ಮಕ್ಕಳಿಬ್ಬರ ಬರ್ಬರ ಹತ್ಯೆ ಪ್ರಕರಣ: ಎನ್ ಕೌಂಟರ್ ಗೆ ಬಲಿಯಾದವನ ಸಹೋದರನ ಬಂಧನ

Picture of RB NEWS

RB NEWS

Bureau Report

ಲಕ್ನೋ : ಉತ್ತರ ಪ್ರದೇಶದ ಬದೌನ್‌ನಲ್ಲಿ ಬರ್ಬರರಾಗಿ ಹತ್ಯೆಗೈದ ಕ್ಷೌರಿಕ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ ಬೆನ್ನಲ್ಲೇ ಸಾಜಿದ್‌ನ ಸಹೋದರ ಮೊಹಮ್ಮದ್ ಜಾವೇದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಮೊಹಮ್ಮದ್ ಜಾವೇದ್ ಎರಡನೇ ಆರೋಪಿಯಾಗಿದ್ದಾನೆ. ಆರೋಪಿಯೇ ಪೊಲೀಸರಿಗೆ ಶರಣಾಗಿದ್ದಾನೆ. ಭೀಕರ ಕೃತ್ಯ ಎಸಗಲು ಕಾರಣವೇನು ಎಂಬುದನ್ನು ತಿಳಿಯಲು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

11 ವರ್ಷದ ಆಯುಷ್ ಹಾಗೂ 6 ವರ್ಷದ ಅಹಾನ್‌ನನ್ನು ಕೊಂದ ಸಾಜಿದ್‌ನನ್ನು ಪೊಲೀಸರು ಎನ್‌ಕೌಂಟರ್ ಮಾಡಿದ ಬಳಿಕ ಮೊಹಮ್ಮದ್ ಜಾವೇದ್‌ ತಲೆಮರೆಸಿಕೊಂಡಿದ್ದನು.

ಈ ಬೆಳವಣಿಗೆಯಿಂದಾಗಿ ಪೊಲೀಸರು ಮನವಿ ಮಾಡಿಕೊಂಡು ನಿನ್ನನ್ನು ಎನ್‌ಕೌಂಟರ್ ಮಾಡುವುದಿಲ್ಲ, ಶರಣಾಗು ಎಂದು ಗಡುವು ನೀಡಿದ್ದರು.

ಪೊಲೀಸರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಪ್ರಕರಣದ 2 ನೇ ಆರೋಪಿ ಮೊಹಮ್ಮದ್ ಜಾವೇದ್ ಬರೇಲಿಯ ಬರದಾರಿಯಲ್ಲಿರುವ ಸ್ಯಾಟಲೈಟ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.

“ಮೊಹಮ್ಮದ್ ಜಾವೇದ್‌ನನ್ನು ಬರೇಲಿಯಿಂದ ಬದೌನ್‌ಗೆ ಕರೆತರಲಾಗುತ್ತಿದೆ. ಭೀಕರ ಹತ್ಯೆಗೆ ಏನು ಕಾರಣ ಎಂಬ ಕುರಿತು ವಿಚಾರಣೆ ನಡೆಸಲಾಗುತ್ತದೆ” ಎಂದು ಪೊಲೀಸರು ತಿಳಿಸಿದ್ದಾರೆ.
:

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top