ಕಾರ್ಕಳ : ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ನವೋದಯ ಸರ್ಕಲ್ ಬಳಿ ಮಳೆ ನೀರು ಚರಂಡಿಗೆ ಹರಿಯದೆ ರಸ್ತೆಯ ಮೇಲಿಂದ ಹರಿದು ಹೋಗುತ್ತಿದೆ.
ಇದರಿಂದ ವಾಹನ ಚಲಿಸುವುದಕ್ಕೆ ಚಾಲಕರಿಗೆ ಹಾಗೂ ಸವಾರರಿಗೆ ಕಷ್ಟಕರವಾಗಿದೆ. ಕೆಲವೊಂದು ಸಂದರ್ಭದಲ್ಲಿ ರಸ್ತೆ ಮೇಲೆ ಹರಿದು ಹೋಗುವ ಕೆಸರು ನೀರು ಪಾದಚಾರಿಗಳಿಗೆ ಅಭಿಷೇಕವಾಗುತ್ತಿರುವುದು ಸರ್ವೇ ಸಾಮಾನ್ಯ ವಾಗಿದೆ.
ಈ ಎಲ್ಲಾ ಸಮಸ್ಸೆಗಳನ್ನು ಮನಗಂಡಿರುವ ಪುರಸಭೆಯ ಮಾಜಿ ಸದಸ್ಯ ಪ್ರಕಾಶ್ ರಾವ್ ರವರ ನೇತೃತ್ವದಲ್ಲಿ ಚರಂಡಿಯ ಮಣ್ಣನ್ನು ತೆರವುಗೊಳಿಸಿ ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಿದರು.

ವಿಶಾಲ್ ಟೂರಿಸ್ಟ್ ಹಾಗೂ ಮೋಟಾರ್ಸ್ ನ ಮಾಲಕ ಜೀವಂಧರ್ ಅಡ್ಯಂತಾಯ ಅವರು ಜೆಸಿಬಿ ಒದಗಿಸಿ ಸಾಮಾಜಿಕ ಸತ್ಕಾರ್ಯಕ್ಕೆ ನೆರವಾದರು.
ಇದೇ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಅಮೀನ್ , ವಸಂತ್ ಎಂ ಜೊತೆಗಿದ್ದರು.





















