ಮೂಲಭೂತವಾದಿಗಳ ಕೃತ್ಯಕ್ಕೆ ಮಹಿಳೆ ಆತ್ಮಹತ್ಯೆ : ಮೂವರು ಎಸ್ ಡಿ ಪಿ ಐ ಕಾರ್ಯಕರ್ತರ ಬಂಧನ

Picture of RB NEWS

RB NEWS

Bureau Report

ಕಣ್ಣೂರು(ಕೇರಳ) ಜೂನ್ 19 : ಅನ್ಯಧರ್ಮದ ವ್ಯಕ್ತಿಯೊಬ್ಬನ ಜೊತೆಗೆ ಮಾತನಾಡಿದ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿ ಗುಂಪೊಂದು ಅವಮಾನಿಸಿದ ಪರಿಣಾಮವಾಗಿ 40 ವರ್ಷದ ಮುಸ್ಲಿಂ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.‌ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಸ್ ಡಿ ಪಿ ಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್ 15ರ ಭಾನುವಾರ ಮಧ್ಯಾಹ್ನ ವೇಳೆಗೆ ಕಾಯಲೋಡ್ ಅಚಂಕರ ಚರ್ಚ್ ಬಳಿಯಲ್ಲಿ ಈ ಘಟನೆ ನಡೆದಿದೆ.

ಯುವಕನೊಬ್ಬನ ಜೊತೆಗೆ ರಜಿನಾ ಎಂಬಾಕೆ ಮಾತನಾಡಿದ್ದು, ಅದೇ ಸಂದರ್ಭದಲ್ಲಿ ಮೂಲಭೂತವಾದಿಗಳ ಗುಂಪು ಅಡ್ಡಗಟ್ಟಿ ಮಹಿಳೆಯನ್ನು ಅವಮಾನಿಸಿದ್ದಲ್ಲದೆ ಯುವಕನನ್ನು ನಿರ್ಜನ ಪ್ರದೇಶಕ್ಕೊಯ್ದು ಹಲ್ಲೆ ಮಾಡಿತ್ತು.

ತಾಲಿಬಾನ್ ಸಂಸ್ಕ್ರತಿ !

ಐದು ಗಂಟೆಗಳ ಕಾಲ ಕೂಡಿ ಹಾಕಿ ಹಲ್ಲೆಗೈದು ರಾತ್ರಿ ಎಂಟು ಗಂಟೆ ವೇಳೆಗೆ ಯುವಕನನ್ನು ಪರಿಸರದ ಎಸ್ ಡಿ ಪಿ ಐ ಕಚೇರಿಗೆ ಒಯ್ದಿದ್ದರು. ಅಲ್ಲಿಗೆ ಮಹಿಳೆ ರಜಿನಾ ಮತ್ತು ಆಕೆಯ ಮನೆಯವರನ್ನು ಕರೆಸಿ ವಾರ್ನಿಂಗ್ ಮಾಡಿ ರಾತ್ರಿ ವೇಳೆ ಬಿಟ್ಟು ಕಳಿಸಿದ್ದರು. ಯುವಕನ ಮನೆಯವರನ್ನೂ ಕರೆಸಿ ಎಚ್ಚರಿಕೆ ನೀಡಿದ್ದರು. ಈ ವೇಳೆ, ಎಸ್ ಡಿ ಪಿ ಐ ಕಾರ್ಯಕರ್ತರು ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಅವಮಾನಿಸಿದ್ದರು ಎನ್ನಲಾಗಿದೆ.

ಇದರಿಂದ ನೊಂದ ಮಹಿಳೆ ಜೂನ್ 17ರ ಮಂಗಳವಾರ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಈ ವೇಳೆ ಮೂವರು ಯುವಕರ ಹೆಸರನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟಿದ್ದಳು.

ಅದನ್ನು ಆಧರಿಸಿ ಪೊಲೀಸರು ರಫ್ತಾಸ್, ಮುಬಾರ್ಶಿ ಮತ್ತು ಫೈಸಲ್ ಎಂಬವರನ್ನು ಬಂಧಿಸಿದೆ. ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು ಅವರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top