ವಾರಭವಿಷ್ಯ ದಿನಾಂಕ 05.10.2025 ರಿಂದ 11.10.2025ರ ತನಕ

Picture of RB NEWS

RB NEWS

Bureau Report

ವಾರಭವಿಷ್ಯ ದಿನಾಂಕ 05.10.2025 ರಿಂದ 11.10.2025ರ ತನಕ


10.10.2025.
ಸಂಕಷ್ಟ ಚತುರ್ಥಿ [ಚ ಉ .ಘಂ .9.01]

ಮಿಥುನ : ಶನಿಯ ಶುಭಾಶುಭ ಫಲ ಉದ್ಯೋಗ ಕ್ಷೇತ್ರದಲ್ಲಿ ತೂಗುಯ್ಯಾಲೆಯ ರೀತಿಯಲ್ಲಿ ಮುಂದುವರಿಯಲಿದೆ. ದೈವಾನುಗ್ರಹವುಳ್ಳ ನಿಮಗೆ ಕಷ್ಟದಲ್ಲಿಯೇ ಸುಖದ ಅನುಭವವನ್ನು ಕಾಣುವಿರಿ, ಪ್ರಯಾಣ, ಯಾತ್ರಾರ್ಥಿಗಳಿಗೆ ಹಲವು ರೀತಿಯ ಖರ್ಚು ವೆಚ್ಚ ದ್ರವ್ಯ ಪದಾರ್ಥಗಳ ವ್ಯವಹಾರದಲ್ಲಿ ಹೆಚ್ಚು ಲಾಭವನ್ನು ಗಳಿಸುವಿರಿ. ಮೂಲ ಆಸ್ತಿ, ನಿವೇಶನಾದಿಗಳ ಕ್ರಯ-ವಿಕ್ರಯಗಳಿಂದ ಹೆಚ್ಚು ಲಾಭ ಗಳಿಸಲಿದ್ದೀರಿ ವೃತ್ತಿ ರಂಗದಲ್ಲಿ ಆಗಾಗ ಕಾರ್‌ಯ ಒತ್ತಡ ದೇಹಾಯಾಸಕ್ಕೆ ಕಾರಣವಾಗಲಿದೆ.

ಕರ್ಕಾಟಕ : ಅಷ್ಟಮದಲ್ಲಿ ರಾಹು ಚಂದ್ರ ಮಾಂದಿ ಬಂದಿರುವುದು ಮಾನಸಿಕ ಒತ್ತಡದಿಂದ ನೀವು ಬಳಲುತ್ತಿರುವುದು ಕಂಡು ಬರುತ್ತಿದೆ. ಹಿರಿಯರಲ್ಲಿ ಭಿನ್ನಾಭಿಪ್ರಾಯ ಬರಲಿರುವುದನ್ನು ಶನಿ ಸೂಚನೆ ಕೊಡುತ್ತಿದ್ದಾನೆ. ಸಹನೆ ಕಳೆದುಕೊಳ್ಳದಿರಿ. ಮನೆ ವಾಹನ ಭೂಮಿ ಖರೀದಿ ಮಾಡಲಿರುವ ಸೂಚನೆ ಇರುತ್ತದೆ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನೆಡೆ ಕಂಡು ಬರಲಿದೆ. ಕೈ ತಪ್ಪಿ ಹೋದ ಅವಕಾಶಗಳು ಮತ್ತೆ ಒದಗಿ ಬರಲಿದೆ. ದೇಹ ಸ್ಥಿತಿಯಲ್ಲಿ ಸಮಸ್ಯೆ ಕಂಡು ಬರಲಿದೆ.

ಸಿಂಹ : ಅನೇಕ ರೀತಿಯಲ್ಲಿ ಮಾನಸಿಕ ಗೊಂದಲಕ್ಕೆ ಒಳಗಾದರೂ ದೈವಾನುಗ್ರಹ ಇರುವುದರಿಂದ ಅಷ್ಟೊಂದು ಖೇದವೆನಿಸದು, ಕೌಟುಂಬಿಕ ಸಮಸ್ಯೆ ಹೊಸತೊಂದು ಆಯಾಮ ಪಡೆಯಲಿದೆ. ಕೃಷಿ, ಪಶು, ಹೈನುಗಾರಿಕೆ, ಉದ್ಯಮಿಗಳಿಗೆ ಆರ್ಥಿಕ ಒತ್ತಡದಿಂದ ಸಮಸ್ಯೆಯಾಗಲಿದೆ. ದುಡುಕು ವರ್ತನೆಯಿಂದ ದಾಂಪತ್ಯದಲ್ಲಿ ವಿರಸ ಕಂಡು ಬರಲಿದೆ. ನೂತನ ಮಿತ್ರ ಲಾಭಾದಿಗಳಿಂದ ಸಂತೃಪ್ತಿ ಕಂಡು ಬರಲಿದೆ. ಉದ್ಯೋಗಾರ್ಥಿಗಳಿಗೆ ನಿರೀಕ್ಷಿತ ಉದ್ಯೋಗ ಲಾಭವಿದೆ ವಾಹನ ಸಂಚಾರದಲ್ಲಿ ಎಚ್ಚರವಿರಲಿ.

ಕನ್ಯಾ :‌ ರವಿ ಶನಿ ಸಂಸಾರವನ್ನು ಜಗಳಗಂಟಿಯನ್ನಾಗಿಸುವವರು. ಕುಜ ಮತ್ತು ಬುಧ ಕುಟುಂಬದಲ್ಲಿ ಜಗಳವನ್ನು ತರುವವರು. ಇದಕ್ಕೆ ಪರಿಹಾರವೆಂದರೆ ನರಸಿಂಹ ದೇವರ /ಕೃಷ್ಣ ದೇವರ ಜಪವಾಗಿದೆ. ಚಿಂತಿತ ವಿಚಾರಗಳ ಬಗ್ಗೆ ಪುನ: ವಿಮರ್ಶೆ ಮಾಡುವುದು ಆರ್ಥಿಕವಾಗಿ ವ್ಯಾಪಾರ, ವ್ಯವಹಾರಗಳ ನಿರ್ವಹಣೆಯಲ್ಲಿ ವ್ಯತ್ಯಾಸವಾಗಿರುತ್ತದೆ, ಸರಿಪಡಿಸಿಕೊಳ್ಳಿರಿ,ವಾರಾಂತ್ಯದಲ್ಲಿ ನಿರೀಕ್ಷಿತ ಫಲವಿರುತ್ತದೆ ಅಲರ್ಜಿಪೀಡೆ ನಿಮ್ಮನ್ನು ಕಾಡಲಿದೆ. ಮಾತೃ ಆರೋಗ್ಯದ ಬಗ್ಗೆ ಎಚ್ಚರವಿರಲಿ. ಉದ್ಯೋಗದಲ್ಲಿ ದೃಢ ನಿರ್ಧಾರಗಳು ಅಗತ್ಯವಿರುತ್ತದೆ.

ತುಲಾ : ಆಯಾಸ ದೇಹಕ್ಕಿದ್ದರೂ ಮನಸ್ಸು ಹಗುರವಾಗಿದೆ. ಪಂಚಮದಲ್ಲಿ ರಾಹು ಚಂದ್ರ ಮಾಂದಿ ಇರುವುದೇ ಇದಕ್ಕೆ ಕಾರಣವಾಗಿದೆ. ಜಾಣೆಯಿಂದ ಕೆಲಸ ಮಾಡಿದಾಗ ಯಶಸ್ಸು ನಿಮ್ಮದಾಗಲಿದೆ. ಮನೆಗೆ ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ಸಕಾಲಿಕ ಮಿತ್ರರ ಸಹಾಯದಿಂದ ಮಾನ ಉಳಿದೀತು ಧಾರ್ಮಿಕ ಕಾರ್ಯಗಳ ಚಿಂತನೆ ಕಾರ್ಯಗತವಾದೀತು. ಯಾತ್ರಾದಿಗಳಿಂದ ಪುಣ್ಯ ನಿರೀಕ್ಷೆ ದೇವತಾ ದರ್ಶನ ಭಾಗ್ಯ ಲಭಿಸಲಿದೆ. ಚಿತ್ರಕಲೆ, ಸಿನೆಮಾ ಜಗತ್ತಿನಲ್ಲಿ ದುಡಿಯುವವರಿಗೆ ಸಾಕಷ್ಟು ಸಂಪಾದನೆ ಸಂತಸ ತರಲಿದೆ.

ವೃಶ್ಚಿಕ : ನಿಮಗೆ ಕಾಣುವ ಮೊದಲ ಪ್ರಶ್ನೆಯೆಂದರೆ “ಇನ್ನೆಷ್ಟು ದಿನ ಕಷ್ಟ ಅನುಭವಿಸುವುದು ” ಹೌದು ಪ್ರಸ್ತುತ ಸುಖ ಸ್ಥಾನದಲ್ಲಿ ರಾಹು 2026 ಡಿಸೆಂಬರ್ ದಿನಾಂಕ 05 ರ ವರೆಗೆ, ಶನಿ ಬರುವ ವರ್ಷವೂ ಪೂರ್ತಿ ಪಂಚಮದಲ್ಲಿ ಇರುತ್ತಾನೆ ಗುರು ಅಷ್ಟಮದಲ್ಲಿ ಪ್ರಸ್ತುತ ಇದ್ದು ನಂತರ ಮೂರು ತಿಂಗಳು ಭಾಗ್ಯಕ್ಕೆ ಹೋಗುವುದು ಇರುತ್ತದೆ. ಕುಜ ಬುಧ ವ್ಯಯದಲ್ಲಿ ಇದ್ದಾರೆ. ಕಷ್ಟಗಳ ಸರಮಾಲೆ ಇರುತ್ತದೆ. ಪ್ರತಿಯೊಂದು ವಿಷಯದಲ್ಲಿ ಎಚ್ಚರಿಕೆ ಅಗತ್ಯವಿರುತ್ತದೆ. ನಮ್ಮ ಪರಿಚಯವೇ ಇಲ್ಲದ ಸಂಬಂಧವಿಲ್ಲದ ವ್ಯಕ್ತಿಗಳು ಅನಾವಶ್ಯಕ ಜಗಳ ಮಾಡುತ್ತಾರೆ. ಕುಲ ದೇವರ ಆರಾಧನೆ ಗತ್ಯವಿರುತ್ತದೆ.

ಧನು : ಗುರು ಸಪ್ತಮದಲ್ಲಿ ಈ ತಿಂಗಳ 18 ರ ವರೆಗೆ ಸಪ್ತಮದಲ್ಲಿ ಇದ್ದಾನೆ .ಶನಿ ಬರುವ ವರ್ಷವೂ ಪೂರ್ತಿಯಾಗಿ ಸುಖ ಸ್ಥಾನದಲ್ಲಿ ಇರುತ್ತಾನೆ. ವೃತ್ತಿರಂಗದಲ್ಲಿ ಕಾರ್ಯ ನಿರ್ವಹಣೆಯ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬರಲಿದೆ. ಸಮಾಜ ಸೇವೆಗೆ ಪ್ರಾಧಾನ್ಯತೆ ಕೊಡುವ ನಿಮಗೆ ಸಮಯ ವ್ಯರ್ಥವಾಗಲಿದೆ. ಸಂತಾನ ಅಪೇಕ್ಷಿತರಿಗೆ ದೈವಾನುಗ್ರಹವಿರುತ್ತದೆ. ಆರ್ಥಿಕವಾಗಿ ಹೆಚ್ಚಿನ ಧನಾಗಮನ ಇದ್ದರೂ ವಿವಿಧ ರೂಪದಲ್ಲಿ ಖರ್ಚು-ವೆಚ್ಚಗಳು ಇರುತ್ತವೆ.

ಮಕರ : ಅಕ್ಟೋಬರ್ 18 ರ ವರೆಗೆ ದೈವಾನುಗ್ರಹ ಇರುವುದಿಲ್ಲ. ದ್ವಿತೀಯಾದಲ್ಲಿ ಚಂದ್ರ ರಾಹು ಮಾಂದಿ ಇದ್ದಾರೆ. ಅಷ್ಟಮದಲ್ಲಿ ಶುಕ್ರ ಮತ್ತು ಕೇತು ಇದ್ದಾರೆ. ಕಾರ್ಯ ಕ್ಷೇತ್ರದಲ್ಲಿ ಚಟುವಟಿಕೆ ಸ್ಥಗಿತ ಗೊಂಡರೂ ಆದಾಯಕ್ಕೆ ಕೊರತೆ ಇರಲಾರದು. ಅನಿರೀಕ್ಷಿತ ಪ್ರಯಾಣಗಳಿಂದ ದಿಢೀ‌ರ್ ಖರ್ಚು ಉಂಟಾಗಲಿದೆ. ಅನಾಶ್ಯಕವಾಗಿ ಸಣ್ಣ ವಿಚಾರಗಳಲ್ಲಿ ಸತಿ-ಪತಿಯ ನಡುವೆ ಅನ್ನೋನ್ಯತೆಗೆ ಭಂಗ ಬಂದೀತು. ಕಾರ್ಯ ವಿಳಂಬ, ಮಾನಸಿಕ ಒತ್ತಡ ಆರೋಗ್ಯದಲ್ಲಿ ಏರು ಪೇರು ಉಂಟಾಗಲಿದೆ.

ಕುಂಭ: ಪ್ರಸ್ತುತ ಗುರು ಪಂಚಮದಲ್ಲಿ ಇರುವುದರಿಂದ ದೈವಾನುಗ್ರಹ ಇರುತ್ತದೆ ಇದು ಈ ತಿಂಗಳ 18 ರ ವರೆಗೆ ಮುಂದುವರಿಯಲಿದೆ. ಕುಟುಂಬದವರ ಸಕಾಲಿಕ ಸಹಕಾರದಿಂದ ಕಾರ್ಯ ಸಾಧನೆ ಸಾಧಕವಾಗಲಿದೆ ಕಮಿಷನ್ ಏಜೆಂಟ್, ಹೋಟೆಲ್ ಉದ್ಯಮದವರಿಗೆ ಸಮಾಧಾನಕರ ಆದಾಯವಿರುತ್ತದೆ. ವಿವಾಹ ಸಂಬಂಧಿತ ಪ್ರಸ್ತಾಪಗಳಿಗೆ ಹೆಚ್ಚಿನ ಪ್ರಯತ್ನ ಶೀಲತೆ ಅತೀ ಅಗತ್ಯವಿರುತ್ತದೆ. ಹಣದ ಅಡಚಣೆ ಕಂಡು ಬರಲಿದೆ. ಸಂಗಾತಿಗೆ ಪಿತ್ತ ಕೋಶದ ಅನಾರೋಗ್ಯಗಳಿಂದಾಗಿ ವಯಕ್ತಿಕ ಆರೋಗ್ಯ ಏರುಪೇರಾಗಲಿದೆ.

ಮೀನಾ : ಶನಿ ಜನ್ಮ ರಾಶಿಯಲ್ಲಿ, ರಾಹು ವ್ಯಯದಲ್ಲಿ ಇರುವುದರಿಂದ ದ್ವಂದ್ವ ವಿಚಾರಗಳು ಮನಸ್ಸಿಗೆ ಬಂದು ಗೊಂದಲ ಉಂಟಾಗಲಿದೆ.ಸಾಂಸಾರಿಕವಾಗಿ ಎಲ್ಲಾ ವಿಚಾರಗಳಲ್ಲಿ ಮನಸ್ಸಿಗೆ ನೆಮ್ಮದಿ ದೊರಕಲಿದೆ. ಪಾಲುದಾರಿಕೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಕ್ರಯ ವಿಕ್ರಯಗಳಲ್ಲಿ ಪ್ರಗತಿ ಕಂಡು ಬರಲಿದೆ ಈ ತಿಂಗಳ 18 ರ ನಂತರ ಆರ್ಥಿಕ ಪ್ರಗತಿ ಕಂಡು ಬರಲಿದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧ ಕೂಡಿ ಬರಲಿದೆ. ವ್ಯಯದಲ್ಲಿ ಚಂದ್ರ ಮತ್ತು ಮಾಂದಿ ರಾಹುವಿನೊಂದಿಗೆ ಇರುವುದರಿಂದ ಮಕ್ಕಳ ವಿಷಯದಲ್ಲಿ ಎಚ್ಚರವಿರಲಿ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top