ಮೂಡುಬಿದಿರೆ ಹೊರೆಕಾಣಿಕೆ: ವಾಹನ ಸಂಚಾರ ಮಾರ್ಗ ಬದಲಾವಣೆ

Picture of RB NEWS

RB NEWS

Bureau Report

ಮೂಡಬಿದರೆ : ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಪುತ್ತಿಗೆ ಇದರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಫೆ. 28 ಶುಕ್ರವಾರದಿಂದ ಮೊದಲ್ಗೊಂಡು ಮಾಚ್೯ 07ರಂದು ಸಂಪನ್ನಗೊಳಲಿರುವುದು.

ಆ ಪ್ರಯುಕ್ತ ಫೆ. 28-ರಂದು ಮಧ್ಯಾಹ್ನ 2.00 ಗಂಟೆಗೆ ಮೂಡಬಿದರೆ ಪೇಟೆಯಿಂದ ಹಸಿರು ಹೊರೆ ಕಾಣಿಕೆ ನಡೆಯಲಿದೆ.

ಹಸಿರು ಹೊರ ಕಾಣಿಕೆಯ ಮೂಡಬಿದರೆ ಮುಖ್ಯ ಪೇಟೆಯಿಂದ ಹೊರಡುವುದರಿಂದ ಸಾವಿರಾರು ಭಕ್ತಾದಿಗಳು ಹಾಗೂ ಹೊರೆ ಕಾಣಿಕೆ ಹೊತ್ತ ಹೆಚ್ಚಿನ ವಾಹನಗಳು ಸೇರುವ ನಿರೀಕ್ಷೆ ಇರುತ್ತದೆ.

ಆದುದರಿಂದ ಮಧ್ಯಾಹ್ನ 2.00 ಗಂಟೆಯ ನಂತರ ಮೂಡಬಿದರೆ ಪೇಟೆಯಲ್ಲಿನ ಸಂಚಾರ ಮಾರ್ಗದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ.

ಸಾರ್ವಜನಿಕರು ಮೂಡಬಿದರೆಯ ನಗರಕ್ಕೆ ಬಾರದೇ ಮೂಡಬಿದರೆಯ ಹೊರ ವರ್ತುಲಾ (ಬೈಪಾಸ್) ರಸ್ತೆಯಲ್ಲಿ ಹಾಗೂ ವಿದ್ಯಾಗಿರಿ- ಮಾಸ್ತಿಕಟ್ಟೆ – ಬೊಗ್ರುಗುಡ್ಡೆ –ಪೇಪರ್ ಮೀಲ್ ಒಳ ರಸ್ತೆಯಿಂದಾಗಿ ಹಸಿರು ಹೊರೆ ಕಾಣಿಕೆ ಮುಗಿಯುವ ವರೆಗೂ ಸಂಚರಿಸಿ ಸಹಕರಿಸಬೇಕಾಗಿ ಸಾರ್ವಜನಿಕರಲ್ಲಿ

ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top