[t4b-ticker]

ವಿಶ್ವ ಮಹಿಳಾ ದಿನಾಚರಣೆಯ

Picture of RB NEWS

RB NEWS

Bureau Report

ಕಾರ್ಕಳ: ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ತಿಂಗಳ ಕಾರ್ಯಕ್ರಮವನ್ನು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅನುಪಮಾ ಚಿಪ್ಲುಂಕರ್ ಅವರ ಮನೆಯಲ್ಲಿ  ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಸಾವಿತ್ರಿ ಮನೋಹರ್ ಇವರು “ಜಾಗೃತ ನಾರಿ ಸ್ವಸ್ಥ ಸಮಾಜದ ರೂವಾರಿ” ಎಂಬ ವಿಷಯದ ಕುರಿತಾಗಿ ತಮ್ಮ ವಿಚಾರವನ್ನು ಮಂಡಿಸಿದರು. ಇನ್ನೋರ್ವ ಸದಸ್ಯೆ ಸುಲೋಚನಾ ಬಿ.ವಿ ಇವರು “ಮಹಿಳೆ ಮತ್ತು ಮಹಿಳಾ ದಿನಾಚರಣೆಯ ಪ್ರಸ್ತುತತೆ” ಎಂಬ ವಿಚಾರವನ್ನು ವಿಷದ ಪಡಿಸಿದರು.  ಮಾಲತಿ ವಸಂತರಾಜ್ ಇವರು “ಸ್ತ್ರೀ” ಎಂಬ ಕವನವನ್ನು ವಾಚಿಸಿದರು.  ಗೀತಾ ಮರಾಠೆ ಇವರು ಮಹಿಳಾ ಸಾಧಕಿಯರ ಪರಿಚಯವನ್ನು ಮಾಡಿದರು. ವಸುಧಾ ಶೆಣೈ ಪ್ರಾರ್ಥನೆಯೊಂದಿಗೆ
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ  ಸ್ವಾಗತಿಸಿದರು. ಕಾರ್ಯದರ್ಶಿ ಮಾಲತಿ ಜಿ.ಪೈ ಕಾರ್ಯಕ್ರಮ ನಿರ್ವಹಿಸಿದರು. ಅನುಪಮಾ ಚಿಪ್ಲುಂಕರ್ ಧನ್ಯವಾದವನ್ನಿತ್ತರು. 

ಕಾರ್ಕಳ: ಶ್ರೀ ವೆಂಕಟರಮಣ ಮಹಿಳಾ ಪದವಿ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಕು.ಅನುಶ್ರೀ ಬಿ ಇವರು ತಮ್ಮ ಗುರುಗಳಾದ ನಿವೃತ್ತ ಪ್ರಾಂಶುಪಾಲೆ, ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ಅಧ್ಯಕ್ಷೆ,  ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಇವರನ್ನು ವಿಶ್ವ ಮಹಿಳಾ ದಿನಾಚರಣೆಯ ಶುಭ ಸಂದರ್ಭದಲ್ಲಿ ಗುರುಕಾಣಿಕೆಯನಿತ್ತು ಸನ್ಮಾನಿಸಿದರು. ಶ್ರೀಮತಿ ಮಾಲತಿ ವಸಂತರಾಜ್ ಇವರು ಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top