ರಾಷ್ಟ್ರೀಯ ವಿದ್ಯಾರ್ಥಿ ದಿನದಂದು ವಿ. ಸುನಿಲ್ ಕುಮಾರ್ ಉದ್ಯೋಗ ಮಹಾ ಪರ್ವ ; 1500ಕ್ಕೂ ಹೆಚ್ಚು ಉದ್ಯೋಗಾರ್ಥಿಗಳು ಭಾಗಿ

Picture of RB NEWS

RB NEWS

Bureau Report

ಕಾರ್ಕಳದ ಶಾಸಕ , ಕರ್ನಾಟಕ ಸರಕಾರದ ಮಾಜಿ ಸಚಿವ ಸುನಿಲ್ ವಿ. ಕುಮಾರ್ ಅವರ ನೇತೃತ್ವದ “ವಿಕಾಸ ಉದ್ಯೋಗ ಸೇತು” ಕಾರ್ಯಕ್ರಮವು ಕಾರ್ಕಳದಲ್ಲೊಂದು ಹೊಸ ಬೆಳಕಾಗಿ #ಪ್ರಜ್ವಲನಗೊಂಡಿದೆ . ಆ ಬೆಳಕು ನಿರಂತರವೆನ್ನುವುದಕ್ಕೆ ಸಾಕ್ಷಿ ಮುಂದಿನ ಪ್ರತಿ ತಿಂಗಳಲ್ಲೂ ಈ ಉದ್ಯೋಗ ಮೇಳವನ್ನು ಆಯೋಜಿಸುವುದು.

ಸುನಿಲ್ ವಿ. ಕುಮಾರ್ ಅವರು ತನ್ನ ಕ್ಷೇತ್ರಾಭಿವೃದ್ಧಿಯ ಧ್ಯೇಯೋದ್ದೇಶಗಳಲ್ಲಿ ಯುವ ಜನತೆಗೆ ಉದ್ಯೋಗ ದೊರಕಿಸಿಕೊಡುವ ಪರಿಕಲ್ಪನೆಯನ್ನಿಟ್ಟುಕೊಂಡವರಾಗಿದ್ದಾರೆ ಎಂಬುದು 2015 ರಲ್ಲೇ ಪ್ರಕಟಗೊಂಡಿತ್ತು.
ವಿದ್ಯಾಭ್ಯಾಸ ಮತ್ತು ಉದ್ಯೋಗ ಅರಸುವಿಕೆ ಅವೆರಡೂ ನಿರಂತರ ಚಟುವಟಿಕೆಗಳಾಗಿರುವುದರಿಂದ ಅದಕ್ಕೆ ಸೂಕ್ತ ರೀತಿಯ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಕೊಡುವುದು ಸಮಾಜದ ಆದ್ಯ ಕರ್ತವ್ಯವಾಗಿದೆ. ಒಬ್ಬ ಜನಪ್ರತಿನಿಧಿಯಾಗಿ ಈ ಯೋಚನೆ ,ಯೋಜನೆ ರೂಪಿಸುವುದಕ್ಕೆ ಹೆಮ್ಮೆಯಾಗುತ್ತದೆ ಎಂದೇ ಉದ್ಯೋಗ ಮೇಳವನ್ನು ಆಯೋಜಿಸಿದ್ದೇನೆ ಎಂದು ಸುನಿಲ್ ವಿ. ಕುಮಾರ್ ಅವರ ಎದೆ ತುಂಬಿದ ಮಾತು.

ಎಬಿವಿಪಿ ಸ್ಥಾಪನಾ ದಿನ

ಯಾರೇ ಕೂಡಾ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಪ್ರತಿಬಾರಿ ಸಂದರ್ಶನವನ್ನು ಎದುರಿಸುವಾಗಲೂ ಆತ್ಮವಿಶ್ವಾಸ ಕಳೆದುಕೊಂಡಿರಬಾರದು. ಎಂದು ಸಂದರ್ಶಕರಿಗೆ ಅವರ ಕಿವಿಮಾತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸ್ಥಾಪನಾ ದಿನವಾಗಿರುವ ಇಂದು ಈ ವಿಕಾಸ ಉದ್ಯೋಗ ಸೇತು ಕಾರ್ಯಕ್ರಮವನ್ನು ಆಯೋಜಿಸಿಲಾಗಿದೆ.
ಪಿ. ಯೂ. ಸಿ. ಹಾಗೂ ಪದವಿ ಮುಗಿಸಿರುವ ಒಟ್ಟು ಸುಮಾರು ಸಾವಿರದ ಐದು ನೂರು ಮಂದಿ ಯುವಕ, ಯುವತಿಯರು ಇಂದಿನ ಉದ್ಯೋಗ ಸೇತು ಕಾರ್ಯಕ್ರಮದಲ್ಲಿ ಹೆಸರು ನೋಂದಾಯಿಸಿರುತ್ತಾರೆ.
ಸಂಘ ಸಂಸ್ಥೆಗಳ ಮೂಲಕ ನೆರವೇರವ ಇಂಥ ಕಾರ್ಯಕ್ರಮಗಳು ಪರಿಪೂರಣವಾಗುವುದಕ್ಕೆ ಮುನ್ನವೇ ನಿರಾಸೆಯಲ್ಲಿ ಆರಂಭವಾಗುತ್ತದೆ. ಕಾರಣ, ಉದ್ಘಾಟನೆಯ ಬಳಿಕದ ಮೇಲ್ವಿಚಾರಣೆ, ವ್ಯವಸ್ಥೆ ಯಾವುದೂ ಹಿತವಾಗಿರುವುದಿಲ್ಲ. ಆ ನಿಟ್ಟಿನಲ್ಲಿ ಜನಪ್ರತಿನಿಧಿ ರಾಜಕಾರಣಿಯೊಬ್ಬನ ಈ ಚತುರತೆಯನ್ನು ಮನಸಾರೆ ಮೆಚ್ಚಲೇಬೇಕು. ಈ ಅಭೂತಪೂರ್ವ ಚಿಂತನೆಯನ್ನು ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿಯೂ ರೂಪಿಸುವುದಕ್ಕೆ ಅಲ್ಲಿನ ಜನಪ್ರತಿನಿಧಿಗಳು ಮುಂದಾಗಬೇಕು.

ಅಚ್ಚುಕಟ್ಟುತನ

ಸಂದರ್ಶನ ಕಾರ್ಯಕ್ರಮವನ್ನು ಬಹಳ ಸುವ್ಯವಸ್ಥಿತವಾಗಿ ಏರ್ಪಾಟು ಮಾಡಲಾಗಿರುವುದು ಪ್ರತಿಯೊಬ್ಬರನ್ನೂ ಖುಷಿಪಡಿಸಿದೆ. ಇಂಜಿನಿಯರಿಂಗ್ ಪದವೀಧರರಿಗೆ ಪ್ರತ್ಯೇಕ ಕಟ್ಟಡದಲ್ಲಿ ಸಂದರ್ಶನ ಮಾಡಿರುವುದು. ಇತರ ವಿಭಾಗದ ಪದವೀಧರರರಿಗೆ ಶಾಸಕ ಕಚೇರಿಯ ಕಟ್ಟಡವನ್ನೇ ಬಳಸಿದ್ದು ಯಾವುದೇ ತರದ ನೂಕುನುಗ್ಗಲು,ಇಕ್ಕಟ್ಟಿಗೆ ಅವಕಾಶವಿಲ್ಲವಾದಂತಾದುದು ಸಂದರ್ಶಕರಿಗೆ ಒಂದು ರೀತಿಯ ಆತ್ಮವಿಶ್ವಾಸದ ಹೆಚ್ಚುವಿಕೆಗೂ ಪ್ರೋತ್ಸಾಹ ಸಿಕ್ಕಂತಾಗಿದೆ.
ಕಾರ್ಕಳದಲ್ಲಿ ಹೊಸ ಬೆಳಕೊಂದು ಮೂಡಿದೆ!


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top