ವಿಜೃಂಭಣೆಯಿಂದ ನೆರವೇರಿದ ಆನೆಕೆರೆ ಚತುರ್ಮುಖ ಕೆರೆಬಸದಿ ವಾರ್ಷಿಕ ಪೂಜಾ ಮಹೋತ್ಸವ

Picture of RB NEWS

RB NEWS

Bureau Report


ಕಾರ್ಕಳ ತಾಲೂಕಿನ ಆನೆಕೆರೆ ಚತುರ್ಮುಖ ಕೆರೆಬಸದಿ ವಾರ್ಷಿಕ ಪೂಜಾ ಮಹೋತ್ಸವವು ಇಂದು (ಜ.22) ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ನೆರವೇರಿತು.
ಕಾರ್ಕಳ ದಾನಶಾಲೆ ಜೈನ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತೀ ಭಟ್ಟಾರಕ ಪಟ್ಟಾಚಾರ್ಯರು, ಮೂಡುಬಿದಿರೆ ಜೈನ ಮಠದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಸಿಂಹನಗದ್ದೆ ಬಸ್ತಿ ಮಠ, ನರಸಿಂಹರಾಜಪುರ ಅವರ ಪಾವನ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಅಧ್ಯಕ್ಷರು, ಆನೆಕೆರೆ ಬಸದಿ ಜೀರ್ಣೋದ್ಧಾರ ಸಮಿತಿ ಅವರ ಮುಂದಾಳತ್ವದಲ್ಲಿ ಮಹೋತ್ಸವ ಯಶಸ್ವಿಯಾಗಿ ನೆರವೇರಿತು.
ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಸೇವಾಕತೃಗಳಾಗಿ ಶ್ರೀಮತಿ ಮತ್ತು ಶ್ರೀ ಶ್ರೀವರ್ಮ ಸಾಂತರಬೆಟ್ಟು (ಕಾರ್ಕಳ), ಶ್ರೀಮತಿ ಪವಿತ್ರ ಮತ್ತು ಸುನಿಲ್ ಇಂದ್ರ, ಧನಕೀರ್ತಿ ಕಡಂಬ (ದಾನಶಾಲೆ), ಪದ್ಮಶ್ರೀ ಜೈನ್ ಹಾಗೂ ಧರಣೇಂದ್ರ ಜೈನ್ (ಮೂಡುಬಿದಿರೆ), ಕೆ. ಮಯೂರ ಕುಮಾರ್ ಜೈನ್ (ಕಾರ್ಕಳ), ರಘುಚಂದ್ರ ಜೈನ್ ದಂಪತಿಗಳು (ಇರ್ವತ್ತೂರು), ಶ್ರೀಮತಿ ಅಭೀಷ್ಮ ಮತ್ತು ಸಂತೋಷ್ ಮಹಾವೀರ್ ಹಾಗೂ ಬೇಬಿ ದಿಯಾ ಜೈನ್ (ಬೆಂಗಳೂರು), ಕಣಿಯೂರು ವಿಜಯಮ್ಮನವರ ಸ್ಮರಣಾರ್ಥ ಅವರ ಮಕ್ಕಳು (ಆನೆಕೆರೆ), ಎಂ.ಕೆ. ಸುವೃತ ಕುಮಾರ್, ರಾಜೇಂದ್ರ ಇಂದ್ರ (ಕಾರ್ಕಳ), ಶ್ರೀಮತಿ ಮಾಲತಿ ವಸಂತರಾಜ್ ತೆಳ್ಳಾರು ಹಾಗೂ ಶ್ರೀಮತಿ ಮೋಹಿನಿ ವರ್ಧಮಾನ್ (ಕಾರ್ಕಳ) ಅವರುಗಳು ಕೊಡುಗೆ ನೀಡಿದರು.
ರಾತ್ರಿ 9 ಗಂಟೆಯಿಂದ ಧರ್ಮ ದೈವಗಳಾದ ಕಲ್ಕುಡ ಮತ್ತು ಪಂಜುರ್ಲಿ ದೈವಗಳ ನರ್ತನ ಸೇವೆ ನಡೆಯಿತು. ಈ ಸೇವೆಗೆ ಶ್ರೀಮತಿ ಮತ್ತು ಶ್ರೀ ಮಹಾವೀರ ಜೈನ್ (ಮುಡಾರು), ಶ್ರೀಮತಿ ಮತ್ತು ಶ್ರೀ ಭರತ್ ಕುಮಾರ್ ಜೈನ್ (ಕೊಳಕ್ಕೆ–ಇರ್ವತ್ತೂರು), ಶ್ರೀಮತಿ ಮತ್ತು ಶ್ರೀ ಶೀತಲ್ ಜೈನ್ (ಶಿರ್ಲಾಲು) ಅವರುಗಳು ಸೇವಾಕತೃಗಳಾಗಿ ಭಾಗವಹಿಸಿದರು.
ತಮಿಳುನಾಡಿನ ಧವಳಕೀರ್ತಿ ಸ್ವಾಮಿಗಳು ಸಂಜೆಯ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಕಾರ್ಕಳ ಹಾಗೂ ಮೂಡುಬಿದಿರೆಯ ಜೈನ ಬಂಧುಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಜಿನಗಾನ ವಿಶಾರದೆ ಶ್ರೀಮತಿ ಜಯಶ್ರೀ ಧರಣೇಂದ್ರ ಜೈನ್ (ಹೊರನಾಡು) ಹಾಗೂ ತಂಡದವರಿಂದ ಸಂಗೀತ ಪೂಜಾಷ್ಟಕ ಕಾರ್ಯಕ್ರಮ ನೆರವೇರಿತು.


— ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top