[t4b-ticker]

ಮಂಗಳೂರಿಗೆ ಸಂಭವನೀಯ ಬಿಜೆಪಿ ಅಭ್ಯರ್ಥಿ ಕೇಶವ ಬಂಗೇರ !

Picture of RB NEWS

RB NEWS

Bureau Report

ಮಂಗಳೂರು ಲೋಕಸಭಾ ಅಭ್ಯರ್ಥಿ ಯಾರಾಗುವರೆಂಬ ಗೊಂದಲವಿದೆ ಎಂದು ಬರೆದಿರುವ ನಾನು, ಗೊಂದಲವನ್ನು ಹಿಂಬಾಲಿಸಿದಾಗ ಸಿಕ್ಕಿರುವ ನಿಧಿ ಕೇಶವ ಬಂಗೇರ.

ಯಾರೀ ಕೇಶವ ಬಂಗೇರ ಎಂದರೆ ಮಂಗಳೂರು ಗೋಕರ್ಣನಾಥ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪನಾಗಿ ಕೆಲಸ ಮಾಡಿತ್ತಿರುವ ಪ್ರಖಂಡ ವಾಗ್ಮಿ! ಕಂಚಿನ ಕಂಠದ ಕೇಶವ ಬಂಗೇರ ಉಚ್ಚರಿಸುವ ಪ್ರತೀ ಶಬ್ಧವು ಕೂಡಾ ಠೇಣ್ ಠೇಣ್ ಎಂದು ಕಿವಿಗಪ್ಪಳಿಸುತ್ತದೆ,ಸ್ವತಃ ವಿಕಲಚೇತನನಿಗೂ ಕೇಳಿಸಿಕಂಡ ಅರಿವಾಗುತ್ತದೆ.

ಕೇಶವ ಬಂಗೇರ,ಪ್ರಾಧ್ಯಾಪಕರು,ಗೋಕರ್ಣನಾಥೇಶ್ವರ ಕಾಲೇಜು,ಮಂಗಳೂರು

**************************

ಹರೀಶ್ ಪೂಂಜಾರಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಟಿಕೇಟೇ ನಿರ್ಧಾರವಾಗಿರಲಿಲ್ಲ.ಆ ಕಲಂನಲ್ಲಿ ಕೇಶವ ಬಂಗೇರ ಅವರ ಹೆಸರು ಕುಳಿತಿತ್ತು. ಸ್ಥಳೀಯ ಆಜಾನುಭಾಹು ಪ್ರಭಾವಿಯೊಬ್ಬರ ಒತ್ತಡಕ್ಕೆ ಪಕ್ಷ ಮಣಿಯಿತೇ ಹೊರತು ಯಾವ ಶೆಟ್ಟಿ ಗ್ರೂಪ್ ನವರ ಅಮಿತ್ ಷಾ ಸ್ನೇಹ ಪ್ರಭಾವ ಕೂಡಾ ಅಲ್ಲ.

ಅದಕ್ಕೂ ಮೊದಲು ಪ್ರತಾಪ ಸಿಂಹ ನಾಯಕರ ಹೆಸರಿನ ಮೇಲ್ಗಡೆ ಈ ವಾಗ್ಮಿಯ ಹೆಸರೂ ಬರೆದಿತ್ತು. ಆ ಹಿರಿಯ ನಾಯಕರಿಗೆ ಯೋಗ್ಯತೆಯಿದೆ,ಅವರನ್ನು ಹಿಂದಿಕ್ಕಲು ನಾನು ಸುತರಾಂ ಇಚ್ಚಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹುದ್ದೆಯನ್ನೂ ತ್ಯಾಗ ಮಾಡಿದವರು ಈ ಅಪ್ಪಟ ಹಿಂದುತ್ವವಾದಿ,ವಿಶ್ವ ಹಿಂದೂ ಪರಿಷತ್ತಿನ ರಾಷ್ಟೀಯ ಉಪಾಧ್ಯಕ್ಷ ಮಂಗಳೂರು ವಿಭಾಗದ ಮುಖಂಡ ಲೆಕ್ಟರರ್ ಕೇಶವ ಬಂಗೇರ.

ಇಂದಿಗೆ ಇಪ್ಪತ್ತು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ರಪ್ಪಂತ ಹೊಳೆಯತೊಡಗಿದ ಕೇಶವ ಬಂಗೇರ ಅವರು ಮೊದಲ ಪ್ರಯತ್ನದಲ್ಲೇ ತಾಲ್ಲೂಕ್ ಪಂಚಾಯತ್ ಸದಸ್ಯರಾದರು.ನಂತರ ರಾಜಕೀಯದಿಂದ ದೂರವಿದ್ದು ಸಂಘಟನೆಯಲ್ಲೇ ತೊಡಗಿಸಿಕೊಳ್ಳುತ್ತ ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡರು.

ಹಿಂದೂ ಧರ್ಮ,ಹಿಂದುತ್ವ,ದೈವತ್ವ,ಭಾರತ ತತ್ವ ಎಲ್ಲವನ್ನೂ ನಿರರ್ಗಳವಾಗಿ,ಅಸ್ಖಲಿತವಾದ ಮಾತಿನಲ್ಲಿ ವೇದಿಕೆ ಮೇಲೆ ನಿಂತು  ಬಿತ್ತಿ ಪ್ರಸಾರ ಮಾಡುವ ಕೇಶವ ಬಂಗೇರ ಮುಂದಿನ ಲೋಕಸಭಾ ಅಭ್ಯರ್ಥಿಯಾಗುತ್ತಾರೆ ಎಂದರೆ ಅಲ್ಲೊಂದು ಅಚ್ಚರಿ ಇದೆ.!

ಈ ಬಂಗೇರ ಅವರು ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಅವರ ಪರಿಶುದ್ಧ ಬಂಟ ಅಥವಾ ಭಕ್ತ.ಆದ ಕಾರಣವೇ ನಳಿನ್ ಕುಮಾರ್ ಅವರು ಬಂಗೇರ ಅವರನ್ನು ತನ್ನ ಬೆಂಕಿಪೊಟ್ಟಣದಲ್ಲಿನ ಒಂದೇ ಒಂದು ಕಡ್ಡಿಯನ್ನಾಗಿರಿಸಿಕೊಂಡಿದ್ದಾರೆ. ತಾನೊಂದು ವೇಳೆ ಅವಕಾಶ ವಂಚಿತನಾದಲ್ಲಿ ತನ್ನವನೇ ಆಗಿರುವ ಬಂಗೇರ ಸಂಸದನಾದಲ್ಲಿ ಅದು ತನಗೂ ಪ್ರಯೋಜನ ಎನ್ನುವ ಭದ್ರವಾದ ಲೆಕ್ಕಾಚಾರ ನಳಿನ್ ಕುಮಾರ್ ಹಾಕಿರುವುದು ಸತ್ಯ. ಬಿಲ್ಲವ ಟ್ರಂಪ್ ಕಾರ್ಡ್ ಎಸೆಯುವುದರ ಜೊತೆಗೆ ಕಡ್ಡಿ ಗೀರುವ ಎಲ್ಲ ಲೆಕ್ಕಾಚಾರ ನಳಿನ್ ಕುಮಾರ್ ಅವರದ್ದು.

ನಳಿನ್ ಅವರ ಪಕ್ಕಾ ಬೆಂಬಲಿಗರಾದ ಬೆಳ್ತಂಗಡಿಯ ಹರೀಶ್ ಪೂಂಜ,ಮಂಗಳೂರು ದಕ್ಷಿಣದ ಡಾ.ಭರತ್ ಶೆಟ್ಟಿಯವರಿಬ್ಬರೂ ಕೂಡಾ ಕ್ಯಾ. ಬೃಜೇಶ್ ಚೌಟ ಅವರಿಗೆ ಟಿಕೆಟ್ ಕೊಡುವಲ್ಲಿ ಪಕ್ಕಾ ವಿರೋಧಿಗಳಾಗಿದ್ದಾರೆ, ಜೊತೆಗೆ ಸಂಘಟನೆಯವರೊಬ್ಬರೂ ಸೇರಿಕೊಂಡಿದ್ದರು.ಅದೇ ತಂಡ ಮೊನ್ನೆ ಬೆಂಗಳೂರಿಗೆ ಹೋಗಿ ರಾಜ್ಯ ಬಿಜೆಪಿ ಅಧ್ಯಕ್ಷ ಅಲಿಯಾಸ್ ಬಿ. ಎಸ್. ಯೆಡಿಯೂರಪ್ಪನವರ ಪುತ್ರ ವಿಜೇಂದ್ರ ಅವರನ್ನು ಭೇಟಿಯಾಗಿದ್ದೂ ಬಹಿರಂಗ ಸತ್ಯ.

 ಜಿಲ್ಲೆಯ ಆರ್ ಎಸ್ ಎಸ್ ನಲ್ಲಿ ಎತ್ತರದ ವ್ಯಕ್ತಿಯಾಗಿರವ,ಅಂತಿಮ ತೀರ್ಪು ಬರೆಯುವ ಹೊಸದಿಗಂತ ಪ್ರಕಾಶನದ  ಪಿ. ಎಸ್. ಪ್ರಕಾಶ್ ಕೂಡಾ ಈ ಕೇಶವ ಬಂಗೇರ ಅವರನ್ನೆ ಬೆಂಬಲಿಸುತ್ತಿರುವ ಬೆಳಕು ಹೊರಗೆ ಹರಿದು ಬಂದಿರುತ್ತದೆ.ಇಲ್ಲಿ ಪ್ರಧಾನ ಹುಡುಕಾಟ ಏನಿರಬೇಕು ಎಂದರೆ ಪಿ. ಎಸ್. ಪ್ರಕಾಶ್ ಅವರು ಯಾರ ಹೆಸರಿನ ಕೆಳಗೆ ತನ್ನ ರುಜು ಹಾಕುವುದು ಎಂದು.ವಿಶ್ವ ಹಿಂದೂ ಪರಿಷದನ್ನು ಹಿಂದಿಡುವುದಕ್ಕೆ ಬಯಸದ ಆರೆಸ್ಸೆಸ್ ಸಂಘಟನೆಯು ಈ ಬಾರಿ ಅದೇ ತಂಡವನ್ನು ಬೆಂಬಲಿಸುವುದಂತೂ ಸಾಧ್ಯವಿದೆ.

ಆರ್ ಎಸ್ ಎಸ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಎರಡನೆಯ ಹಾಗೂ ಮೂರನೆಯ ಸ್ಥಾನದಲ್ಲಿರುವ ಹೊಸಬಾಳೆ ಮತ್ತು ಮುಕುಂದ ಅವರುಗಳು ಸಹ ಕೇಶವ ಬಂಗೇರರಿಗೇ ಮುದ್ರೆಯೊತ್ತುವುದು ಬಹತೇಕ ನಿಶ್ಚಿತ.ಈ ಬಾರಿ ಕರ್ನಾಟಕದ ಆಯ್ಕೆಯಲ್ಲಿ ಮುಕುಂದ ಅವರೇ ಪ್ರಮುಖರಾಗಲಿದ್ದಾರೆ.ಹೊಸಬಾಳೆ ಮತ್ತು ಬಿ. ಎಲ್. ಸಂತೋಷ್ ಅವರು ಭಾರೀ ಗೆಳೆಯರಾಗಿರುವುದರಿಂದ ಕಲ್ಲಡ್ಕ ಡಾಕ್ಟರರಿಗೂ ಹೊಸಬಾಳೆಯವರಿಗೂ ಅಷ್ಟಕ್ಕಷ್ಟೆ ಆಗಿರುವುದರಿಂದ ಬೃಜೇಶ್ ಚೌಟರಿಗೆ ಬೆಂಬಲಿಸುವ ಡಾಕ್ಟರರಿಗೆ ಮುಖಭಂಗ ಮಾಡುವುದಕ್ಕೂ ಅವಕಾಶ ನಿರ್ಮಾಣ ಮಾಡುತ್ತಿದ್ದಾರೆಯೆಂಬುದು ಗೋಚರವಾಗುತ್ತಿದೆ.

ಬೃಜೇಶ್ ಚೌಟ ಅವರು ಉನ್ನತ ಹುದ್ದೆಯಲ್ಲಿದ್ದು ಬಂದವರಾಗಿ ಹಿಂದುತ್ವವನ್ನು ಅಥವಾ ಹಿಂದೂಗಳನ್ನು ಬಲಿಷ್ಠರನ್ನಾಗಿ ಮಾಡುವ ಹೋರಾಟಕ್ಕೆ ಇಳಿದಿರುವುದಾದರೂ ಅಭ್ಯರ್ಥಿ ಆಯ್ಕೆ ವಿಷಯ ಬಂದಾಗ ಸಂಘದವರು ತುಂಬಾನೆ ಅಂತರ ಕಾಪಾಡಿಕೊಳ್ಳುತ್ತಾರೆ.

ಬಿಜೆಪಿಯು ತನ್ನ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಆರ್ ಎಸ್ ಎಸ್ ಗೂ ಕೆಲವು ಸೀಟು ಕೋಟ ಕೊಡುತ್ತಲೇ ಇದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರಕ್ಕೆ ಪುಷ್ಪಾ ಗೌಡ ಅವರನ್ನು ಬಿಜೆಪಿ ಅಭ್ಯರ್ಥಿ ಮಾಡಿ ಭಾರೀ ಮುಖಭಂಗ ಅನುಭವಿಸಿದ ಸಂಘದ ಸಂಘಟನಾ ಪ್ರಮುಖ ರಾಜೇಶ್ ಅವರಿಗೆ ಈ ಬಾರಿ ಆಯ್ಕೆ ಸಮಿತಿಯಲ್ಲಿ ಅವಕಾಶವಿದ್ದರೂ ಲೆಕ್ಕಕ್ಕಿಲ್ಲ ಅಷ್ಟೆ.ಅವರು ಕೂಡಾ ಕೇಶವ ಬಂಗೇರ ಅವರನ್ನೇ ಬೆಂಬಲಿಸುತ್ತಿದ್ದಾರೆ.

ಕ್ಯಾ. ಬೃಜೇಶ್ ಚೌಟ ಅವರು ಭಾರೀ ಘನಸ್ಥಿಕೆಯಲ್ಲೇ ಇದ್ದು ಸ್ವಯಂ ಶಿಸ್ತು ಪಾಲಿಸಿಕೊಂಡೇ ಇದ್ದಾರೆ. ಟಿಕೇಟು ಸಿಗಲೇಬೇಕು ಎಂದು ಮೈ ಎಲ್ಲ ಪರಚಿಕೊಳ್ಳುತ್ತಿಲ್ಲ.ಉನ್ನತವಾದ ಹುದ್ದೆ ಹಾಗೂ ಸ್ಥಾನಮಾನದಲ್ಲಿದ್ದ ಚೌಟ ಅವರು ಈ ಹೊತ್ತಿನವರೆಗೂ ಟಿಕೆಟ್ ವಿಚಾರ ತನಗೇನೂ ತಿಳಿದಿಲ್ಲ ಎನ್ನುತ್ತಾರೆ.

ಆರ್ ಎಸ್ ಎಸ್ ಎಂಬ ಗುರು ಗ್ರಹದ ಬೆಂಬಲ ಕೇಶವ ಬಂಗೇರ ಮೇಲೆ ನೇರವಾಗಿ ಬೆನ್ನಿಗೆ ಬಿದ್ದಿದೆ.ಬಿಲ್ಲವರ ಗುಂಪಿನಲ್ಲಿ ಅವರು ಕೂಡಾ ಪ್ರಚಾರಕ್ಕೆ ಸಿಗದ ಅನಾದೃಶ್ಯ ಮುಖಂಡನಾಗಿಯೇ ಇದ್ದಾರೆ.

ಕರಾವಳಿ ಮಂಗಳೂರಿನ ಬಿಲ್ಲವ ಕುಟುಂಬದ ಪ್ರತೀ ಯುವಕ ಯುವತಿಯರೂ ಬಿಜೆಪಿ ಮತ್ತದರ ಬೆಂಬಲದ ಸಂಘಟನೆಗಳಲ್ಲಿ ಸಕ್ರಿಯರಾಗಿರುವುದರಿಂದ  ಪದವೀಧರ ಬಿಲ್ಲವ ಅಭ್ಯರ್ಥಿಯನ್ನೇ ಕೊಟ್ಟು  ಸೀಟು ಗೆಲ್ಲುವ ಲೆಕ್ಕಾಚಾರ ಆರ್ ಎಸ್ ಎಸ್ ಮುಖಂಡರದ್ದು.

ಜಾತಿಗೆ ಜಾತಿ ಪಗೆ;ನಾಯಿಗೆ ನಾಯಿ ಪಗೆ (ಪಗೆ=ವೈರತ್ವ) ಎಂಬ ನಾಣ್ಣುಡಿಗೆ ಈ ಅಭ್ಯರ್ಥಿ ಆಯ್ಕೆಯಲ್ಲಿ ನಳಿನ್ ಕುಮಾರ್ ಆಟ ಬೆಳಕಿಗೆ ಬಂದಿದೆ.!

ಇನ್ನೊಬ್ಬ ಬಂಟ ವ್ಯಕ್ತಿ ಸಂಸದನಾಗುವುದರಿಂದ ಮುಂದೆ ತಾನು ಅಕ್ಷರಶಃ ಮೂಲೆಗುಂಪಾಗಲಿದ್ದೇನೆ ಎನ್ನುವ ಸತ್ಯಾಂಶದ ಹಿಂಜರಿಕೆ ಚೌಟರನ್ನು ಸಾರಸಗಾಟನಾಗಿ ವಿರೋಧಿಸಿ ಕೇಶವ ಬಂಗೇರ ಅವರನ್ನು ಎತ್ತಿ ತಂದು ಮುಂದಿಟ್ಟಿದ್ದಾರೆ.ಒಂದೇ ಕಲ್ಲಿನಿಂದ ಎರಡು ಹಕ್ಕಿ ಉರುಳಿಸುವ ಬೇಟೆಗಾರಿಕೆ ನಳಿನಣ್ಣನವರದ್ದು,ಸತ್ಯ!

ಈ ಬಾರಿ ಬಿಜೆಪಿಯಲ್ಲಿ ಬಿಲ್ಲವರಿಗೇ  ಲೋಕಸಭಾ ಟಿಕೆಟ್ ಕೊಡಬೇಕೆನ್ನುವ ಬಲವಾದ ಒತ್ತಡ,ಇನ್ನೊಂದು ಕಡೆ ನಳಿನ್ ಕುಮಾರ್ ಕಟೀಲು ಸ್ಪರ್ಧಿಸಿದ್ದೇ ಆದರೆ ಅಭ್ಯರ್ಥಿಯ ಧೂಳೀಪಟ ಖಚಿತ ಅನ್ನುವ ಮುನ್ಸೂಚನೆಗಳು ಪಕ್ಷದ ಮುಖಂಡರನ್ನು ತುಂಬಾ ಚಿಂತನೆಗೆ  ತಂದಿದೆ.

ಕುದ್ರೋಳಿ ಗೋಕರ್ಣನಾಥೇಶ್ವರ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಕೇಶವ ಬಂಗೇರ ಅವರಿಗೆ ಲೋಕಸಭಾ ಅಭ್ಯರ್ಥಿ ಟಿಕೆಟ್ ಗೊರಕುವುದು ಖಚಿತವೆಂದೇ ಹೇಳಬಹುದು.

  • ವಿ. ಕೆ. ವಾಲ್ಪಾಡಿ,ಬೆಂಗಳೂರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top