ಮಹಿಳಾ ಒಕ್ಕೂಟದ ನೂತನ ಸಾಲಿ‌ನ ಅಧ್ಯಕ್ಷರಾಗಿ ಯಶೋಧ ಎಸ್ ಶೆಟ್ಟಿ ಆಯ್ಕೆ

Picture of RB NEWS

RB NEWS

Bureau Report

ಕಾರ್ಕಳ : ಮಹಿಳಾ ಒಕ್ಕೂಟ 2024 -25 ನೇ ಸಾಲಿನ ಅಧ್ಯಕ್ಷರಾಗಿ ಯಶೋಧ ಎಸ್‌. ಶೆಟ್ಟಿ ಸರ್ವಾನುಮತದಿಂದ ಪುನರಾಯ್ಕೆಗೊಂಡರು.

ಕಾರ್ಯದರ್ಶಿಯಾಗಿ ಅರುಂಧತಿ ಬಿ ಆಚಾರ್ ಉಪಾಧ್ಯಕ್ಷರಾಗಿ ಸಾವಿತ್ರಿ ಮನೋಹರ್ ಕೋಶಾಧಿಕಾರಿಯಾಗಿ ಶ್ರೀಲತಾ ಶರ್ಮ, ಜೊತೆ ಕಾರ್ಯದರ್ಶಿಯಾಗಿ ಶೋಭಾ ಪ್ರಸಾದ್ ಕಾರ್ಯಕಾರಿ ಸಮಿತಿಯಲ್ಲಿ ರತ್ನಾವತಿ ನಾಯಕ್, ಶಾಂತ ಕೆ, ಜಯಂತಿ ಶೆಟ್ಟಿ, ವಸಂತಿ ಸುವರ್ಣ, ಜ್ಯೋತಿ ಲಕ್ಷ್ಮಿ, ಕಾಂತಿ ಶೆಟ್ಟಿ ಆಯ್ಕೆಗೊಂಡರು.

ವಿವಿಧ ಮಹಿಳಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ರತ್ನಾವತಿ ಧನ್ಯವಾದ ನೀಡಿದರು.ಮಹಿಳಾ ಒಕ್ಕೂಟದ ಮಹಾಸಭೆಯಲ್ಲಿ ಸಾಂತ್ವನ ಕೇಂದ್ರದ ಸಿಬ್ಬಂದಿಗಳು ಹಾಗೂ ಶಿಶು ಪಾಲನ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.

ಮಹಿಳಾ ಒಕ್ಕೂಟದ ಕಚೇರಿಯಲ್ಲಿ ಆಯೋಜಿಸಲಾಗಿದ್ದ
ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ನಡೆಸಲಾಯಿತು.

ಕಾರ್ಕಳ ತಾಲೂಕು ಮಹಿಳಾ ಒಕ್ಕೂಟ (ರಿ) ಇದರ 2023 – 24ನೇ ಸಾಲಿನ ಮಹಾಸಭೆಯು ಒಕ್ಕೂಟದ ಕಚೇರಿಯಲ್ಲಿ ಒಕ್ಕೂಟದ ಅಧ್ಯಕ್ಷೆ ಯಶೋಧ ಎಸ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿತು.

2023 -24ನೇ ಸಾಲಿನ ವರದಿಯನ್ನು ಅರುಂಧತಿ ಬಿ ಆಚಾರ್ ವಾಚಿಸಿದರು. ಜಯಂತಿ ಶೆಟ್ಟಿ ಸ್ವಾಗತಿಸಿದರು.

2024 -25 ನೇ ಸಾಲಿನ ಅಧ್ಯಕ್ಷರಾಗಿ ಯಶೋಧ ಎಸ್‌. ಶೆಟ್ಟಿ ಸರ್ವಾನುಮತದಿಂದ ಪುನರಾಯ್ಕೆಗೊಂಡರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top