ಮೂಡುಬಿದಿರೆಯಲ್ಲಿ ಶಾರದಾ ಮಹೋತ್ಸವ

Picture of RB NEWS

RB NEWS

Bureau Report

ತಾ.9 ರಂದು ಗಣ ಹೋಮ, ಶಾರದಾದೇವಿ ಪ್ರತಿಷ್ಠೆ, ಮಂಗಲ ವಾದ್ಯ ನಾದ ತರಂಗ, ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆ, ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ, ಕುಣಿತ ಭಜನಾ ಸಂಭ್ರಮ ನಡೆಯಲಿದೆ. ಸಂಜೆ ದುರ್ಗಾ ನಮಸ್ಕಾರ ಪೂಜೆ, ರಂಗ ಪೂಜೆಗಳು ನಡೆಯಲಿದೆ.

ತಾ.10ರಂದು ಚಂಡಿಕಾ ಹವನ, ಲಕ್ಷ ಕುಂಕುಮಾರ್ಚನೆ, ಭಕ್ತಿ ಗೀತೆ ಸ್ಪರ್ಧೆ, ಸಂಜೆ ಭಜನೆ, ವಿಶೇಷ ಅಷ್ಟಾವಧಾನ ಸೇವೆ, ದೀಪಾಲಂಕಾರ, ರಂಗ ಪೂಜೆಗಳು ನೆರವೇರಲಿವೆ.


ತಾ 11 ರಂದು ಆರು ವರ್ಷದ ಒಳಗಿನ ಮಕ್ಕಳಿಗೆ ಮುದ್ದು ಶಾರದೆ ಸ್ಪರ್ಧೆ, ವಿಸರ್ಜನಾ ಪೂಜೆ. ಸಂಜೆ ಗಂಟೆ 5:30 ರಿಂದ ಶೋಭಾ ಯಾತ್ರೆ ಹೊರಟು ಅಲಂಕಾರ ಮಾನಸ ಗಂಗೋತ್ರಿಯಲ್ಲಿ ಜಲ ಸ್ತಂಭನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top