಡ್ಯಾನಿಷ್ ಖಾನ್
ಇದಲ್ಲದೇ, 2024ರ ಮಾ.11 ರಂದು ಸಂತ್ರಸ್ತೆ ಆರೋಪಿಯ ರೂಮ್ಮೆ ತೆರಳಿದಾಗ ಮತಾಂತರಕ್ಕೆ ಒತ್ತಾಯಿಸಿದ್ದಾನೆ, ಇದನ್ನು ನಿರಾಕರಿಸಿದಾಗ ಆರೋಪಿಯು ತನ್ನ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಿದ್ದ , ಇಷ್ಟು ಮಾತ್ರವಲ್ಲದೇ, ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಮಾಡಿದ್ದಾಳೆ.
ಇನ್ನು, 2024 ರ ಆಗಸ್ಟ್ 28 ರವರೆಗೂ ಪೋನ್ನಲ್ಲಿ ತನ್ನನ್ನು ಸಂಪರ್ಕಿಸಿ ನಿರಂತರ ಕಿರುಕುಳ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದು, ಸದ್ಯ ಸಂತ್ರಸ್ತ ಯುವತಿ ನೀಡಿದ ದೂರಿನನ್ವಯ ಪ್ರಕರಣದ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ (27) ಎಂಬಾತನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸದ್ಯ ಪ್ರಕರಣದ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ





















