ಮಂಗಳೂರು: ಮಂಗಳೂರು ಲೋಕಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಬಿಲ್ಲವ ಮುಖಂಡರಾಗಿರುವ ನ್ಯಾಯವಾದಿ ಸಮಾಜಮುಖಿ ಚಿಂತಕ ಪದ್ಮರಾಜ್ ಅವರು ನಾಮಪತ್ರ ಸಲ್ಲಿಸಿದರು.
ಕೇಂದ್ರದ ಮಾಜಿ ಸಚಿವ, ಬಡವರ ಬಂಧು ಎಂದೇ ಗುರುತಿಸಿಕೊಂಡಿರುವ ಪಕ್ಷದ ಹಿರಿಯ ನೇತಾರ ಬಿ.ಜನಾರ್ಧನ ಪೂಜಾರಿ, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ಮುಖಂಡರುಗಳು,ಅಸಂಖ್ಯಾ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಲ್ಲಿ ನೆರೆದವರಿಗೆ ಗಮನ ಸೆಳೆದವರು ಬರ್ಕೆ ಯದ್ದು ಅಲಿಯಾಸ್ ಯಜ್ಞೇಶ್ವರ ಬರ್ಕೆ

ಒಂದು ಕಾಲಘಟ್ಟದಲ್ಲಿ ಮಂಗಳೂರಿನ ಅಂಡರ್ ವಲ್ಡ್೯ ನಲ್ಲಿ ಹೆಸರು ಮಾಡಿರುವ ಬರ್ಕೆ ಯದ್ದು ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರಾಗಿದ್ದಾರೆ.
ಕುದ್ರೋಳಿ ಗೋಕರ್ಣ ನಾಥ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಾ ಬಂದಿರುವ ಮಂಗಳೂರು ದಸರಾದಲ್ಲಿ ಬರ್ಕೆ ಹುಲಿವೇಷ ತಂಡಕ್ಕೆ ಅನುಮತಿ ನೀಡಿ ಸಂಪೂರ್ಣ ಸಹಕಾರ ನೀಡಿದಲ್ಲದೇ ನವದೇವಿಯ ಅನುಗ್ರಹ ಇರಲಿ ಎಂದು ಆಶೀರ್ವಾದ ನೀಡಿದವರು ಬಿ.ಜನಾರ್ಧನ ಪೂಜಾರಿ ಆಗಿದ್ದರು.
ಅಲ್ಲಿಂದ ತನ್ನ ಜೀವನದಲ್ಲಿ ಉತ್ತುಂಗ ಸ್ಥಾನಕ್ಕೇರಿದ ಬರ್ಕೆ ಯದ್ದು ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡರು.
ತಾನು ನಡೆದು ಬಂದ ದಾರಿಯ ಕಥನಾ ಕುರಿತು ಕೆಲವೊಂದು ಅನುಭವದ ಮಾತುಗಳನ್ನು ಖುದ್ದಾಗಿ ಬರ್ಕೆ ಯದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದನ್ನು ಸ್ಮರಿದಬಹುದಾಗಿದೆ.
ಈ ಎಲ್ಲ ವಿಚಾರಗಳು ಇಲ್ಲಿ ಪ್ರಸ್ತುತವೇ ಎನ್ನುವುದಕ್ಕಿಂತ ನನಗೆ ನೆರವಾದವರು ಯಾರು? ಅವರ ಕುರಿತು ಒಂದಿಷ್ಟು ಮೆಲುಕು ಹಾಕಿಕೊಂಡವರು ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ಅಂತವರಲ್ಲಿ ಬರ್ಕೆ ಯದ್ದು ಕೂಡಾ ಒಬ್ಬರು.

ಪದ್ಮರಾಜ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಿರಿಯ ನೇತಾರ ಜನಾರ್ಧನ ಪೂಜಾರಿ ಅಗಮಿಸಿದ್ದು, ಅವರನ್ನು ಬರ್ಕೆ ಯದ್ದು ಭೇಟಿಯಾಗಿ ಆಶೀರ್ವಾದ ಪಡೆದಿದ್ದು ಅಲ್ಲದೇ ಪದ್ಮರಾಜ್ ಅವರಿಗೆ ಹಸ್ತಲಾಘವ ನೀಡಿ ಶುಭ ಕೋರಿದರು.
(ಚಿತ್ರಗಳು : ಸುನೀಲ್ ಬಜಲಕೇರಿ)






































