ಮಾಸಿಹೋದ ಸ್ವಾಗತ ಕಮಾನ್! ಪ್ರಜ್ಞಾವಂತ ನಾಗರಿಕರಿಂದ ಸ್ಪಂದನೆ

Picture of RB NEWS

RB NEWS

Bureau Report


ಕಾರ್ಕಳ: ಕಾರ್ಕಳದ ನಗರದ ಅಭಿವೃದ್ಧಿಗಾಗಿ ಭಾರೀ ಬೆಲೆ ತೆತ್ತು ಅಳವಡಿಸಲಾಗಿರುವ ಸ್ವಾಗತ ಕಮಾನ್‌ನ ನಿರ್ವಹಣೆ ಇಲ್ಲದೇ ಹೋದರಿಂದ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಕಳೆದ ಬಾರಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ರಾಜ್ಯ ಸರಕಾರ ಬಿಡುಗಡೆಗೊಳಿಸಿ ವಿಶೇಷ ಅನುದಾನದಲ್ಲಿ ಕಾರ್ಕಳ ಆಸುಪಾಸಿನಲ್ಲಿ ನಾಲ್ಕು ಕಡೆಗಳಲ್ಲಿ ಬೃಹತ್ ಸ್ವಾಗತ ಕಮಾನ್ ಅಳವಡಿಸಲಾಗಿತ್ತು.


ಜೋಡುರಸ್ತೆ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಈ ಹಿಂದೆ ಇದ್ದ ಸ್ವಾಗತ ಕಮಾನ್ ತೆರವುಗೊಳಿಸಿ ಸನ್ನಿಹದ ಹಾಡಿಯೊಂದರಲ್ಲಿ ಶೇಖರಣೆ ಮಾಡಲಾಗಿತ್ತು. ಸರ್ವಋತುಗಳಲ್ಲೂ ಆಹೋರಾತ್ರಿ ಆ ಹಾಡಿಯಲ್ಲಿ ಬಿದ್ದುಕೊಂಡಿದ್ದ ಸ್ವಾಗತ ಕರ್ಮಾನ್ ತುಕ್ಕು ಹಿಡಿದಿದೆ.
ಈ ವಿಚಾರವು ಕಾರ್ಕಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಹಲವು ಭಾರೀ ಪ್ರಸ್ತಾಪವಾಗಿದ್ದು, ಈ ಹಿಂದೆ ಇದ್ದ ಸ್ವಾಗತ ಕಮಾನ್‌ನನ್ನು ವಿಸ್ತರಿಸುವಂತೆ ಸದಸ್ಯರು ಒತ್ತಾಯಿಸಿದ್ದು, ಅದಕ್ಕಾಗಿ ಅನುದಾನದ ಕೊರತೆ ಇರುವುದುನ್ನು ಅಂದಿನ ಸಭೆಯಲ್ಲಿ ಮುಖ್ಯಾಧಿಕಾರಿ ತಿಳಿಯಪಡಿಸಿದ್ದರು. ಆದರೆ ಇದುವರೆಗೆ ಪರಿಹಾರ ಕಾಣದೇ ಸ್ವಾಗತ ಕಮಾನ್ ಪಾಳುಬಿದ್ದುಕೊಂಡಿದೆ.


ಉಳಿದ ಎರಡು ಸ್ವಾಗತ ಕಮಾನುಗಳು ಸಂಪೂರ್ಣ ತುಕ್ಕು ಹಿಡಿದು ಯಥಾಸ್ಥಿತಿಯಲ್ಲಿ ಇದೆ. ಸ್ವಾಗತ ಕಮಾನ್ ನಲ್ಲಿ ದೂರದ ಊರುಗಳಿಗೆ ತೆರಳುವ ಹಾಗೂ ಕಿ.ಮೀ ದೂರದ ವಿವರಗಳ ಮಾಸಿ ಹೋಗಿದೆ. ಇದರಿಂದ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುದಿಲ್ಲ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top