ಮಂಗಳೂರಿನಿಂದ ಕಾಸರಗೋಡಿಗೆ ದಾಖಲೆ ರಹಿತ 6.8 ಲಕ್ಷ ನಗದು ಸಾಗಾಟ: ಅಬಕಾರಿ ದಳಕ್ಕೆ ಸಿಕ್ಕುಬಿದ್ದ ಯುವಕ

Picture of RB NEWS

RB NEWS

Bureau Report

ಕಾರ್ಕಳ : ದಾಖಲೆರಹಿತವಾಗಿ ಸಾಗಿಸಲಾಗುತ್ತಿದ್ದ 6, 80, 600ರೂ ನಗದು ಸಹಿತ ಯುವಕನೋರ್ವ ಮಂಜೇಶ್ವರದಲ್ಲಿ ಅಬಕಾರಿ ದಳದ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಕ್ರಿಸ್ಮಸ್ – ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕಾಸರಗೋಡಿಗೆ ಮದ್ಯ, ಮಾದಕವಸ್ತು ಸಾಗಿಸುವುದನ್ನು ತಡೆಯಲೆಂದು ಅಬಕಾರಿ ದಳ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸುವ ವೇಳೆ ಡಿ.18ರಂದು ಸಂಜೆ ಈ ಕಾರ್ಯಾಚರಣೆ ನಡೆದಿದೆ.

ದಾಖಲೆರಹಿತವಾಗಿ ಹಣ ಸಾಗಿಸುತ್ತಿದ್ದ ಬದಿಯಡ್ಕ ಸಮೀಪದ ಪಿಲಾಂಕಟ್ಟೆ ನಿವಾಸಿ ಮಣಿ ಪ್ರಶಾಂತ್ (27) ವಶಕ್ಕೆ ತೆಗೆದು ಮಂಜೇಶ್ವರ ಪೋಲೀಸರಿಗೆ ಹಸ್ತಾಂತರಿಸಲಾಗಿದೆ. ಈತನ ವಿಚಾರಣೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ಇನ್ಸ್ ಸ್ಪೆಕ್ಟರ್ ಕೆ.ವಿ.ಸುರೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಕ್ರಿಸ್ಮಸ್ -ನ್ಯೂ ಇಯ‌ರ್ ಆಚರಣೆಗಳಂಗವಾಗಿ ಕಾಸರಗೋಡಿಗೆ ಕರ್ನಾಟಕ ಭಾಗದಿಂದ ಭಾರೀ ಪ್ರಮಾಣದ ಮದ್ಯ, ಮಾದಕ ವಸ್ತು ಸಾಗಾಟವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಪೋಲೀಸ್‌ ಮತ್ತು ಅಬಕಾರಿ ದಳ ಪ್ರತ್ಯೇಕವಾಗಿ ವಾಹನ ತಪಾಸಣೆ ಸಹಿತ ಕಾರ್ಯಾಚರಣೆ ಆರಂಭಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top